Monday 12th, May 2025
canara news

ಕೆನರಾ ದೈವಜ್ಞ ಅಸೋಸಿಯೇಶನ್ ಮುಂಬಯಿ ಸಂಭ್ರಮಿಸಿದ ವಾರ್ಷಿಕ ಸ್ನೇಹಮಿಲನ

Published On : 09 Jan 2018   |  Reported By : Rons Bantwal


ಸೇವೆ ಮೂಲಕ ಸಮಾಜದಲ್ಲಿ ಗುರುತಿಸಿ ಕೊಳ್ಳೋಣ : ಕಮಲಾಕರ್ ಎಂ.ಶೇಠ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.09: ಸಮಾಜದಲ್ಲಿ ಒಗ್ಗಟ್ಟನ್ನು ರೂಪಿಸುವುದು ಅವಶ್ಯವಾಗಿದೆ. ಆ ಮೂಲಕ ಸ್ವಸಮಾಜದ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ನಾವು ಸ್ವಯಂಪ್ರೇರಿತರಾಗಿ ಸುಲಭವಾಗಿ ತಿಳಿದು ಕೊಳ್ಳಬದುದು. ಇದಕ್ಕಾಗಿ ಸಮಾಜದ ಪ್ರತಿಯೊಬ್ಬರು ಸಂಸ್ಥೆಯೊಡನೆ ಸ್ಪಂದಿಸಬೇಕು. ಸಮಾಜದಿಂದ ದೊರಕುವ ಸೌಲಭ್ಯಗಳನ್ನು ಪಡಕೊಂಡು ಸಮಾಜವನ್ನು ಪ್ರಗತಿ ಪಥದತ್ತ ಮುನ್ನಡೆಸಬೇಕು. ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡಿದಾಗಲೇ ಸೇವೆ ಸಮಾಧಾನಕರ ಆಗಿರುತ್ತದೆ. ಅವಾಗಲೇ ಸೇವೆ ಫಲದಾಯಕ ಆಗಿ ಸೇವೆ ಪಡೆದವರೂ, ಸೇವೆಗೈದವರೂ ನೆಮ್ಮದಿಯಾಗಿರುತ್ತಾರೆ. ನಾವು ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿ ಕೊಳ್ಳುವ ಅಗತ್ಯವಿದ್ದು ಅವಾಗಲೇ ನಮ್ಮ ಅಸ್ಮಿತೆ ನಾಡಿಗೆ ತಿಳಿಯುವುದು ಎಂದು ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಉನ್ನತಾಧಿಕಾರಿ ಕಮಲಾಕರ್ ಎಂ.ಶೇಠ್ ಬೆಂಗಳೂರು ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಅಪರಾಹ್ನ ದಾದರ್ ಪೂರ್ವದ ಬೋಂಬೆ ಆಂಧ್ರ ಮಹಾಸಭಾ ಜಿಮ್ಖಾನದ ಸಭಾಗೃಹದಲ್ಲಿ ಆಯೋಜಿಸಲಾದ ಅಸೋಸಿಯೇಶನ್‍ನ ವಾರ್ಷಿಕ ಧಾರ್ಮಿಕ ಮತ್ತು ಸ್ನೇಹಮಿಲನದಲ್ಲಿ ಮುಖ್ಯ ಅತಿಥಿü ಆಗಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಕಮಲಾಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಶೋಭಾ ಕೆ.ಶೇಠ್ ಬೆಂಗಳೂರು ಮತ್ತು ಮುಂಬಯಿನ ಮಂಗಳೂರು ಜುವೆಲ್ಲರ್ಸ್‍ನ ಗಣೇಶ್ ರಾವ್ ಉಪಸ್ಥಿತರಿದ್ದು ಶುಭಾರೈಸಿದರು.

ಸಂಸ್ಥೆಯ ಗೌ| ಪ್ರ| ಕಾರ್ಯದರ್ಶಿ ಗಜಾನನ ಡಿ.ಪವಸ್ಕಾರ್, ಗೌರವ ಖಜಾಂಜಿ ವಿನಾಯಕ್ ಎಂ.ದಿವಾಕರ್, ಜೊತೆ ಕಾರ್ಯದರ್ಶಿ ಪ್ರಕಾಶ್ ಎಸ್.ಸಾನು, ಜೊತೆ ಕೋಶಾಧಿಕಾರಿ ರಾಜೇಂದ್ರ ಬುರ್ಡೇಕರ್ ಉಪಸ್ಥಿತರಿದ್ದು ಕಮಲಾಕರ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಸುರೇಶ್ ಸಿ.ಶೇಠ್, ಶ್ರೀನಿವಾಸ್ ಆರ್.ರೈಕಾರ್, ಚಂದ್ರಶೇಖರ್ ಎಸ್.ರಾವ್, ಸುರೇಶ್ ಪಿ.ರೇವಣ್ಕರ್, ವಿಲಾಸ್ ವಿ.ಶೀರೊಡ್ಕರ್, ಪ್ರಶಾಂತ್ ಶೇಠ್, ವಿಮ್ಲೇಶ್ ಎನ್.ಕಂಬದಕೋಣೆ, ಸಂತೋಷ್ ಎ.ಶೇಠ್, ಸವಿತಾ ಎಸ್.ಚಂದೋನ್ಕರ್, ಅನುರಾಧಾ ಎಸ್.ವೆರ್ಣೆಕರ್, ಸರೋಜಾ ಎಸ್.ವೆರ್ಣೆಕರ್ ಹಾಗೂ ಮಹಿಳಾ ಮಂಡಳಿ ಸೇರಿದಂತೆ ಅಪಾರ ಬಂಧುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಪೂರ್ವಾಹ್ನ ವಿದ್ವಾನ್ ಶ್ರೀ ವಿನಾಯಕ್ ಭಟ್ ಅವರು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನೀಡಿ ಹರಸಿದರು. ಕಮಲಾಕರ ಶೇಠ್ ಮತ್ತು ಸುಮನ್ ಕೆ.ಶೇಠ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.

ಅಪರಾಹ್ನ ಮನೋರಂಜನಾ ಕಾರ್ಯಕ್ರಮಗಳು, ನೃತ್ಯಾವಳಿ, ಸಂಗೀತ, ಛದ್ಮವೇಶ ನಡೆಸಲ್ಪಟ್ಟವು. ಕೊನೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಿ ಹಾಗೂ ಕ್ರಿಕೇಟ್ ಪಂದ್ಯಾಟದ ವಿಜಯಿಗಳಿಗೆ ಟ್ರೋಫಿಗಳನ್ನು ಅಭಿನಂದಿಸಲಾಯಿತು. ಪ್ರಶಾಂತ್ ಶೇಠ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗ ಪ್ರಾರ್ಥನೆಯನ್ನಾಡಿದರು. ಗಜಾನನ ಪವಸ್ಕಾರ್ ಅತಿಥಿüಗಳನ್ನು ಪರಿಚಯಿಸಿ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here