Monday 12th, May 2025
canara news

ಜೆಸಿಐ ಸುರತ್ಕಲ್‍ನ 2018ನೇ ಸಾಲಿನ ಪದಗ್ರಹಣ ಸಮಾರಂಭ

Published On : 09 Jan 2018   |  Reported By : Rons Bantwal


ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನಾಥ ಶೆಟ್ಟಿ ಬಾಳರಿಗೆ ಸನ್ಮಾನ

ಮುಂಬಯಿ (ಸುರತ್ಕಲ್), ಜ.09: ಜೆಸಿಐ ಸುರತ್ಕಲ್‍ನ 2018ನೇ ಸಾಲಿನ ಪದಗ್ರಹಣ ಸಮಾರಂಭ ಇತ್ತೀಚೆಗೆ ಬಂಟರ ಸಂಘ ಸುರತ್ಕಲ್ ನಲ್ಲಿ ನಡೆಯಿತು. ಮುಖ್ಯ ಅತಿಥಿüಯಾಗಿ ಜೆಸಿಐ 15 ವಲಯಾಧ್ಯಕ್ಷ ಜೆಎಫ್‍ಪಿ ರಾಕೇಶ್ ಕುಂಜೂರ್ ಉಪಸ್ಥಿತರಿದ್ದರು.

ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೆಸಿಐ, ಯುವ ಸಮುದಾಯವನ್ನು ಜೆಸಿ ಆಂದೋಲನದಲ್ಲಿ ಸಕ್ರಿಯರನ್ನಾಗಿಸಿ ಅವರನ್ನು ಸಮಾಜದ ಕ್ರಿಯಾಶೀಲ ನಾಗರಿಕರನ್ನಾಗಿ ಮಾಡುವ ಉದ್ದೇಶದ್ದಿಂದ ಪ್ರಸ್ತುತ ವರ್ಷದಲ್ಲಿ ಬದಲಾವಣೆ ನಮ್ಮಿಂದಲ್ಲೇ ಎಂಬ ಧ್ಯೇಯದೊಂದಿಗೆ ಕಾರ್ಯಪ್ರವರ್ತವಾಗಲಿದೆ ಮತ್ತು ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವೆಲೊಪ್ಮೆಂಟ್ ಗೋಲ್ ಕಾರ್ಯಕ್ರಮಗಳ ಪ್ರಮುಖ 6 ಅಂಶಗಳಾದ ಉತ್ತಮ ಅರೋಗ್ಯ ಮತ್ತು ಯೋಗ ಕ್ಷೇಮ, ಉತ್ತಮ ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವತ್ಛತಾ ಜಲ ಮತ್ತು ನೈರ್ಮಲ್ಯ, ಸಮರ್ಥನೀಯ ನಗರ ಮತ್ತು ಸಮುದಾಯದ ಅಭಿವೃದ್ಧಿ, ಭೂಮಿಯಲ್ಲಿ ಜೀವನ ಎಂಬ ಅಂಶಗಳ ಅನುಷ್ಠಾನಕ್ಕೆ ಒತ್ತು ಕೊಡಲಿದೆ ಎಂದು ರಾಕೇಶ್ ಕುಂಜೂರ್ ತಿಳಿಸಿದರು.

ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಅತಿಥಿü ಅಭ್ಯಾಗತರಾಗಿದ್ದು ಮಾತನಾಡಿ, ಶಿಸ್ತು, ಸಂವಿಧಾನಬದ್ದ ಮತ್ತು ಸಮಾಜಕ್ಕೆ ಒಳ್ಳೆಯ ನಾಯಕರನ್ನು ಜೆಸಿಐ ನೀಡಿದೆ ಎಂದು ಶುಭ ಹಾರೈಸಿದರು .

ಕಿರಣ್ ಭಟ್ ಮಾತನಾಡಿ, ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನಾಥ ಶೆಟ್ಟಿ ಬಾಳ ಮತ್ತು ಜೇಸಿ ಸುರತ್ಕಲ್‍ನ 2017ರ ಸಾಲಿನ ಅಧ್ಯಕ್ಷೆ ಚೇತನಾ ದತ್ತಾತ್ರೆಯ ದಂಪತಿಯನ್ನು ಸನ್ಮಾನಿಸಲಾಯಿತು .

ಪ್ರಥಮಾರ್ಧದ ಸಭಾಧ್ಯಕ್ಷತೆಯನ್ನು ಚೇತನಾ ದತ್ತಾತ್ರೆಯ ವಹಿಸಿ ಸ್ವಾಗತಿಸಿದರು. ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ದಿನೇಶ್ ದೇವಾಡಿಗ, ಯೋಗೀಶ್ ದೇವಾಡಿಗ, ಶಶಿಕುಮಾರ್, ಸುಜೀರ್ ಶೆಟ್ಟಿ, ಜ್ಯೋತಿ ಜೆÀ.ಶೆಟ್ಟಿ (ಉಪಾಧ್ಯಕರುಗಳು) ಲೋಕೇಶ ರೈ (ಕಾರ್ಯದರ್ಶಿ), ಶ್ರೀಶಯ್ ಶೆಟ್ಟಿ (ಜೊತೆ ಕಾರ್ಯದರ್ಶಿ), ರಾಕೇಶ್ ಹೊಸಬೆಟ್ಟು (ಕೋಶಾಧಿಕಾರಿ), ಜೆಸಿರೇಟ್ ಅಧ್ಯಕ್ಷೆಯಾಗಿ ಜ್ಯೋತಿ ಪಿ ಶೆಟ್ಟಿ, ಜೂನಿಯರ್ ಜೆಸಿ ಅಧ್ಯಕ್ಷೆಯಾಗಿ ಬಿಂದಿಯಾ ಐ.ಶೆಟ್ಟಿ ಹಾಗೂ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ಅಧಿಕಾರಿಯಾಗಿ ಜೆಸಿಐ ಸೆನೆಟರ್ ಪಶುಪತಿ ಶರ್ಮ ಭಾಗವಹಿಸಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಸಿದರು

ಕಾರ್ಯಕ್ರಮದಲ್ಲಿ ಜೆಸಿಐ ವಲಯಾಧಿಕಾರಿಗಳಾದ ಶ್ರೀನಿವಾಸ್ ಭಟ್, ರಮ್ಯಾ ರಾವ್, ಸುರೇಂದ್ರ ಭಟ್, ಇತರ ಘಟಕ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜೆಸಿಐ ಸುರತ್ಕಲ್‍ನ ಎಲ್ಲಾ ಪೂರ್ವಾಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದು, ಜಯೇಶ್ ಗೋವಿಂದ್ ಅತಿಥಿüಗಳನ್ನು ವೇದಿಕೆಗೆ ಆಹ್ವಾನಿಸಿದರು. ಜಿತಿನ್ ಶೆಟ್ಟಿ, ವಿನಾಯಕ್, ತಸ್ವಿ ರೈ, ಸ್ತುತಿ, ಲೇಖನ, ಜಾನ್ವಿ ಮುಂತಾದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಕಾರ್ಯದರ್ಶಿ ಲೋಕೇಶ ರೈ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here