Friday 26th, April 2024
canara news

ಜ.20: ಶ್ರೀ ಸಚ್ಚೀದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ

Published On : 12 Jan 2018   |  Reported By : Rons Bantwal


ಮುಂಬಯಿ ಭೇಟಿ-ಪಾದಪೂಜೆ-ಪ್ರವಚನ-ಆಶೀರ್ವಚನ

ಮುಂಬಯಿ, ಜ.12: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕರ್ಕಿ ಅಲ್ಲಿನ ದೈವಜ್ಞ ಬ್ರಾಹ್ಮಣ ಸಮುದಾಯದ ಗುರುವರ್ಯ, ಜ್ಞಾನೇಶ್ವರ ಪೀಠಾಧಿಪತಿ ಶ್ರೀ ಸಚ್ಚೀದಾನಂದ ಜ್ಞಾನೇಶ್ವರ್ ಭಾರತಿ ಸ್ವಾಮೀಜಿ ಅವರು ಇದೇ ಜ.20ರ ಭಾನುವಾರ ಬೃಹನ್ಮುಂಬಯಿಗೆ ಪಾದಾರ್ಪಣೆ ಮಾಡುವರು.

ಅಂದು ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಅಲ್ಲಿನ (ಶಿವಸೇನಾ ಭವನದ ಸನಿಹ) ಪದ್ಮಬಾಯಿ ಠಕ್ಕರ್ ಮಾರ್ಗದಲ್ಲಿನ ದೈವಜ್ಞ ಹಿತವರ್ಧಕ ಸಮಾಜದಿಂದ ಭವ್ಯ ಶೋಭಯಾತ್ರೆ ಮೂಲಕ ಶ್ರೀಪಾದರನ್ನು ಸ್ವಾಗತಿಸಿ ಸ್ಥಾನೀಯ ಸ್ವಾತಂತ್ರ ್ಯವೀರ ಸಾವರ್ಕರ್ ಮಾರ್ಗದಲ್ಲಿನ ವನಿತಾ ಸಮಾಜ ಭವನಕ್ಕೆ ಬರಮಾಡಿ ಕೊಳ್ಳಲಾಗುವುದು.
ಅಲ್ಲಿ ಪೂರ್ವಾಹ್ನ 11.00 ಗಂಟೆಗೆ ಸಾರ್ವಜನಿಕ ಪಾದಪೂಜೆ ನಡೆಸಲಾಗುವುದು. ಬಳಿಕ ಧಾರ್ಮಿಕ ಸಭೆ, ಶ್ರೀಗಳಿಂದ ಪ್ರವಚನ, ಸ್ವಾಮೀಜಿ ದರ್ಶನ, ಆಶೀರ್ವಚನ, ಮಹಾಪ್ರಸಾದ (ಭೋಜನ) ನಡೆಯಲಿದೆ.

ಕೆನರಾ ದೈವಜ್ಞ ಅಸೋಸಿಯೇಶನ್‍ನ ಅಧ್ಯಕ್ಷ ಸದಾನಂದ್ ಎಸ್.ಶೇಠ್, ಗೌ| ಪ್ರ| ಕಾರ್ಯದರ್ಶಿ ಗಜಾನ ನ ಡಿ.ಪವಾಸ್ಕರ್, ಅಖಿಲ ಭಾರತ ದೈವಜ್ಞ ಸಮಾಜೋನ್ನತಿ ಪರಿಷದ್ ಮುಂಬಯಿ ಅಧ್ಯಕ್ಷ ದಿನಕರ್ ಎಸ್.ಬೈಕೆರಿಕರ್, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಕೆ.ದಾಭೋಲ್ಕರ್ ಮತ್ತು ಉಭಯ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ಈ ಪುಣ್ಯಾಧಿ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.

ಭಾರತದ ಪಶ್ಚಿಮ ಕರಾವಳಿಯ ಗೋವಾ ಪ್ರದೇಶದಲ್ಲಿ ಅಧಿಕವಾಗಿ ನೆಲೆಕಂಡ ಶಾಸ್ತ್ರಜ್ಞ ಧರ್ಮೀಯ ಸೇರಿದ ಸಮುದಾಯ. ಕರ್ನಾಟಕ ಮತ್ತು ಮಹಾರಷ್ಟ್ರದ ಕರಾವಳಿಯಲ್ಲೂ ನೆಲೆಕಂಡ ಈ ಸಮುದಾಯವು ಅಕ್ಕಸಾಲಿಗ (ಸೋನಾರ-ಜ್ಯುಯೆಲರಿ) ಈ ಸಮಾಜದ ಕುಲ ಕಸಬು. ಸುಶಿಕ್ಷಿತ ಸಮಾಜ ಆಗಿರುವ ದೈವಜ್ಞರು ಮುಂಬಯಿಯಲ್ಲೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here