Thursday 25th, April 2024
canara news

ಬಿಎಸ್‍ಕೆಬಿಎಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ-ಮಕರ ಸಂಕ್ರಾಂತಿ ಆಚರಣೆ

Published On : 15 Jan 2018   |  Reported By : Rons Bantwal


ಶಿಕ್ಷಣಕ್ಕೆ ಬಡತನ ಅಡಚಣೆ ಆಗಬಾರದು-ಡಾ| ಸುರೇಶ್ ರಾವ್ ಕಟೀಲು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.15: ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಭಾನುವಾರ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಮಕರ ಸಂಕ್ರಾಂತಿ ಆಚರಿಸಲ್ಪಟ್ಟಿತು.

 

ಮಕರ ಸಂಕ್ರಾಂತಿ ಸಲುವಾಗಿ ಬೆಳಿಗ್ಗೆ ವಿದ್ವಾನ್ ಶ್ರೀ ಕೃಷ್ಣರಾಜ ಉಪಾಧ್ಯಾಯ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನೀಡಿ ಹರಸಿದರು. ಎ.ಎಸ್ ರಾವ್ ಮತ್ತು ಶಾಂತ ಎ.ರಾವ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದು ಸೇವಾಥಿರ್üಗಳಿಗೆ ಸಾಮೂಹಿಕ ಸಂಕಲ್ಪ ನಡೆಸಲ್ಪಟ್ಟಿತು. ಸಯಾನ್ ಕೇಂದ್ರ ಕಛೇರಿಯ ಗೋಕುಲ ಭಜನಾ ಮಂಡಳಿ ಹಾಗೂ ಪ್ರಾದೇಶಿಕ ಭಜನಾ ಮಂಡಳಿಗಳು ಸಾಮೂಹಿಕ ಭಜನೆ ನೆರವೇರಿಸಿದರು. ಶ್ರೀಷಾ ಉಡುಪ, ಕುಮಾರ್ ಭಟ್, ಹರಿ ಭಟ್ ಮುಂಡ್ಕೂರು, ಕುಂಜತ್ತೂರು ವಾಸುದೇವ ಉಡುಪ ಪೂಜಾಧಿಗಳಲ್ಲಿ ಸಹಯೋಗವಿತ್ತರು.

ಶಿಕ್ಷಣಕ್ಕೆ ಬಡತನ ಅಡಚಣೆ ಆಗಬಾರದು. ಬ್ರಾಹ್ಮಣರು ಶಿಕ್ಷಣದಲ್ಲಿ ಮುಂದುವರಿದವರು. ಆದುದರಿಂದ ನಮ್ಮ ಭವಿಷ್ಯತ್ತಿನ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಎಂದೂ ಕಷ್ಟ ಆಗಬಾರದು. ಇದಕ್ಕೆ ನಮ್ಮ ಸಂಸ್ಥೆಯ ವಿದ್ಯಾನಿಧಿ ಪೂರಕವಾಗಿದೆ. ಅಂತೆಯೇ ಆಶ್ರಯ ಮೂಲಕ ನಾವು ಸೇವಾ ನಿರತವಾಗಿದ್ದೇವೆ. ಹಿರಿಯ ನಾಗರೀಕರಿಗೆ ಮನೆ ಮತ್ತು ಮನದ ಸೇವೆ ಸಂದಾಗ ಮಾತ್ರ ನಮ್ಮ ಸೇವೆ ಸಾರ್ಥಕ ಆಗುವುದು. ಇದಕ್ಕಾಗಿ ಆಶ್ರಯದ ಸೇವೆ ಸರ್ವೋತ್ಕೃಷ್ಟವಾಗಿಸಿದ್ದೇವೆ. ಸಯಾನ್‍ನ ಸ್ವಜಾಗದಲ್ಲಿ ಕೃಷ್ಣ ಮಂದಿರ ಶೀಘ್ರವೇ ಸಿದ್ಧಗೊಳ್ಳಲಿದೆ. ಎಲ್ಲಕ್ಕಿಂತ ಇದು ವಿಭಿನ್ನವಾಗಿ ಒಳ್ಳೆಯ ಮಂದಿರವಾಗಿ ಮುಂಬಯಿಯಲ್ಲೇ ಅತೀ ಸುಂದರ ಮತ್ತು ದಕ್ಷಿಣ ಭಾರತೀಯರ ಸಂಪ್ರಾದಾಯದಂತೆ ಸೇವಾ ನಿರತವಾಗಲಿದೆ. ಇದಕ್ಕೆಲ್ಲಾ ಸಹೃದಯರ ಸೇವೆ, ಸಹಯೋಗ ಅಗತ್ಯವಿದೆ. ಪೆÇ್ರೀತ್ಸಾಹಕ್ಕಿಂತ ದೊಡ್ಡ ಸಹಾಯ ಬೇರೊಂದಿಲ್ಲ. ಗೋಕುಲದ ಪ್ರಗತಿ ಸಮುದಾಯದ ಪ್ರಗತಿ ಎಂದÀು ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಗೋಕುಲ-2020 ಯೋಜನೆಯ ಬಗ್ಗೆ ಸಂಕ್ಷೀಪ್ತ ಮಾಹಿತಿಯನ್ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸಹನಾ ಭಾರದ್ವಾಜ್ ಬಳಗವು ನೃತ್ಯಾರ್ಪಣೆಗೈದರು. ಅಸೋಸಿಯೇಶನ್‍ನ ಸದಸ್ಯ ಪರಿವಾರವು ಸಂಕ್ರಾಂತಿ ನೃತ್ಯಗಳನ್ನು ಪ್ರದರ್ಶಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮನರಂಜನೆ ನೀಡಿದರು. ಮಹಿಳೆಯರು ಬಳೆ, ಅಡಿಕೆ-ವೀಳೆದೆಲೆ, ಎಳ್ಳುಂಡೆ ನೀಡಿ ಹಣೆಗೆ ಹಳದಿ ಕುಂಕುಮ ಸವರಿ ಅರಸಿನ ಕುಂಕುಮ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮದಲ್ಲಿ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್, ಬಿಎಸ್‍ಕೆಬಿಎ ಉಪಾಧ್ಯಕ್ಷರಾದ ವಾಮನ ಹೊಳ್ಳ (ಆಶ್ರಯ ಸಮಿತಿ ಕಾರ್ಯಧ್ಯಕ್ಷ) ಮತ್ತು ಶೈಲಿನಿ ಎ.ರಾವ್ (ವೈವಾಹಿಕ ಸಮಿತಿ ಕಾರ್ಯಧ್ಯಕ್ಷೆ), ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭನ್ ಕೆ.ಪೆÇೀತಿ, ಗೌರವ ಕೋಶಾಧಿಕಾರಿ ಹರಿದಾಸ್ ಭಟ್ (ಯುವ ವಿಭಾಗದ ಕಾರ್ಯಾಧ್ಯಕ್ಷ), ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್ (ಹುಂಡಿ ಸಮಿತಿ ಕಾರ್ಯಧ್ಯಕ್ಷೆ), ವಿಜಯಲಕ್ಷ್ಮೀ ಎಸ್.ರಾವ್ ಸೇರಿದಂತೆ ಅನೇಕ ಪುರೋಹಿತರು, ಸೇರಿದಂತೆ ಇತರ ಪದಾಧಿಕಾರಿಗಳು, ಉಪ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು.

ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ (ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ) ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಎಚ್. ಭಟ್ ಮತ್ತು ಡಾ| ಸಹನಾ ಎ.ಪೆÇೀತಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್ (ಆಶ್ರಯ ಸಮಿತಿ ಸಂಚಾಲಕ) ಧನ್ಯವದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here