Thursday 25th, April 2024
canara news

ಅಪಘಾತಕ್ಕೆ ಒಳಗದವರ ರಕ್ಷಣೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿ ಅಪಘಾತಕ್ಕೆ ಒಳಗಾಗಿ ಬಲಿ

Published On : 16 Jan 2018   |  Reported By : Bernard Dcosta


ಕುಂದಾಪುರ,ಜ.16: ಅಪಘಾತಕ್ಕೆ ಒಳಗಾದ ವಾಹದಲ್ಲಿದ್ದವರ ರಕ್ಷಣೆಗೆ ಧಾವಿಸಿದ ಕಾಲೇಜು ವಿದ್ಯಾರ್ಥಿಗೆ ಓಮ್ನಿ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದಾರುಣ ಘಟನೆ ಕುಂದಾಪುರದ ಬಸ್ರೂರು ರಸ್ತೆಯ ಕಾರಂತರ ಮನೆಯ ಎದುರುಗಡೆ ನೆಡೆದಿದೆ.

ಬೆಟ್ಟಾಗರ ನಿವಾಸಿ ಸಂಜೀವ ಮತ್ತು ರೇವತಿ ದಂಪತಿಗಳ ಏಕೈಕ ಪುತ್ರ ನಿತಿನ್ ಪೂಜಾರಿ (21) ಮೃತ ವಿದ್ಯಾರ್ಥಿ.

ಅಪಘಾತಕ್ಕೆ ಒಳಗಾದವರ ರಕ್ಷಣೆಗೆ ಧಾವಿಸಿದಾಗ ಇಂತಹ ಅಪಘಾತಕ್ಕೆ ಒಳಗಾಗಿ ಮ್ರತ ಪಟ್ಟ ದುರೈವಿ ಯಾಗಿದ್ದಾನೆ.

ಸೋಮವಾರ ರಾತ್ರಿ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ ಮಾರ್ಗದ ಕಾರಂತರ ಮನೆಯ ಸಮೀಪದಲ್ಲಿ ಖಾಸಗಿ ಬಸ್ ಹಾಗೂ ಸ್ಯಾಂಟ್ರೋ ವಾಹನಗಳ ನಡುವೆ ಅಪಘಾತ ನೆಡೆಯಿತು, ಇದರ ಶಬ್ದ ಕೇಳಿ ಮನೆಯಿಂದ ಧಾವಿಸಿ ಬಂದು ಕಾರಿನಲ್ಲಿದ್ದವರ ರಕ್ಷಣೆಗೆ ವಿದ್ಯಾರ್ಥಿ ನಿತಿನ್ ಹಾಗೂ ಗಾರೆ ಕಾರ್ಮಿಕನಾದ ಅನಿಲ್ ಧಾವಿಸಿದ್ದರು. ಈ ವೇಳೆಯಲ್ಲಿ ಕುಂದಾಪುರದಿಂದ ಬಸ್ರೂರು ಕಡೆಗೆ ವೇಗವಾಗಿ ಬಂದ ಒಂದು ಓಮ್ನಿ ನಿತಿನ್ ಹಾಗೂ ಅನಿಲಗೆ ಡಿಕ್ಕಿ ಹೊಡೆಯಿತು. 

ಢಿಕ್ಕಿಯ ರಭಸಕ್ಕೆ ನಿತಿನ್ ರಸ್ತೆ ಸಮೀಪದ ಗದ್ದೆಗೆ ಅಪ್ಪಳಿಸಿದ ಪರಿಣಾಮ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿತ್ತು. ಕೂಡಲೇ ನಿತಿನನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿತಿನ್ ಮ್ರತ ಪಟ್ಟಿದ್ದಾನೆ. ಈ ಅಪಘಾತದಲ್ಲಿ
ಗಾಯಗೊಂಡಿರುವ ಅನಿಲ್ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಿಕೆಯಲ್ಲಿ ಮುಂದಿದ್ದ ನಿತಿನ್ ಪೂಜಾರಿ ಭಂಡಾರ್ಕಾರ್ಸ್ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದನು. ಸಂಜೀವ ಮತ್ತು ರೇವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿಯ ಮಗಳು ವಿಕಲಚೇತನಳಾಗಿದ್ದು, ನಿತಿನ್ ಹಿರಿಯ ಮಗನಾಗಿದ್ದನು. ತಂದೆ ಸಂಜೀವ ಕುಂದಾಪುರ ಹೆಂಚಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಮನೆಯ ಜವಾಬ್ದಾರಿಗಳನ್ನು ಸಾಕಷ್ಟು ಕಷ್ಟದಿಂದಲೇ ನಿಭಾಯಿಸುತ್ತಿದ್ದರು. ಇನ್ನು ಸ್ವಲ್ಪ ಸಮಯದರಲ್ಲೇ ವಿದ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿ ಕುಟುಂಬಕ್ಕೆ ಆಧಾರವಾಗ ಬೇಕಿದ್ದ ನಿತಿನ್ ಸಾವು ಅವರ ಕುಟುಂಬ ವರ್ಗಕ್ಕೆ ಆಘಾತ ಮತ್ತು ತುಂಬಲಾರದ ನಶ್ಟವಾಗಿದೆ.


ನಿತಿನ್ ಸಾವಿಗೆ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ, ಅವರ ಸಹಪಾಠಿಗಳು ಹಾಗೂ ಇಡೀ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಸಮುದಾಯ, ಅಧ್ಯಾಪಕ ವ್ರಂದ ಹಾಗೂ ಅವರ ಆಪ್ತ ವಲಯ ನಿತಿನ್ ಸಾವಿಗೆ ಕಂಬನಿ ಮಿಡಿದಿದೆ. 

ಇಂದು ಬೆಳಗ್ಗೆ ಕಾಲೇಜಿನಲ್ಲಿ ನಿತಿನಿಗೆ ಶ್ರದ್ದಾಂಜಲಿ ಅರ್ಪಿಸಿ ರಜೆ ಸಾರಲಾಯಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here