Monday 12th, May 2025
canara news

ಅಡ್ಡಹೊಳೆಯಲ್ಲಿ ನಕ್ಸಲ್ ತಂಡ ಪತ್ತೆ, ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ

Published On : 16 Jan 2018   |  Reported By : canaranews network


ಮಂಗಳೂರು: ದಕ್ಷಿಣಕನ್ನಡದ ಪುತ್ತೂರು ತಾಲೂಕಿನ ಅಡ್ಡಹೊಳೆ ಎಂಬಲ್ಲಿ ಶಸ್ತ್ರ ಸಜ್ಜಿತ ನಕ್ಸಲ್ ತಂಡ ಪತ್ತೆಯಾಗಿದೆ.ಈ ಹಿಂದೆ ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಲ ಕಳೆದುಕೊಂಡಿದ್ದ ನಕ್ಸಲರು ಕೇರಳದತ್ತ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು.ಇದೀಗ ಮತ್ತೆ ನಕ್ಸಲರ ಸದ್ದು ಕೇಳಿಸಿದ್ದು ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ತಂಡ ಹಾಗೂ ಎಎನ್ ಎಫ್ ತಂಡ ಅಡ್ಡಹೊಳೆ ಪ್ರದೇಶಕ್ಕೆ ತೆರಳಿ ತನಿಖೆ ಆರಂಭಿಸಿವೆ.

ಉಪ್ಪಿನಂಗಡಿಯ ಅಡ್ಡಹೊಳೆ ಪ್ರದೇಶದಲ್ಲಿ ಒರ್ವ ಯುವತಿ ಸೇರಿದಂತೆ ಮೂವರು ಸದಸ್ಯರಿದ್ದ ನಕ್ಸಲ್ ರ ತಂಡ ಪತ್ತೆಯಾಗಿತ್ತು.ಅಡ್ಡಹೊಳೆಯ ಮೋಹನ್ ಎಂಬವರ ಮನೆಗೆ ಬಾನುವಾರ ಸಂಜೆ 7 ಗಂಟೆ ಸುಮಾರಿಗೆ ಬಂದ ತಂಡ ಮನೆಯಲ್ಲಿ ಊಟ ಸೇವಿಸಿ ದಿನಸಿ ವಸ್ತುಗಳನ್ನು ಪಾರ್ಸೆಲ್ ಕೊಂಡು ಹೊಗಿದ್ದಾರೆ ಎಂದು ಹೇಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು , ಸುರೇಶ್ ,ಲೀಲಾ ಹಾಗು ಮೋಹನ್ ಅವರ ಮನೆಗೆ ತೆರಳಿ ತನಿಖೆ ನಡೆಸಿದ್ದಾರೆ.ದಕ್ಷಿಣ ಕನ್ನಡ ಎಸ್ ಪಿ ಸುದೀರ್ ಕುಮಾರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಪುತ್ತೂರು ಹಾಗೂ ಬೆಳ್ತಂಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಈಗಾಗಲೇ ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here