Wednesday 21st, February 2018
canara news

ಬಿ.ಸಿ.ಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 "

Published On : 18 Jan 2018   |  Reported By : Iqbal Uchila


ಅನಿವಾಸಿ ಕನ್ನಡಿಗ ಬ್ಯಾರೀ ಸಮುದಾಯದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ  ನಡೆಯುವ ಬಹು ಚರ್ಚಿತ ವಾರ್ಷಿಕ ಕ್ರೀಡಾ ಕೂಟ " ಬಿ.ಸಿ.ಎಫ್  ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 " ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆಯನ್ನು ಇತ್ತೀಚಿಗೆ  UAE ಯ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಯ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು. 

UAE ಯ ವಿವಿಧ ಭಾಗಗಳಿಂದ ಆಗಮಿಸಿದ ಅನಿವಾಸಿ ಕನ್ನಡಿಗರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಈ ಸಮಾವೇಶದ ನೇತೃತ್ವವನ್ನು BCF ಪ್ರಧಾನ ಕಾರ್ಯದರ್ಶಿ ಡಾ ಕಾಪು ಮಹಮ್ಮದ್, BC F ಉಪಾಧ್ಯಕ್ಷರಾದ ಜ: ಎಂ, ಈ, ಮೂಳೂರು , ಜ: ಅಬ್ದುಲ್ ಲತೀಫ್ ಮುಲ್ಕಿ, BCF ಕ್ರೀಡಾ ಸಮಿತಿಯ ಚಯರ್ಮನ್ ಜ ಅಫೀಕ್ ಹುಸೈನ್, ಹಾಗೂ ಇತರ BC F ಪದಾಧಿಕಾರಿಗಳು, ಹಾಗೂ ಹಿತೈಷಿಗಳು ಭಾಗವಹಿಸಿದ್ದರು.

ನಿರಂತರವಾಗಿ ಸುಮಾರು 25 -30 ದಿನಗಳ ತನಕ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಯ ಕ್ರೀಡಾಂಗಣದಲ್ಲಿ ನಡೆಯುವ ಈ ಕ್ರೀಡಾ ಕೂಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಮೇತ ನೂರಾರು ಕ್ರೀಡಾ ಪಟುಗಳು ಪಾಲ್ಗೊಳ್ಳುತ್ತಿದ್ದು ತರಹೇವಾರು ಆಟೋಟ ಸ್ಪರ್ಧೆಗಳನ್ನುಏರ್ಪಡಿಸಲಾಗುವುದು, ಈ ಕ್ರೀಡಾ ಮೇಳದ ಸಮಾರೋಪ ಸಮಾರಂಭವು ದಿನಾಂಕ 02 / 02 /2018 ನೇ ಶುಕ್ರವಾರ ನೆರವೇರಲಿದ್ದು ಬಹು ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ವಾಲೀ ಬಾಲ್, ಫುಟ್ ಬಾಲ್, ಕ್ರಿಕೆಟ್, ಕೊಕೊ, ಟೆನಿಸ್, ಬಿಲಿಯರ್ಡ್ಸ್, ರನ್ನಿಂಗ್ ರೇಸ್, ರಿಲೇ, ಕಬಡ್ಡಿ, ಟಗ್ ಆಫ್ ವಾರ್, ,ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ವಿಶೇಷವಾದ ವಿವಿಧ ಆಟೋಟ ಸ್ಪರ್ಧೆಗಫಳನ್ನು ಏರ್ಪಡಿಸಲಾಗುವುದು.

ಮಹಿಳೆಯರಿಗೆ ವಿಶೇಷವಾಗಿ ಪಾಕ ಸ್ಪರ್ಧೆ, ಮೆಹಂದಿ ಡಿಸೈನ್ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುವುದು.

BCF ಅಧ್ಯಕ್ಷರಾದ ಡಾ B K ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತ ಅತಿಥಿಗಳಾಗಿ ಮಂತ್ರಿಗಳು, ಶಾಸಕರು , ಖ್ಯಾತ ಕ್ರೀಡಾ ಪಟುಗಳು, ರಾಜಕೀಯ, ಉದ್ದಿಮೆ, ಶಿಕ್ಷಣ, ಆರೋಗ್ಯ, ಹೀಗೆ ವಿವಿಧ ಕ್ಷೇತ್ರದ ನೇತಾರರು ಭಾಗವಹಿಸುವ ನಿರೀಕ್ಷೆ ಇದೆ.

ಬೆಳಿಗ್ಗೆ 8 .30 ರಿಂದ ರಾತ್ರಿ 8 ಗಂಟೆಯ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನ ಹಾಗೂ ಲಘು ಉಪಹಾರ , ಪಾನೀಯವನ್ನೂ ಉಚಿತವಾಗಿ ನೀಡಲಾಗುವುದು.

ಪಂದ್ಯಾಟದಲ್ಲಿ ಗೆದ್ದವರಿಗೆ ಸ್ಮರಣಿಕೆಯನ್ನು ಹಾಗೂ ಪ್ರೋತ್ಸಾಹ ಬಹುಮಾನವನ್ನೂ ನೀಡಿ ಗೌರವಿಸಲಾಗುವುದು.

ಸಾಮುದಾಯಿಕ ಐಕ್ಯತೆ, ಕ್ರೀಡೆ ಮತ್ತು ದೇಹಾರೋಗ್ಯವನ್ನು ಪ್ರೇರೇಪಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತೇಜಿಸುವ ಈ ಬ್ರಹತ್ ಕ್ರೀಡಾ ಕೂಟಕ್ಕೆ ಸಕಲ ಅನಿವಾಸಿ ಕನ್ನಡಿಗರನ್ನು BCF ಪರವಾಗಿ BCF ಕ್ರೀಡಾ ಸಮಿತಿಯ ಚಯರ್ಮನ್ ಜ: ಅಫೀಕ್ ಹುಸೈನ್ ಮತ್ತು ಅವರ ತಂಡದ ಸದಸ್ಯರು ಹಾರ್ದಿಕವಾಗಿ ಆಹ್ವಾನಿಸಿದ್ದಾರೆ.

ಕಾರ್ಯ ಕ್ರಮದಲ್ಲಿ ಭಾಗವಹಿಸಲು ಇಶ್ಚಿಸುವವರು, ಪಂದ್ಯಾಟಗಳಲ್ಲಿ ಪಾಲ್ಗೊಳ್ಲಲು ಬಯಸುವವರು ಈ ಕೆಳಗಿನ ಮೊಬೈಲ್ ನಂಬರಿಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.

050-5883943,
050-8417475,
055-2218351
050-5156284
055-3540287
055-9721831
056-2721152, (For Cookery and Mehandi Competition, Ladies and Children games)

 
More News

ತೀಯಾ ಸಮಾಜ ಮುಂಬಯಿ ಪೂರ್ವ ವಲಯ ಪ್ರಾದೇಶಿಕ ಸಮಿತಿ ಸಂಭ್ರಮಿಸಿದ ದಶಮಾನೋತ್ಸವ
ತೀಯಾ ಸಮಾಜ ಮುಂಬಯಿ ಪೂರ್ವ ವಲಯ ಪ್ರಾದೇಶಿಕ ಸಮಿತಿ ಸಂಭ್ರಮಿಸಿದ ದಶಮಾನೋತ್ಸವ
ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಘಟಿಕೋತ್ಸವ-ಮೋಹನ್ ಬೊಳ್ಳಾರುಗೆ ಡಾಕ್ಟರೇಟ್ ಪ್ರದಾನ
ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಘಟಿಕೋತ್ಸವ-ಮೋಹನ್ ಬೊಳ್ಳಾರುಗೆ ಡಾಕ್ಟರೇಟ್ ಪ್ರದಾನ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ  ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

Comment Here