Monday 12th, May 2025
canara news

ಕಲಿಯೋಣ ಕಂಪ್ಯೂಟರ್ ಶಿಬಿರ

Published On : 19 Jan 2018   |  Reported By : Rons Bantwal


ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆಸುವ " ಕಲಿಯೋಣ ಕಂಪ್ಯೂಟರ್ - ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಶಿಬಿರ " ಕಾರ್ಯಕ್ರಮವನ್ನು ಈ ಬಾರಿ ಕಳಸದ ಜೆ . ಇ. ಎಂ . ಪ್ರೌಢಶಾಲೆ ಯಲ್ಲಿ ನಡೆಸಲಾಯಿತು . ಈ ಶಿಬಿರವು ಜನವರಿ 17 ರಿಂದ 19 ರವರೆಗೆ ಮೂರು ದಿನಗಳ ಕಾಲ ಜರುಗಲಿದೆ .

ಶಿಬಿರವನ್ನು ಉದ್ಘಾಟಿಸಿದ ವಿಭಾಗದ ಮುಖ್ಯಸ್ಥ ಡಾ . ಮಂಜುನಾಥ ಕೊಠಾರಿ ಮಾತನಾಡಿ , " ಪ್ರತಿ ವರ್ಷ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದ ಕೊರತೆಯಿರುವ ಗ್ರಾಮೀಣ ಭಾಗಗಳ ಶಾಲೆಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸುತ್ತಾರೆ. ಇದರ ಜೊತೆಗೆ ವೆಬ್ ಸೈಟ್ ತಯಾರಿ , ಇಂಟರ್ನೆಟ್ ಮತ್ತು ಪ್ರೋಗ್ರಾಮಿಂಗ್ ಬಗ್ಗೆಯೂ ತರಬೇತಿ ನೀಡಲಾಗುತ್ತದೆ" ಎಂದರು . ಕಳಸ ಶಿಕ್ಷಣ ಸೊಸೈಟಿ ಯ ಅಧ್ಯಕ್ಷರಾದ ಶ್ರೀಕಾಂತ್ ಶುಭ ಹಾರೈಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಡಾ. ಮೋಹನ ಆಳ್ವರಿಗೆ ಕೃತಜ್ಞತೆ ಅರ್ಪಿಸಿದರು.

ಕಳಸ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ಗೋಪಿನಾಥ್ ಪೈ , ಮುಖ್ಯ ಶಿಕ್ಷಕಿ ಸುನಂದಾ , ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಹೇಮಂತ್ , ಶ್ರುತಿ ಶೆಟ್ಟಿ , ವಿವೇಕ್ ಶರ್ಮ ಮತ್ತು ಅಂಕಿತಾ ಶೆಟ್ಟಿ ಉಪಸ್ಥಿತರಿದ್ದರು . ಕಾಲೇಜಿನ 18 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ .

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here