Wednesday 24th, April 2024
canara news

ವಸಂತ ಬೇಕರಿಯ ನೂತನ ಶಾಖೆ

Published On : 20 Jan 2018   |  Reported By : Bernard J Costa


ಕುಂದಾಪುರ ಹೂವಿನ ಮಾರ್ಕೆಟ್ ಎದುರುಗಡೆ ಉದ್ಘಾಟನೆಗೊಳ್ಳುವುದು

‘ವಸಂತ ಬೇಕರಿ’ ಕುಂದಾಪುರದ ಅತ್ಯಂತ ಹಿರಿಯ ತಲೆಮಾರಿನ ಬೇಕರಿಗಳಲ್ಲಿ ಒಂದಾಗಿದೆ. ಇದು ಕುಂದಾಪುರ ತಾಲೂಕಿನಲ್ಲಿಯೆ ಬಹಳ ಹೆಸರುವಾಸಿಯಾದ ಬೇಕರಿ.ಈಗ ಕುಂದಾಪುರದಲ್ಲೇ ಮತ್ತೊಂದು ಹೊಸ ಬೇಕರಿ ನಿರ್ಮಾಣವಾಗಿದ್ದು ಇಲ್ಲಿ ಥರ ಥರದ ತಿಂಡಿ ತಿನಿಸುಗಳು ಲಭ್ಯವಿದ್ದು ಇಲ್ಲಿಯ ವ್ಯಾಪರ ಭರಾಟೆಯಿಂದ ನೆಡೆಯುತ್ತಿದೆ. ಈ ಬೇಕರಿಯ ಇನ್ನೊಂದು ಶಾಖೆ ಕುಂದಾಪುರದ ಹೂವಿನ ಮಾರ್ಕೆಟ್ ಎದುರುಗಡೆ ಜನವರಿ 22 ರಂದು ಸೋಮವಾರ ಉದ್ಘಾಟನೆಗೊಳ್ಳುವುದು. ಈ ಉದ್ಘಾಟನ ಕಾರ್ಯಕ್ಕೆ ತಮೆಗೆಲ್ಲರಿಗೂ ಹಾರ್ದಿಕ ಸ್ವಾಗತವನ್ನು ಕೋರಿದ್ದಾದೆ.



ಬಹಳ ವರ್ಷದಿಂದ ಬೇಕರಿಯ ಆಹಾರ ಪಧಾರ್ಥಗಳು ಹಾಗೂ ಕೇಕ್ ಮತ್ತು ಕ್ರಿಸಮಸ್ ಕುಸ್ವಾರ್ ತಿಂಡಿಗಳಿಗೆ ಪ್ರಸಿದಿ ಪಡೆದ ಈ ವಸಂತ ಬೇಕರಿ, ಗ್ರಾಹಕರ ಅನುಕೂಲತೆಗಾಗಿ ಈ ಹೊಸ ಶಾಖೆಯನ್ನು ತೆರೆದಿದ್ದೆವೆ ಎಂದು ಪ್ರಸಿದ್ದ ಸಮಾಜ ಸೇವಕ, ಹೆಸಾರಾಂತ ಸಂಘಟಕ, ಬೇಕರಿಯ ಮ್ಹಾಲಕ ಶ್ರೀಶನ್ ಹೇಳುತ್ತಾರೆ.

ಇದರ ಸ್ಥಾಪಕರು ಕೇರಳದ ಟಿ.ಸಿ.ಗೊವಿಂದ್. ಇವರು 1964ರಲ್ಲಿ ಮೊದಲಿಗೆ ಉಡುಪಿಯಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಚರ್ಚ್ ಹತ್ತಿರ ಡಾಯಾನ ಸರ್ಕಲ್‍ನಲ್ಲಿ ಇದೆ.. ಅಲ್ಲಿಂದ ಮುಂದಿನ ವರ್ಷ ಕುಂದಾಪುರದಲ್ಲಿ ಬೇಕರಿಯನ್ನು ತೆರೆದರು. ಮುಂದೆ ಮಂಗ್ಳೂರು, ಕೂರ್ಗಿನ ಕುಶಾಲ ನಗರ ಇಲ್ಲಿ ಶಾಖೆಗಳು ತೆರೆದುಕೊಂಡವು.

1965 ರಿಂದ ಸ್ಥಾಪಿಸಲ್ಪಟ್ಟ ಕುಂದಾಪುರದ ವಸಂತ ಬೇಕರಿಯು ಬಹಳ ಜನಪ್ರಿಯವಾಗಿ ಬೆಳೆಯಿತು. ಈ ಬೇಕರಿಯನ್ನು ಎಮ್ ರವೀಂದ್ರನ್‍ನವರು 2010 ರ ವರೆಗೆ ನೆಡಿಸಿಕೊಂಡು ಹೋದರು. ಈಗ ಇದನ್ನು ‘ನ್ಯೂ ವಸಂತ ಬೇಕರಿ’ ಯಾಗಿ ಶ್ರೀಶನ್ ನೆಡೆಸುತಿದ್ದಾರೆ. ಶ್ರೀಶನ್ ಕುಂದಾಪುರಲ್ಲಿ ವಾಸಿಸುವ ಕೇರಳಿಯರ ಮತ್ತು ಕೇರಳ ಜನರ ಸಹಮಿಲನದ ಖ್ಯಾತ ಸಾಂಸ್ಕ್ರತಿಕ ಸಂಘವಾದ ಕೈರಳಿ ಸಂಘದ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಕೇರಳದ ‘ಕನ್ನ ವೇವಸ್’ ಸಂಘದ ಅಧ್ಯಕ್ಷರಾಗಿದ್ದಾರೆ. ಶ್ರೀಶನ್ ಇಂದು ಕೇರಳದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕುಂದಾಪುರದಲ್ಲಿ ನೆಲಸಿ ಇಲ್ಲಿಯು ಅವರು ಅವರ ಒಡನಾಟ, ಸಹಕಾರ, ಉದಾರತ್ವದಿಂದ ಬೇಕಾದವರಾಗಿದ್ದಾರೆ.

ಶ್ರೀಶನ ತಮ್ಮ ಬೇಕರಿಯಲ್ಲಿ ಸಿಗುವ ತಿಂಡಿ ತಿನಿಸುಗಳ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾವು ನಮ್ಮ ಗ್ರಾಹಕರಿಗೆ ಆರೋಗ್ಯಕ್ಕೆ ಹಾನಿಕಾರಕವಾದ ತಿಂಡಿ ತಿನಿಸುಗಳನ್ನು ನೀಡುವುದಿಲ್ಲಾ, ಬಹಳ ಅಪಾಯಕಾರಿಯಾದ ಬಣ್ಣ ಮತ್ತು ಕೆಮಿಕಲ್‍ಗಳನ್ನು ಉಪಯೋಗಿಸುವುದಿಲ್ಲಾ. ಜನರಿಗೆ ಆರೋಗ್ಯಕರವಾದ ತಿಂಡಿ ತಿನಿಸುಗಳನ್ನು ನೀಡುವುದೆ ನಮ್ಮ ಶ್ರೆಯಸು ಶ್ರೀಶನ್ ಬಹಳ ಒತ್ತಿ ಹೇಳುತಾರೆ.

ಇಂತಹ ನಕಲಿ ಬಣ್ಣ, ಅಪಾಯಕಾರಿ ಕೆಮಿಕಲ್‍ಗಳಿಂದ ಅತ್ಯಂತ ಮಾರಕವಾದ ರೋಗಕ್ಕೆ ಮನುಶ್ಯ ಗುರಿಯಾಗುವುದು ಇಂದು ಸಾಮಾನ್ಯವಾಗಿದೆ ಎಂದು ಶ್ರೀಶನ್ ಬಣ್ಣಿಸುತಾರೆ.

ನಾವು ಹಾನಿಕಾರಕವಲ್ಲದ ಕೆಮಿಕಲ್ ಮತ್ತು ಬಣ್ಣಗಳನ್ನು ಬಳಸದೆ. ಆದಸ್ಟೂ ರುಚಿಕರವಾದ ತಿಂಡಿ ತಿನಿಸುಗಳನ್ನು ಗ್ರಾಹಕರಿಗೆ ನೀಡಲು ಸದಾ ಶ್ರಮಿಸುತ್ತೇವೆ. ನಮ್ಮಲ್ಲಿ ಅತ್ಯಂತ ರುಚಿಕರವಾದ ಸ್ವಾಧಿಸ್ಟವಾದ ಎಲ್ಲಾ ರೀತಿಯ ಕೇಕಗಳು ಸಿಗುತ್ತವೆ. ನಮ್ಮ ಕೇಕುಗಳ ರುಚಿಗೆ ಮನ ಸೋತವರು ಪರ ಉರಿನಲ್ಲಿರುವ ಜನರು ತಮ್ಮ ಉರಿಗೆ ಬಂದು ವಾಪಸು ಹೋಗುವಾಗ ಕೆಜಿ ಕಟ್ಟಲೆ ಕೇಕಗಳನ್ನು ತೆಗೆದು ಕೊಂಡು ಹೋಗುವ ದಾಖಲೆಗಳಿವೆ. ಅದನ್ನು ತಿಂದು ಅದರ ರುಚಿಗೆ ಮರುಳಾಗಿ ಅಲ್ಲಿಂದ ಇತರರು ತರಿಸಿಕೊಳ್ಳುವ ದಾಖಲೆ ಇವರಿದಾಗಿದೆ.

ಈ ಬೇಕರಿಯಲ್ಲಿ ಎಲ್ಲಾ ರೀತಿಯ ತಿಂಡಿ ತಿನಿಸುಗಳು ಬ್ರೆಡ್ಡ್, ರಸ್ಕ್, ಬೆಣ್ಣೆ ಬಟರ್, ಪಪ್ಸ್ ಸದಾಕಾಲವು ದೊರಕುತ್ತದೆ. ಹಾಗೆ ಎಲ್ಲಾ ರೀತಿಯ ಲಾಡು, ಬರ್ಪಿ, ಸಾಟ್ ,ಮೈಸೂರ್ ಪಾಕ್, ಪೇಡಾ ಎಲ್ಲಾ ತೀತಿಯ ಸಿಹಿತಿಂಡಿಗಳು, ಚಕ್ಕುಲಿ, ಮಿಕ್ಚರ್, ಸೆಂಗಾ, ಕಡಲೆ ಹೀಗೆ ಎಲ್ಲಾ ರೀತಿಯ ಹುರಿದ ತಿಂಡಿಗಳು ದೊರಕುತ್ತವೆ. ಎಲ್ಲಾ ರೀತಿಯ ಪಾನಿಯಗಳು ದೊರಕುತ್ತವೆ. ಮಧ್ಯಾನ್ನದ ಹೊತ್ತಿನಲ್ಲಿ ಕಾಲೇಜು, ಶಾಲಾ ಮಕ್ಕಳು. ವ್ರತ್ತಿ ಮಾಡುವರು, ಎಲ್ಲಾ ರೀತಿಯ ಗ್ರಾಹಕರಿಂದ ವಸಂತ ಬೇಕರಿ ತುಂಬಿ ತುಳುಕುತಿರುತ್ತಿದೆ.

ಈ ನ್ಯೂ ವಸಂತ ಬೇಕರಿಯ ಸ್ವಾಧಿಸ್ಟತೆಗೆ ಹಲವಾರು ಪ್ರಶಸ್ತಿ ಪತ್ರಗಳು ದೊರಕಿವೆ. ಹಿಂದುಸ್ಥಾನ್ ಲೀವರ್ ನೆಡೆಸಿದ ದಕ್ಷಿಣ ಭಾರತದ ಬೇಕರಿ ತಿನಿಸುಗಳ ಸ್ಪರ್ಧೆಯಲ್ಲಿ ವಸಂತ ಬೇಕರಿ ಉತ್ತಮ ಬೇಕರಿಗಳಲ್ಲಿ ಒಂದು ಎಂದು ಮಂಗ್ಳುರು ಪೆಂಟಾಗನ್ ನಲ್ಲಿ ಶಿಪಾರಸು ಪತ್ರವನ್ನು ಶ್ರೀಶನ್ ಪಡೆದಿರುತ್ತಾರೆ.

‘ಗ್ರಾಹಕರಿಗೆ ಆರೋಗ್ಯಕರ ಆಹಾರವೇ ವಸಂತ ಬೇಕರಿಯ ವ್ಯವಹಾರ’ ಎಂಬ ಧ್ಯೇಯದೊಂದಿಗೆ ವ್ಯವಹಾರ ನೆಡೆಸುವ, ನಮ್ಮ ಸಂಸ್ಥೆ ನೆಡೆಸಿದ ಗೋದಲಿಗಳ ಸ್ಪರ್ಧೆಗೆ ಮುಖ್ಯ ಪೆÇೀಶಕರಾಗಿ ನಮಗೆ ಸಹಕರಿಸುತ್ತಾ ಇರುವ ಇವರು, ಈ ನೂತನ ಶಾಖೆಗೆ ಮತ್ತು ಇವರ ಇಡೀ ಸಂಸ್ಥೆಗೆ ಇನ್ನೂ ಹೆಚ್ಚಿನ ಶ್ರೇಯಸು ದೊರಕಲಿ ಎನ್ನುತ್ತಾ ಅವರಿಗೆ ನಮ್ಮ ಸಂಸ್ಥೆ ಕೆನಾರ ನ್ಯೂಸ್ ಎಲ್ಲಾ ರೀತಿಯಿಂದ ಶುಭವನ್ನು ಕೊರುತದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here