Tuesday 13th, May 2025
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಯಾನ್, ಪುರಂದರ ದಾಸರ ಆರಾಧನೋತ್ಸವ

Published On : 23 Jan 2018   |  Reported By : Rons Bantwal


ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಮತ್ತು ಬಿ. ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲ ಸಯಾನ್, ಶ್ರೀ ಪುರಂದರ ದಾಸರ ಆರಾಧನೋತ್ಸವವನ್ನು ಶನಿವಾರ ದಿನಾಂಕ ೨೦. ೧. ೨೦೧೮ ರಂದು ಸೀವುಡ್ಸ್, ನೇರೂಲ್ ನಲ್ಲಿರುವ 'ಆಶ್ರಯ' ದಲ್ಲಿ ಸಂಭ್ರಮದಿಂದ ಆಚರಿಸಿತು. ಸಂಜೆ ಶ್ರೀ ಕೃಷ್ಣ ಬಾಲಾಲಯದಿಂದ ಶ್ರೀ ಪುರಂದರ ದಾಸರ ಭಾವಚಿತ್ರವನ್ನು, ಪುರಂದರದಾಸರಂತೆ ವೇಷ ಧರಿಸಿದ ಶ್ರೀ ರಘುಪತಿ ಉಡುಪರು ಹಾಗೂ ಭಕ್ತಾದಿಗಳ ಗೀತ ನರ್ತನದ ಮೆರವಣಿಗೆಯೊಂದಿಗೆ ಸಭಾಗೃಹಕ್ಕೆ ತಂದು ಶ್ರೀ ಗೋಪಾಲಕೃಷ್ಣ ದೇವರ ಭಾವಚಿತ್ರದೊಂದಿಗೆ, ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ, ಬಾಲ ಕಲಾವೃಂದ, ಶ್ರೀ ಕೃಷ್ಣ ಭಜನಾ ಮಂಡಳಿ, , ಹರಿಕೃಷ್ಣ ಭಜನಾ ಮಂಡಳಿಯವರಿಂದ ಪುರಂದರದಾಸರ ದೇವರನಾಮ ಸಂಕೀರ್ತನೆ ನೆರವೇರಿತು. ಬಾಲಾಲಯದ ಆರ್ಚಕರಾದ ಕೃಷ್ಣಪ್ರಸಾದ ಕೆದಿಲಾಯರು ಶ್ರೀ ದೇವರಿಗೆ .ಮಹಾ ಮಂಗಳಾರತಿಗೈದು, ತಮ್ಮ ಪ್ರಾರ್ಥನೆಯಲ್ಲಿ ಗೋಕುಲ ಕಟ್ಟಡ ನಿರ್ಮಾಣದ ಕಾರ್ಯ ನಿರ್ವಿಘ್ನವಾಗಿ ನೆರವೇರಿ, ಅತಿ ಶೀಘ್ರದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆಯಾಗಲಿ ಎಂದು ಹಾರೈಸಿ, ಅಂದಿನ ಧಾರ್ಮಿಕ ಕಾರ್ಯಕ್ಕೆ ದೇಣಿಗೆಯನ್ನಿತ್ತ ಸೇವಾರ್ಥಿಗಳಿಗೆ ಹಾಗೂ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ. ಎಸ್. ಕೆ. ಬಿ. ಎಸೋಸಿಯೇಶನ್ ನ ಪದಾಧಿಕಾರಿಗಳು ಹಾಗೂ ಕಾರ್ಯಕಾರೀ ಸಮಿತಿ ಸದಸ್ಯರುಗಳು ಸೇರಿದಂತೆ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here