Tuesday 13th, May 2025
canara news

ಮೈಸೂರು ಅಸೋಸಿಯೇಶನ್‍ನ ತ್ರಿದಿನಗಳ ನಾಟಕೋತ್ಸವ ಸಮಾಪನ-ಬಹುಮಾನ ವಿತರಣೆ

Published On : 23 Jan 2018   |  Reported By : Rons Bantwal


ಅವಕಾಶದಿಂದ ಪ್ರತಿಭೆಗಳ ಅನಾವರಣ ಸಾಧ್ಯ : ಕೆ.ಎಲ್ ಶ್ರೀವತ್ಸ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.23: ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಆದ್ಯ ರಂಗಾಚಾರ್ಯ ಫೌಂಡೇಶನ್‍ನ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವವು ಸಮಾಪನ ಗೊಂಡಿತು. ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹÀದಲ್ಲಿ ಕಳೆದ ರವಿವಾರ ಸಂಜೆ ನಡೆಸಲ್ಪಟ್ಟ ನಾಟಕೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಪ್ರಶಸ್ತಿ ಆದ್ಯ ರಂಗಾಚಾರ್ಯ ಫೌಂಡೇಶನ್‍ನ ನಿರ್ದೇಶಕಿ ಡಾ| ಉಷಾ ದೇಸಾಯಿ ಉಪಸ್ಥಿತರಿದ್ದರು.

ಮುಖವಾಣಿ ನೇಸರು ಪತ್ರಿಕೆ ಆಯೋಜಿಸಿರುವ ಜಾಗತಿಕ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಈ ಬಾರಿ ಒಟ್ಟು 28 ತಂಡಗಳು ಪಾಲ್ಗೊಂಡಿದ್ದು ರಂಗಕರ್ಮಿಗಳಾದ ಬಿ.ವಿ ಕದರಾಮ, ಡಾ| ಭರತ್‍ಕುಮಾರ್ ಪೆÇಲಿಪು ಸ್ಪರ್ಧಾ ನಾಟಕಗಳನ್ನು ಪರಿಶೀಲಿಸಿ ಬಹುಮಾನಗಳನ್ನು ಪ್ರಕಟಿಸಿದ್ದರು. ಕೆ.ಎಲ್ ಶ್ರೀವತ್ಸ ರಚಿತ `ಸಾ.ವಿ.ಸಂ.' ನಾಟಕ ಪ್ರಥಮ ಬಹುಮಾನ, ಪ್ರಭಾಕರ್ ರಾವ್ ಬರಹದ `ಷೇಕ್ಸ್‍ಪಿಯರ್‍ನ ಬುರುಡೆ' ನಾಟಕ ದ್ವಿತೀಯ ಹಾಗೂ ಬೇಲೂರು ರಘುನಂದನ್ ಅವರ `ಬೆಳಕಿನ ಅಂಗಡಿ' ನಾಟಕ ತೃತೀಯ ಬಹುಮಾನಕ್ಕೆ ಪಾತ್ರವಾದವು. ಡಾ| ಸಿ.ಎಂ ಗೋವಿಂದ ರೆಡ್ಡಿ ರಚಿತ `ಸಿರಿಧಾನ್ಯ' ನಾಟಕ ಪೆÇ್ರೀತ್ಸಾಹಕ ಬಹುಮಾನ ತನ್ನದಾಗಿಸಿತು.

ಮೈಸೂರು ಅಸೋಸಿಯೇಶನ್ ಮುಂಬಯಿ ಅಧ್ಯಕ್ಷೆ ಕಮಲಾ ಕಾಂತರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಸ್ಮರಣಿಕೆ, ಪ್ರಶಸ್ತಿಪತ್ರಗಳನ್ನು ಡಾ| ಉಷಾ ಪ್ರದಾನಿಸಿ ಅಭಿನಂದಿಸಿದರು.

ಬಹುಮಾನ ವಿಜೇತ ಕೆ.ಎಲ್ ಶ್ರೀವತ್ಸ ಮಾತನಾಡಿ ಕನಸು ಹರಕೆ ಮಾಡಿ ಕಟ್ಟಿಕೊಂಡರೆ ಸಾಧನೆ ಸಾಧ್ಯವಾಗುವುದು. ಇದಕ್ಕೆ ಕಲಾಭಿಮಾನಿಗಳು ನಮಗೆ ಅವಕಾಶ ಮಾಡಿಕೊಟ್ಟಿದ್ದ್ದಾರೆ. ಅವಕಾಶದಿಂದ ಮಾತ್ರ ಪ್ರತಿಭೆಗಳ ಅನಾವರಣ ಸಾಧ್ಯ. ಸಾಹಿತ್ಯಾಭಿಮಾನಿಗಳು, ಕಲಾಸಕ್ತರು ಬರೆಯಲು ಪೆÇ್ರೀತ್ಸಾಹಿಸಿ ಒತ್ತಡ ನೀಡಿದಾಗ ಅವಕಾಶ ಒದಗಿಸಿದಾಗ ಪ್ರತಿಭೆಗಳು ಚಿಗುರೊಡೆಯುತ್ತದೆ. ನಾವು ಏನು ಸಾಧನೆ, ಕಲಾಸೇವೆ ಮಾಡುತ್ತೇವೆ ಈ ನಮ್ಮ ಕಾರ್ಯಚಟುವಟಿಕೆಗಳು ನಮ್ಮ ಮಕ್ಕಳಿಗೆ ಅರ್ಥವಾಗಿಸಬೇಕು. ಆವಾಗ ಮಕ್ಕಳಲ್ಲೂ ಸಾಂಸ್ಕೃತಿಕ ಅಭಿರುಚಿ ಹೆಚ್ಚುತ್ತದೆ. ಸ್ಪರ್ಧೆಗಳಿಂದ ಸಂಸ್ಕೃತಿಯ ವಿಸ್ತಾರತ್ವ ವಿಪುಲ ಗೊಳ್ಳುವುದು. ಅದಕ್ಕಾಗಿ ತಾವೆಲ್ಲರೂ ಲೇಖಕನನ್ನು ಬಳಸಿ ಅವರ ಬರಹಕ್ಕೆ ಸುಸ್ತುನೀಡಿ ಅವಾಗಲೇ ಕನ್ನಡಕ್ಕೆ ಶಿಸ್ತು ಬರಲಿದೆ ಎಂದು ರಂಗಮಂಚ ನಾಟಕೋತ್ಸವ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ರಂಗಸಕ್ತರ ಸೇವಾಸಕ್ತಿಯನ್ನು ಮನವರಿಸಿದರು.

ಡಾ| ಬಿ.ಆರ್ ಮಂಜುನಾಥ್ ಸ್ವಾಗತಿಸಿದರು. ಕೆ.ಮಂಜುನಾಥಯ್ಯ ಪ್ರಸ್ತಾವನೆಗೈದರು. ಅಸೋಸಿಯೇಶನ್‍ನ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ಕಾರ್ಯಕ್ರಮ ನಿರೂಪಿಸಿದರು. ಅತಿಥಿü ಹಾಗೂ ಸ್ಪರ್ಧಾ ವಿಜೇತರÀನ್ನು ಪರಿಚಯಿಸಿದರು. ಡಾ| ಎಸ್.ಕೆ ಭವಾನಿ, ಶೈಲಿನಿ ಎ.ರಾವ್, ಅಸೋಸಿಯೇಶನ್‍ನ ವ್ಯವಸ್ಥಾಪಕ ಬಿ.ಕೆ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದು ಬೆಂಗಳೂರುನ ಎಕ್ಸ್‍ಫ್ರೇಶನ್ ಥಿsಯೇಟರ್ ತಂಡವು ಪ್ರಕಾಶ್ ಜಡೇನವರ್ ನಿರ್ದೇಶನದಲ್ಲಿ `ಕೇಳು ಜನುಮೇಜಯ' ಹಿಂದಿ ನಾಟಕ ಪ್ರÀದರ್ಶಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here