Tuesday 13th, May 2025
canara news

ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ

Published On : 24 Jan 2018   |  Reported By : media release


ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ , ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 21 ರಂದು ತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು . ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿ ಆನಂದ್ ಭಾಗವಹಿಸಿದ್ದರು . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು . ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು . ಭವಿಷ್ಯದಲ್ಲಿ ವರ್ತಮಾನದ ಜ್ಞಾನ ಶಿಕ್ಷಕನನ್ನು ನೇಪಥ್ಯಕ್ಕೆ ಸರಿಸುತ್ತದೆ ಎಂದರು .

ವಿಭಾಗದ ಮುಖ್ಯಸ್ಥ ಪ್ರೊ ಜಯಂತ ರಾಥೋಡ್ ಸ್ವಾಗತಿಸಿದರು . ಡಾ ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು .ಪ್ರೊ ದಿವ್ಯ ರವಿ ನಿರೂಪಿಸಿ , ಪ್ರೊ ಸುದರ್ಶನ್ ವಂದಿಸಿದರು .

ಈ ಕಾರ್ಯಾಗಾರದಲ್ಲಿ 20 ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳ ಬೋಧಕರು ಭಾಗವಹಿಸುತ್ತಿದ್ದಾರೆ .

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here