Tuesday 13th, May 2025
canara news

ಕುಕ್ಕಾಜೆ: ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪ್ರಭಾಷಣ

Published On : 24 Jan 2018   |  Reported By : Bernard J Costa


ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆ ಹಾಗೂ ಶರಫುಲ್ ಇಸ್ಲಾಮ್ ಕಮೀಟಿ ಕುಕ್ಕಾಜೆ ಇದರ ಆಶ್ರಯದಲ್ಲಿ 40 ನೇ ವಾರ್ಷಿಕ ಕುತುಬಿಯ್ಯತ್ ನೇರ್ಚೆ ಹಾಗೂ ಪ್ರಭಾಷಣ ಕಾರ್ಯಕ್ರಮದಲ್ಲಿ ಕೇರಳ ಪತ್ತನಾಪುರಂ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅಲ್ಲಾಹನ ಕರುಣೆ ಎಂಬ ವಿಷಯದ ಬಗ್ಗೆ ಮುಖ್ಯ ಪ್ರಭಾಷಣ ಮಾಡಿದರು.

ಸಯ್ಯದ್ ಹುಸೈನ್ ಬಾಅಲವಿ ತಂಙಳ್ ದುವಾಶೀರ್ವಚನಗೈದರು. ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆ ಮುದರ್ರಿಸ್ ಎ.ಎಂ.ಅಬ್ದುಲ್ಲ ಮದನಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಕುಕ್ಕಾಜೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ., ಕಾರ್ಯದರ್ಶಿ ರಫೀಕ್, ಖಜಾಂಜಿ ಹಸೈನಾರ್ ಪಿ.ಕೆ., ಶರಫುಲ್ ಇಸ್ಲಾಮ್ ಕಮೀಟಿ ಅಧ್ಯಕ್ಷ ಹಂಝ ಕುರಿಯಪ್ಪಾಡಿ, ಸಾಲೆತ್ತೂರು ರೇಂಜ್ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಅಬೂಬಕ್ಕರ್ ಟಿ., ಪಾತೂರು ಅಹ್ಮದ್ ಉಸ್ತಾದ್, ಸಾಲೆತ್ತೂರು ರೇಂಜ್ ಮುಅಲ್ಲಿಂ ಕಾರ್ಯದರ್ಶಿ ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ಮಾಜಿ ಮುಕ್ರಿ ಅಬೂಬಕ್ಕರ್ ಮುಸ್ಲಿಯಾರ್, ಶರಫುಲ್ ಇಸ್ಲಾಮ್ ಕಮೀಟಿ ಕಾರ್ಯದರ್ಶಿ ಹಾರಿಸ್, ಮಾಜಿ ಕಾರ್ಯದರ್ಶಿ ಉಸ್ಮಾನ್ ಕುಕ್ಕಾಜೆ, ಕೋಶಾಧಿಕಾರಿ ಬಶೀರ್ ಮಂಚಿ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನೇರಪ್ರಸಾರವನ್ನು ಯೂಟ್ಯೂಬ್‍ನಲ್ಲಿ ಎಸ್.ಜೆ.ಎಸ್.ಮೀಡಿಯಾ ಲೈವ್ ಟಿವಿ ಪ್ರಸಾರ ಮಾಡಿದರು. ಹಿದಾಯತುಲ್ ಇಸ್ಲಾಂ ಮದರಸ ಕುಕ್ಕಾಜೆ ಸದರ್ ಮುಅಲ್ಲಿಂ ಉಮರ್ ಫಾರೂಖ್ ಅರ್ಶದಿ ಸ್ವಾಗತಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here