Tuesday 13th, May 2025
canara news

ಶಿವರಾಜ್ ಹತ್ಯೆ ಪ್ರಕರಣ; ಮಂಗಳೂರು ಪೊಲೀಸರಿಂದ ಮೂವರ ಬಂಧನ

Published On : 23 Jan 2018   |  Reported By : canaranews network


ಮಂಗಳೂರು: ಮಂಗಳೂರಿನಲ್ಲಿ ಭಾನುವಾರ ತಡರಾತ್ರಿ ನಡೆದ ಶಿವರಾಜ್ (39) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಸುನೀಲ್ (32), ಧೀರಜ್ (25), ಗದಗ ಮೂಲದ ಮಲ್ಲೇಶ್ (23) ಎಂದು ಗುರುತಿಸಲಾಗಿದೆ. ಆರೋಪಿಗಳು ಹಳೇ ದ್ವೇಷದ ಹಿನ್ನಲೆಯಲ್ಲಿ ಶಿವರಾಜ್ ಸಹೋದರನನ್ನು ಕೊಲೆ ಮಾಡಲು ಬಂದಿದ್ದೆವು. ಆದ್ರೆ, ತಪ್ಪಿ ಶಿವರಾಜ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರೆದುರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಮಂಗಳೂರು ಹೊರವಲಯದ ತಣ್ಣೀರುಬಾವಿ ಎಂಬಲ್ಲಿ ತಡರಾತ್ರಿ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿವರಾಜ್ ಅವರನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ್ದರು.

ರೌಡಿಶೀಟರ್ ಭರತೇಶ್ ಎಂಬವನ ಸಹೋದರನಾಗಿದ್ದ ಶಿವರಾಜ್ ರನ್ನು ಭರತೇಶ್ ಎಂದುಕೊಂಡು ಹತ್ಯೆ ಮಾಡಲಾಗಿದೆ.ಆರೋಪಿಗಳಿಗೆ ಭರತೇಶ್ ಮೇಲೆ ದ್ವೇಷವಿತ್ತು. ಪ್ರತಿದಿನ ಮನೆಯ ಟೇರೆಸ್ ಮೇಲೆ ಭರತೇಶ್ ಮಲಗುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು ತಡರಾತ್ರಿ ದಾಳಿ ನಡೆಸಿ ಹತ್ಯೆ ಮಾಡಿದ್ದರು.ಆದರೆ, ಭಾನುವಾರ ಭರತೇಶ್ ಬೇರೆಡೆ ಹೋಗಿದ್ದ ಕಾರಣ ಸಹೋದರ ಶಿವರಾಜ್ ಮನೆಯ ಟೆರೇಸ್ ಮೇಲೆ ಮಲಗಿದ್ದರು. ಈ ನಡುವೆ ಕೊಲ್ಲಲು ಬಂದವರು ಟೆರೇಸ್ ಮೇಲೆ ಮಲಗಿದ್ದವ ಭರತೇಶ್ ಎಂದುಕೊಂಡು, ಅನ್ಯಾಯವಾಗಿ ಶಿವರಾಜ್ ಅವರ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಈ ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆ ಇದ್ದು, ಇನ್ನೂ ಕೆಲವು ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here