Monday 1st, September 2025
canara news

ವಡಾಲದಲ್ಲಿ ಪರ್ತಗಾಳಿ ಮಠದ ಶಿಷ್ಯ ಸ್ವೀಕಾರ ಸಂಭ್ರಮ-ಸ್ವರ್ಣ ಸನ್ಯಾಸ ದೀಕ್ಷಾ ವೈಭವೋತ್ಸವ

Published On : 27 Jan 2018   |  Reported By : Rons Bantwal


ಅಧ್ಯಾತ್ಮ ಸೊಗಡು ಮುಂಬಯಿ ನೆಲದಲ್ಲಿದೆ : ವಿದ್ಯಾಧಿರಾಜ ತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.27: ವಡಾಲಾದ ಶ್ರೀರಾಮನ ಮಂದಿರದೊಂದಿಗೆ ಶ್ರೀ ದ್ವಾರಕನಾಥ ಶ್ರೀಗಳ ಸಂಕಲ್ಪ ಪೂರ್ಣವಾಗಿದೆ. ಪರ್ತಗಾಳಿ ಮಠವು ಪ್ರಸನ್ನ, ಪ್ರಶಾಂತ ವಾತಾವರಣ ನಿರ್ಮಿಸಿದಂತೆ ಮುಂಬಯಿಯಲ್ಲಿನ ವಡಲಾದ ಈ ಮಂದಿರವು ಧಾರ್ಮಿಕ ಮಧ್ಯವರ್ತಿಯಾಗಿದೆ. ಆ ಮೂಲಕ ಗುರುವರಿಯರ ಧರ್ಮ ನಿಷ್ಠೆ ಸಂಪನ್ನವಾಗಿದೆ. ಸಾರಸ್ವತ ಸಮಾಜಕ್ಕೆ ಗಾಯತ್ರಿ ಜಪವು ಮುಖ್ಯವಾಗಿದೆ. ಅಧ್ಯಾತ್ಮದಲ್ಲೇ ಗುರುಪರಂಪರೆ ಬೇರುಬಿಟ್ಟು ಬೆಳೆದು ನಿಂತಿದ್ದು, ಇದೇ ಭಾರತೀಯ ಧರ್ಮಶ್ರೇಷ್ಠತೆ. ಇಂತಹ ಗುರುಪರಂಪರೆಗೆ ನಿಷ್ಠವಾಗಿ ಮುನ್ನಡೆದಾಗಲೇ ಮೂಲಸ್ವರೂಪ ಸ್ಥಾಯಿಯಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಅಧ್ಯಾತ್ಮ ಸೊಗಡು ಮುಂಬಯಿ ನೆಲದಲ್ಲಿದೆ. ಮಹಾರಾಷ್ಟ್ರವು ಸದ್ಧರ್ಮಶೀಲಾ ನಾಡಾಗಿದೆ ಎನ್ನುವುದÀಕ್ಕೆ ನನ್ನ ಸನ್ಯಾಸ ದೀಕ್ಷೆಯೇ ಸಾಕ್ಷಿ. ಕಾರಣ ಇದೇ ರಾಮಮಂದಿರದ ಪಾವನ ಕ್ಷೇತ್ರದಲ್ಲಿ ನನಗೆ ಗುರುದೀಕ್ಷೆ ಸಿದ್ಧಿಸಿದೆ. ತಮ್ಮೆಲ್ಲರ ಧರ್ಮಶ್ರದ್ಧೆಯಿಂದ ಭವಿಷ್ಯತ್ತಿನ್ನುದ್ದಕ್ಕೂ ಪರ್ತಗಾಳಿ ಸಂಸ್ಥಾನದ ಗುರು ಪರಂಪರೆ ಪ್ರಕಾಶಮಾನವಾಗಿ ಬೆಳಗಲಿ. ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧಿಪತಿ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ನುಡಿದರು.

ಜಿವೋತ್ತಮ ಮಠದ 23ನೇ ಯತಿವರ್ಯ ಸನ್ಯಾಸದೀಕ್ಷಾ ಸ್ವರ್ಣಮಹೋತ್ಸವದ ಶುಭಾವಸರದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಡಾಲ ಮುಂಬಯಿ ಸಮಿತಿ, ಜಿಎಸ್‍ಬಿ ಗಣೇಶೋತ್ಸವ ಉತ್ಸವ ಸಮಿತಿ ವಡಾಲ ಹಾಗೂ ನೂರಾರು ಭಕ್ತಾಭಿಮಾನಿಗಳು ಇಂದಿಲ್ಲಿ ಗುರುವಾರ ರಾತ್ರಿ ವಡಲಾ ಅಲ್ಲಿನ ದ್ವಾರಕಾನಾಥ ಭವನದಲ್ಲಿ ಭಕ್ತಿಪೂರ್ವಕವಾಗಿ ಪ್ರದಾನಿಸಿದ ಗುರುವಂದನಾ ಗೌರವ ಸ್ವೀಕರಿಸಿ ವಿದ್ಯಾಧಿರಾಜತೀರ್ಥ ಶ್ರೀಪಾದರು ಸದ್ಭಕ್ತರನ್ನು ಅನುಗ್ರಹಿಸಿ ಮಾತನಾಡಿದರು.

ಶ್ರೀ ಸಂಸ್ಥಾನ ಜೀವೋತ್ತಮ ಮಠದ ಪಟ್ಟಶಿಷ್ಯ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಸಂಭ್ರಮಿಸಲ್ಪಟ್ಟ ಸಮಾರಂಭದಲ್ಲಿ ಮಂದಿರದ ಪ್ರಧಾನ ಅರ್ಚಕ ಶ್ರೀ ಸುಧಾಮ ಅನಂತ ಭಟ್ ಮತ್ತು ಪುರೋಹಿತರು ಪೂಜಾಧಿಗಳನ್ನು ನೆರವೇರಿಸಿದರು. ಗೋವಿಂದ ಎಸ್.ಭಟ್ ಮತ್ತು ಎನ್.ಎನ್ ಪಾಲ್ ಪಾದಪೂಜೆಗೈದು ಸ್ವಾಮೀಜಿ ಅವರನ್ನು ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 5.00 ಲಕ್ಷ ಹಾಗೂ ರಾಮ ಮಂದಿರ ವಡಲಾ ವತಿಯಿದ 51 ಗ್ರಾಂ ಚಿನ್ನದ ನಾಣ್ಯ ಅರ್ಪಿಸಿ ಗೌರವಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸಮನ್ವಯ ಪರಸ್ಪರ ಸಾಮರಸ್ಯತ್ವವಿದೆ. ತತ್ತ್ವ, ಸಿದ್ಧಾಂತ, ಪ್ರತಿಪಾದನೆಗಳ ದೃಷ್ಟಿಯಿಂದ ವಿಭಿನ್ನವಾಗಿದ್ದರೂ ಒಟ್ಟಾರೆ ಎಲ್ಲಾ ಧರ್ಮಗಳ ಉದ್ದೇಶವೊಂದೇ. ನಮ್ಮ ಜೀವನವನ್ನು ಸತ್ಕಾರ್ಯದ ಅನುಷ್ಠಾನಕ್ಕೆ ಮೀಸಲಾಗಿಸಬೇಕು. ಇಂತಹ ಜೀವನಾದರ್ಶಕ್ಕೆ ಗುರುಸಂಸ್ಥಾನಗಳು ಪೂರಕ. ಆದುದರಿಂದ ಜೀವನ ವಿಧಾನ ಬೋಧಿಸುವ ಗುರುಪೀಠ, ಧರ್ಮಗುರುಗಳಲ್ಲಿ ನಿಕಟವಾಗಿದ್ದು ಸಂಸ್ಕಾರಯುತ ಬದುಕನ್ನು ರೂಢಿಸಿ ಕೊಳ್ಳಿರಿ ಎಂದೂ ವಿದ್ಯಾಧಿರಾಜತೀರ್ಥ ಶ್ರೀಪಾದರು ಕರೆಯಿತ್ತರು.

ಗುರುವಿಗೆ ಎಲ್ಲಿ ಗೌರವವಾಗುತ್ತದೆ ಅಲ್ಲಿ ಶಿಷ್ಯರಿಗೆ ಆನಂದವಾಗುತ್ತದೆ. ಗುರುವಿದ್ದಾಗ ಗುರಿ ಸುಲಭವಾಗಿ ತಲುಪಲು ಸಾಧ್ಯ. ಗುರುವಿನಿಂದ ಜೀವನದ ಉತ್ಕರ್ಷ ಹೆಚ್ಚುತ್ತದೆ. ಗುರುಗಳು ಶಿಲ್ಪಕಾರನಂತೆ, ಅಜ್ಞಾನವಿಲ್ಲದ ವ್ಯಕ್ತಿಗೆ ಭವಿಷ್ಯ ರೂಪಿಸುವ ಗುರು ಶ್ರೇಷ್ಠರು . ಕಾಯಕ ಸಿದ್ಧವಾಗಲು ಗುರುವಿನ ಪ್ರೇರಣೆ ಅಗತ್ಯವಾಗುತ್ತದೆ. ಗುರುವಿನ ಜ್ಞಾನರ್ಜನೆಯ ಆಳ ದೇವನೊಬ್ಬನೇ ಬಲ್ಲವನಾಗಿರುತ್ತಾನೆ. ಸ್ವಾಮಿನಿಷ್ಠೆಯಿಂದ ಭಕ್ತಿಮಾರ್ಗವು ಸುಲಭವಾಗುವುದು. ಆದುದರಿಂದ ಭೌತವಾದಿ ನಾಗರಿಕತೆಯ ಅಟ್ಟಹಾಸಕ್ಕೆ ತೆರೆಯೆಳೆದು ಅಧ್ಯಾತ್ಮಿಕತೆಯನ್ನು ಬೆಳೆಸುವು ಅಗತ್ಯವಿದೆ. ನಮ್ಮಲ್ಲಿನ ಸಾಂಸ್ಕೃತಿಕ, ಧಾರ್ಮಿಕ ಆಕ್ರಮಣಗಳನ್ನು ತಡೆದಾಗ ಅಧ್ಯಾತ್ಮಿಕ ಜಾಗೃತಿ ತನ್ನಷ್ಠಕ್ಕೇ ಮೂಡುವುದು ಎಂದು ವಿದ್ಯಾಧೀಶ ಸ್ವಾಮೀಜಿ ತಿಳಿಸಿದರು.

ಶ್ರೀ ರಾಮ ಮಂದಿರ ವಡಲಾ ಮುಂಬಯಿ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಡಿ.ಕಾಮತ್, ಕಾರ್ಯದರ್ಶಿ ಅಮೊಲ್ ವಿ.ಪೈ, ಕೋಶಾಧಿಕಾರಿ ಶಾಂತರಾಮ ಎ.ಭಟ್ ಮತ್ತು ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಮುಕುಂದ್ ಕಾಮತ್, ಕೋಶಾಧಿಕಾರಿ ರಾಜೀವ್ ಶೆಣೈ, (ವಿಶ್ವಸ್ಥ ಸದಸ್ಯರು ಜಿ.ಎಸ್ ಪಿಕ್ಳೆ, ಉಮೇಶ್ ಪೈ, ಗುರುದತ್ತ್ ನಾಯಕ್ ಸೇರಿದಂತೆ ಉಭಯ ಸಂಸ್ಥೆಯ ಸದಸ್ಯರನೇಕರು, ಮಹಿಳಾ ಸೇವಕರ್ತೆಯರು, ನೂರಾರು ರಾಮ ಸೇವಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಪುಷ್ಪಗುಚ್ಛವನ್ನಿತ್ತು ಅಭಿವಂದಿಸಿದರು.

ವೈಧಿಕರಾದ ವೇ|ಮೂ|ಮೋಹನ್‍ದಾಸ್ ಆಚಾರ್ಯ, ವೇ|ಮೂ| ಸುಧಾಮ ಭಟ್, ವೇ|ಮೂ| ಆನಂತ್ ಭಟ್ ದೇವಸ್ತುತಿಯೊಂದಿಗೆ ಸಮಾರಂಭ ಆದಿಗೊಂಡಿತು. ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ಸ್ವಾಗತಿಸಿ ಶ್ರೀಗಳ ಧಾರ್ಮಿಕ ಸೇವೆ ಸ್ಮರಿಸಿದರು. ಶ್ರೀ ರಾಮ ಮಂದಿರ ವಡಲಾ ಮುಂಬಯಿ ಸಮಿತಿ ಅಧ್ಯಕ್ಷ ಗೋವಿಂದ ಎಸ್.ಭಟ್ ಪ್ರಸ್ತಾವನೆಗೈದರು ರಂಜನ್ ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here