Tuesday 13th, May 2025
canara news

ಅಬ್ದುಲ್ ಬಷೀರ್ ಹತ್ಯೆಗೆ ಜೈಲಲ್ಲಿ ಸಂಚು: ಮಂಗಳೂರು ಪೊಲೀಸ್ ಆಯುಕ್ತ

Published On : 27 Jan 2018   |  Reported By : canaranews network


ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಜನವರಿ 3 ರ ರಾತ್ರಿ ನಡೆದ ಅಬ್ದುಲ್ ಬಷೀರ್ ಅವರ ಹತ್ಯೆಗೆ ಮಂಗಳೂರು ಜೈಲಿನಲ್ಲಿಯೇ ಸಂಚು ರೂಪಿಸಲಾಗಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಬ್ದುಲ್ ಬಷೀರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ತನಿಖೆಗೆ ಒಳಪಡಿಸಿದಾಗ ಈ ಹತ್ಯಾ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆಯಿತು ಎಂದು ಅವರು ಹೇಳಿದರು.

ಈ ಹತ್ಯೆ ಪ್ರಕರಣದ ಸಂಚನ್ನು ಮಂಗಳೂರು ಜೈಲಿನಲ್ಲಿ ಹೆಣೆಯಲಾಗಿತ್ತು ಎಂದು ಹೇಳಿದ ಅವರು , "ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಂಟ್ವಾಳದ ಮಿಥುನ್ ಪೂಜಾರಿ, ಮಂಗಳೂರು ಕಾವೂರಿನ ತಿಲಕ್ ರಾಜ್, ಬಂಟ್ವಾಳ ಫರಂಗಿಪೇಟೆಯ ರಾಜು ಹಾಗು ಮಂಗಳೂರು ಕೋಡಿಕಲ್ ನಿವಾಸಿ ಅನೂಪ್ ಕುಲಾಲ್ ಈ ಹತ್ಯಾ ಪ್ರಕರಣದಲ್ಲಿ ಇದ್ದಾರೆ," ಎಂದು ಅವರು ವಿವರ ನೀಡಿದರು.ಈ ನಾಲ್ವರ ಪೈಕಿ 3 ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ. ಮತ್ತೊಬ್ಬ ಆರೋಪಿ ಅನುಪ್ ಕುಲಾಲ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here