Tuesday 13th, May 2025
canara news

ಮಂಗಳೂರಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ – ಶಾಂತಿ, ಸಹನೆ ನಮ್ಮ ಉಸಿರಾಗಲಿ ಎಂದ ರೈ

Published On : 27 Jan 2018   |  Reported By : canaranews network


ಮಂಗಳೂರು: ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸಂಭ್ರಮದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪರೇಡ್ ಗೌರವ ಸ್ವೀಕರಿಸಿದ ಬಳಿಕ ಗಣರಾಜ್ಯೋತ್ಸವ ಸಂದೇಶ ನೀಡಿದರು. ಜ್ಯಾತ್ಯತೀತ ಹಾಗೂ ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರದಲ್ಲಿ ಸಹಬಾಳ್ವೆಯ ಬದುಕು ನಮ್ಮದಾಗಿಸಬೇಕು. ಶಾಂತಿ, ಸಹನೆ, ಸಂಯಮ ನಮ್ಮ ಉಸಿರಾಗಬೇಕು ಎಂದು ಹೇಳಿದರು.ಜನರು ಕೆಟ್ಟವರಾಗಿದ್ದರೆ ಸಂವಿಧಾನವು ಉತ್ತಮವಾಗಿರಲು ಸಾಧ್ಯವಿಲ್ಲ.

ಜನ ಸರಿ ಇದ್ದರೆ ದೇಶದ ಸಂವಿಧಾನವು ಉತ್ತಮವಾಗಿರುತ್ತದೆ. ನಮ್ಮ ದೇಶದ ಸಂಸ್ಕೃತಿ ಇತಿಹಾಸ ಹೊಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಬಾಳಬೇಕು ಎಂದು ತಿಳಿಸಿದ್ದಾರೆ.ಪೊಲೀಸರು ಸೇರಿದಂತೆ ನಾನಾ ತಂಡಗಳ ಶಿಸ್ತುಬದ್ಧ ಕವಾಯತು, ವಿದ್ಯಾರ್ಥಿಗಳ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ, ವಿಂಟೇಜ್ ಕಾರುಗಳ ರ್ಯಾಲಿಯೊಂದಿಗೆ ಸಂಭ್ರಮದ ಗಣರಾಜ್ಯೋತ್ಸವ ನಡೆದಿದೆ.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ. ಆರ್ ಲೋಬೋ, ಬಿ ಎ ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here