Tuesday 13th, May 2025
canara news

ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ: ಪುರಸ್ಕಾರ ಸಮಾರಂಭ ಮೌಲ್ಯಗಳ ಅನುಷ್ಠಾನದಿಂದ ಸಂಸ್ಕøತಿ, ಪರಂಪರೆ ಕಾಪಾಡಬಹುದು.

Published On : 28 Jan 2018   |  Reported By : Rons Bantwal


ಉಜಿರೆ: ನಿತ್ಯ ಜೀವನದಲ್ಲಿ ಮಾನವೀಯ ಮೌಲ್ಯಗಳ ಅನುಷ್ಠಾನದ ಬಗ್ಯೆ ಶಿಕ್ಷಕರು, ರಕ್ಷಕರು ಮತ್ತು ಸಾರ್ವಜನಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೌಲ್ಯಗಳ ಕೊರತೆ ದೊಡ್ಡ ಕಳಂಕವಾಗಿದೆ. ಸೋಮಾರಿತನ ತ್ಯಜಿಸಿ, ದೇವರು ನಮಗೆ ಕೊಟ್ಟ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉನ್ನತ ಸಾಧನೆ ಮಾಡಿ ಯಶಸ್ಸನ್ನು ಪಡೆಯಬೇಕು. ಸ್ವ-ಪ್ರಯತ್ನ ಮತ್ತು ಸಾಧನೆಯಿಂದ ಪಡೆದ ಯಶಸ್ಸಿಗೆ ಸಾರ್ವಕಾಲಿಕ ಮಾನ್ಯತೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾದ 16ನೇ ರಾಜ್ಯಮಟ್ಟದ ನೈತಿಕ ಮೌಲ್ಯಾಧರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮೌಲ್ಯಗಳ ಅನುಷ್ಠಾನದಿಂದ ನಮ್ಮ ಸಂಸ್ಕøತಿ, ಪರಂಪರೆ ಕಾಪಾಡಬಹುದು. ಮೌಲ್ಯಗಳ ಕೊರತೆ ಹಾಗೂ ಸೋಮಾರಿತನ ದೇಶದ ದೊಡ್ಡ ಸಮಸ್ಯೆಯಾಗಿದೆ. ಮೌಲ್ಯಗಳನ್ನು ತ್ಯಜಿಸಿ ವಾಮ ಮಾರ್ಗದಿಂದ ಪಡೆದ ಯಾವುದೇ ಸಾಧನೆಗೆ ಬೆಲೆ ಇಲ್ಲ. ದಾರಿ ತಪ್ಪಿ ಸಾಧನೆ ಮಾಡಿದರೆ ನಮ್ಮ ಆರೋಗ್ಯ ಹಾಳಾಗುತ್ತದೆ. ಮನೆಯಲ್ಲಿ, ಶಾಲೆಯಲ್ಲಿ ಮತ್ತು ಸಮಾಜದಲ್ಲಿ ಹಿರಿಯರೂ, ಕಿರಿಯರೂ ಮಾನವೀಯ ಮೌಲ್ಯಗಳನ್ನು ಅನುಷ್ಠಾನಗೊಳಿಸಿದಾಗ ಸಮಾಜ ಬಾಹಿರ ಚಟುವಟಿಕೆಗಳು ದೂರವಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ.

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ವಯ ಶಾಲೆಗಳಿಗೆ ನೈತಿಕ ಮೌಲ್ಯದ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸುವ ಯೋಜನೆ ಸ್ತುತ್ಯಾರ್ಹವಾಗಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲಾ ಶಾಲೆಗಳಿಗೂ ವಿಸತರಿಸಬೇಕು. ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಬೇಕು ಎಂದು ಅವರು ಹೆಗ್ಗಡೆಯವರನ್ನು ಕೋರಿದರು. ಶಿಕ್ಷಣ ಇಲಾಖೆಯಿಂದ ಈ ಬಗ್ಯೆ ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಶನಿವಾರ ಶಾಲೆಗಳಲ್ಲಿ ಚೀಲ ರಹಿತ ದಿನಗಳಲ್ಲಿ ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಾನವೀಯ ಮೌಲ್ಯಗಳ ಉದೀಪನಕ್ಕೆ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುವುದು ಎಂದು ಅವರು ತಿಳಿಸಿದರು.

ಸ್ವಾವಲಂಬಿಗಳಾಗಬೇಕು: ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಬದುಕಿನಲ್ಲಿ ಎಂದೂ ಪರಾವಲಂಬಿಗಳಾಗಬಾರದು. ಪುಸ್ತಕದಲ್ಲಿ ಓದಿದ ಸಂದೇಶವನ್ನು ಬದುಕಿನಲ್ಲಿ ಅಳವಡಿಕೊಳ್ಳಬೇಕು ಸೋಲು-ಗೆಲುವಿನ ಬಗ್ಯೆ ಚಿಂತಿಸದೆ ಆತ್ಮವಿಶ್ವಾಸದಿಂದ ಜೀವನದ ಸವಾಲುಗಳನ್ನುಎದುರಿಸಬೇಕು ಎಂದು ಸಲಹೆ ನೀಡಿದರು.
ಹಿಂದಿನ ಕಾಲದಲ್ಲಿ ಶಿಕ್ಷೆಯಿಂದ ಶಿಕ್ಷಣ ನೀಡುತ್ತಿದ್ದರೆ ಇಂದು ಪ್ರೀತಿ-ವಿಶ್ವಾಸದಿಂದ ಕಲಿಸಲಾಗುತ್ತದೆ. ಸಮೂಹ ಮಾಧ್ಯಮಗಳು, ಪತ್ರಿಕೆಗಳು, ಜಾಲತಾಣಗಳ ಮೂಲಕ ಸಾಕಷ್ಟು ಮಹಿತಿ ಸಿಗುತ್ತದೆ. ಹಂಸ ಕ್ಷೀರ ನ್ಯಾಯದಂತೆ ಕೇಡನ್ನು ತ್ಯಜಿಸಿ ಒಳ್ಳೆಯ ಅಂಶಗಳನ್ನು ಮಾತ್ರ ಸ್ವೀಕರಿಸಬೇಕು.

ಕಲೆಗೆ ಸದಾ ಬೆಲೆ ಇದೆ. ವಿದ್ಯಾರ್ಥಿಗಳು ಸದಭಿರುಚಿಯ ಕಲೆಯ ಬಗ್ಯೆ ಆಸಕ್ತಿ-ಅಭಿಮಾನ ಬೆಳೆಸಿಕೊಂಡು ಉತ್ತಮ ಕಲಾವಿದರಾಗಬೇಕು. ಉಜಿರೆಯ ವಿಲಾಸ್ ನಾಯಕ್‍ರಂತೆ ಉತ್ತಮ ಕಲಾವಿದರಾದರೆ ಕೀರ್ತಿಯೂ ಬರುತ್ತದೆ. ಉತ್ತಮ ಸಂಪಾದನೆಯೂ ಆಗುತ್ತದೆ ಎಂದರು.

ಚಲನ ಚಿತ್ರ ನಟ ವಿಜಯರಾಘವವೇಂದ್ರ ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ಪ್ರತಿಯೊಬ್ಬ ಭಕ್ತರಲ್ಲಿಯೂ ಭರವಸೆಯ, ವಿಶ್ವಾಸದ ಬೆಳಕನ್ನು ಮೂಡಿಸುತ್ತದೆ. ಹೆಗ್ಗಡೆಯವರು ನಮ್ಮ ಕಣ್ಣಿಗೆ ಕಾಣುವ ದೇವರು ಎಂದು ಬಣ್ಣಿಸಿದರು.

ಅವರು ಒಂದೆರಡು ಪದ್ಯಗಳನ್ನು ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಹೇಮಾವತಿ ವಿ. ಹೆಗ್ಗಡೆ, ವಿದ್ಯಾಂಗ ಉಪನಿರ್ದೇಶಕ ಶಿವರಾಮಯ್ಯ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸ್ಪಂದನಾ ವಿಜಯರಾಘವೇಂದ್ರ ಉಪಸ್ಥಿತರಿದ್ದರು.
ಶಶಿಕಾಂತ್ ಜೈನ್ ಸ್ವಾಗತಿಸಿದರು. ಶೇಖರ ಕಡ್ತಲ ಧನ್ಯವಾದವಿತ್ತರು.

ಮುಖ್ಯಾಂಶಗಳು:
• ಚಲನ ಚಿತ್ರ ನಟ ವಿಜಯರಾಘವೇಂದ್ರ ಪ್ರಾರ್ಥನೆ ಹಾಗೂ ಪದ್ಯ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
• 4189 ಶಿಕ್ಷಕರಿಗೆ ಯೋಗ ಮತ್ತು ನೈತಿಕ ಶಿಕ್ಷಣ ತರಬೇತಿ ನೀಡಲಾಗಿದೆ.
• 44 ಪುಸ್ತಕಗಳ 20 ಲಕ್ಷ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.
• ಬ್ರಹ್ಮಾವರದ ಚಂದ್ರಶೇಖರ ಕೆದಿಲಾಯ ಹಾಡಿಗೆ ಸಂಬಂಧಿಸಿದಂತೆ ಕೋಟದ ಕಲಾವಿದ ಪ್ರದೀಶ್ ಭಟ್ ರೂಪಿಸಿದ ಕುಂಚಗಾನ ವೈಭವ ಆಕರ್ಷಕವಾಗಿ ಮೂಡಿ ಬಂತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here