Sunday 6th, July 2025
canara news

ಕುಂದಾಪುರ ಕೋಡಿ ಸರ್ಕಾರಿ ಬಸ್ ಸೇವೆ ಆರಂಭ

Published On : 28 Jan 2018   |  Reported By : Bernard Dcosta


ಕುಂದಾಪುರ : ಕೋಡಿ ಗ್ರಾಮಸ್ಥರ ಸತತ ಬೇಡಿಕೆಯ ಮೇರೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವತಿಯಿಂದ ಇಂದು ಕುಂದಾಪುರ-ಕೋಡಿ ಬಸ್ ಸೇವೆಯು ಕೋಡಿ ಶ್ರೀ ಚಕ್ರೇಶ್ವರಿ ದೇವಸ್ಥಾನದ ವಠಾರದಲ್ಲಿ ಕೋಡಿಯ ಹಿರಿಯ ನಾಗರಿಕರಾದ ಕೋಡಿ ಮಾಧವ ಎಂ. ಪೂಜಾರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕೋಟೇಶ್ಬರ ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ಮಾತನಾಡಿ ಈ ಬಸ್ ಸೇವೆಯಿಂದ ಕೋಡಿ ಗ್ರಾಮದ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿಕೊಟ್ಟಂತಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸರಕಾರಿ ಬಸ್ ವ್ಯವಸ್ಥೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೈಂದೂರು ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಚೇಯರಮನ್ ಕೆ. ಗೋಪಾಲ ಪೂಜಾರಿಯವರನ್ನು ಅಭಿನಂದಿಸುವುದಾಗಿ ಹೇಳಿದರು. ಈ ಸಂದಭದಲ್ಲಿ ಹಿರಿಯ ಮುಖಂಡರಾದ ಕೋಡಿ ಶಂಕರ ಪೂಜಾರಿ, ಮಂಜು ಬಿಲ್ಲವ, ಅಬ್ದುಲ್ಲಾ ಕೋಡಿ, ಪುರಸಭಾ ಸದಸ್ಯರಾದ ಸಂದೀಪ್ ಪೂಜಾರಿ, ಸಾರಿಗೆ ಸಂಸ್ಥೆ ಮುಖ್ಯಸ್ಥ ಸತ್ಯರಾಜ್, ತಿಮ್ಮಪ್ಪ ಖಾರ್ವಿ, ಭಾಸ್ಕರ ಪುತ್ರನ್, ಜಯ ಮೊಗವೀರ, ಗಂಗಾಧರ ಪೂಜಾರಿ, ಮೋಹನದಾಸ್ ಖಾರ್ವಿ, ವಿಠಲ ಪೂಜಾರಿ, ಸುಧಾಕರ ಪೂಜಾರಿ, ಮಹೇಶ್ ಶೆಣೈ ಅಲ್ಲದೆ ಕೋಡಿ ಹಾಗೂ ಹಂಗಳೂರು ಗ್ರಾಮಸ್ಥರು ಉಪಸ್ಥಿತರಿದ್ದರು. ಮಾಜಿ ಪುರಸಭಾ ಸದಸ್ಯ ಸಂಜೀವ ಪೂಜಾರಿ ಸ್ವಾಗತಿಸಿದರು. ಕೋಡಿ ಸುನಿಲ್ ಪೂಜಾರಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here