Tuesday 13th, May 2025
canara news

ಸೌಹಾರ್ಧ ಪ್ರಚಾರ ಜಾಥ ಉಧ್ಘಾಟನೆ

Published On : 30 Jan 2018   |  Reported By : Bernard J Costa


ಸೌಹಾರ್ಧತೆಗೆ ರಾಜಕಾರಣ ಮುಂದಾಗಬೇಕು;ವಿನೋದ್ ಕ್ರಾಸ್ತ 

ಕುಂದಾಪುರ:ಮತೀಯವಾದ,ಕೋಮುವಾದವು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವ ಇಂದಿನ ಸಂಧರ್ಭದಲ್ಲಿ ಸೌಹಾರ್ಧತೆಗೆ ಧಕ್ಕೆ ತರುವ ರಾಜಕಾರಣ ಸೋಲಿಸಬೇಕಾಗಿದೆ.ಸೌಹಾರ್ಧತೆಗೆ ರಾಜಕಾರಣ ಮುಂದಾಗಬೇಕಿದೆ ಎಂದು ಸೌಹಾರ್ದತೆಗಾಗಿ ಕರ್ನಾಟಕ ವೇದಿಕೆಯ ಸಂಚಾಲಕರಾದ ವಿನೋದ ಕ್ರಾಸ್ತ ಹೇಳಿದರು.

ಅವರು ಕುಂದಾಪುರ ಶಾಸ್ರ್ತಿ ವ್ರತ್ತದಲ್ಲಿ ಜನವರಿ 30 ಮಾನವ ಸರಪಳಿ ಪ್ರಚಾರ ಜಾಥ ಉಧ್ಘಾಟಿಸಿ ಮಾತನಾಡಿದರು.

ವೇದಿಕೆ ಮುಖಂಡರಾದ ಸಾಮಾಜಿಕ ಕಾರ್ಯಕರ್ತರಾದ ರಾಜೀವ ಕೋಟ್ಯಾನ್ ಮಾತನಾಡಿ;ವಿವಿಧತೆಯಲ್ಲಿ ಏಕತೆಯನ್ನು ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿದ್ದಾರೆ ಅಂತಹ ಪರಂಪರೆಯನ್ನು ಗಟ್ಟಿಗೊಳಿಸಲು ಎಲ್ಲಾ ಮತಧರ್ಮದವರು ಒಂದಾಗಿ ಮಾನವ ಸರಪಳಿ ಮೂಲಕ ಸಂದೇಶ ಸಾರುವ ಕಾರ್ಯಕ್ರಮ ಶ್ಲಾಘನೀಯವೆಂದು ಹೇಳಿದರು. ಸಮಿತಿ ಸಂಚಾಲಕರಾದ ಹೆಚ್ ನರಸಿಂಹ,ಸ್ವಾಗತಿಸಿದರು.ಸುರೇಶ್ ಕಲ್ಲಾಗರ ದನ್ಯವಾದ ಸಲ್ಲಿಸಿದರು. ಈ ವೇಳೆಯಲ್ಲಿ ಬಾಲಕ್ರಷ್ಣ ಕೆ.ಎಂ. ಲಕ್ಷ್ಮಣ ಬರೆಕಟ್ಟು,ರಾಜು ವಾಡಿಗ,ರಮೇಶ್ ವಿ,ಮಂಜುನಾಥ ಶೋಗನ್ ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here