Sunday 6th, July 2025
canara news

ಬಶೀರ್ ಕೊಲೆ ಸಮರ್ಥಿಸಿಕೊಂಡ ವಿಎಚ್ಪಿ ಮುಖಂಡ

Published On : 31 Jan 2018   |  Reported By : canaranews network


ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿ ಎಂಬಲ್ಲಿ ನಡೆದಿದ್ದ ಬಷೀರ್ ಹತ್ಯೆ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಸಮರ್ಥಿಸಿ ವಿವಾದಿದ ಹೇಳಿಕೆ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮಂಗಳೂರಿನಲ್ಲಿ ನಡೆದ ಹಡೆದವ್ವನ ಶಾಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಗದೀಶ್ ಶೇಣವ ಈ ಹೇಳಿಕೆ ನೀಡಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅಮಾಯಕ ದೀಪಕ್ ರಾವ್ ಗೆ ಪ್ರತೀಕಾರವಾಗಿ ಅಬ್ದುಲ್ ಬಷೀರ್ ಹತ್ಯೆಯಾಗಿದೆ. ಬಷೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಚಿಂತೆಯಿಲ್ಲ .ಪ್ರತೀಕಾರಕ್ಕಾಗಿ ಮುಗ್ಧ ಹಿಂದೂಗಳ ಹತ್ಯೆಯಾಗಬೇಕಾದ್ರೆ ಬಷೀರ್ ಹತ್ಯೆ ಮಾಡ್ಬಾರ್ದಾ? ಹಿಂದುಗಳ ರಕ್ಷಣೆಗೆ ಒಂದು ವರ್ಗ ತಯಾರಾಗಿದೆ ಎಂದು ವಿಎಚ್ ಪಿ ಅಧ್ಯಕ್ಷನಾಗಿ ಇದನ್ನು ನಾನು ಬಷೀರ್ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದರು.ಈ ಹೇಳಿಕೆ ವಿವಾದ ಸೃಷ್ಟಿಸಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here