Wednesday 14th, May 2025
canara news

ಪಡುಬಿದ್ರೆ ನಾರಿ ರೂವಾರಿ ಸ್ಪರ್ಧೆ-ಸುರತ್ಕಲ್ ಬಂಟರ ಸಂಘಕ್ಕೆ ಪ್ರಥಮ ಸ್ಥಾನ

Published On : 31 Jan 2018   |  Reported By : Rons Bantwal


ಮುಂಬಯಿ, ಜ.30: ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗವು ಪಡುಬಿದ್ರಿ ಬಂಟರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾರಿ ರೂವಾರಿ ಕಾರ್ಯಕ್ರಮದಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು 50ಸಾವಿರ ರೂಪಾಯಿ ನಗದು ಶಾಶ್ವತ ಫಲಕದೊಂದಿಗೆ ಕೂಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆÉ.

ಪಡುಬಿದ್ರೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್. ಶೆಟ್ಟಿ, ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

20 ನಿಮಿಷಗಳ ಕಾಲಾವಧಿಯ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡದಲ್ಲಿ ಮೂರು ತಿಂಗಳ ಮಗುವಿನಿಂದ ಹಿಡಿದು 70ರ ಹರೆಯದ ವರೆಗೆ ಸುಮಾರು 65ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಹೆಣ್ಣು ಶಕ್ತಿ ಸ್ವರೂಪಿಣಿ, ಪ್ರಕೃತಿಯ ಪ್ರತಿರೂಪ, ಪ್ರಕೃತಿಯ ಪಂಚ ತತ್ವಗಳು ಅವಳೊಳಗೆ ಅಡಕವಾಗಿವೆ ಎನುವುದನ್ನು ನೃತ್ಯ, ಸಮೂಹ ಗಾಯನ, ಅಭಿನಯ, ಪ್ರಹಸನಗಳ ಮೂಲಕ ಒಂದೊಂದಾಗಿ ರಂಗದ ಮೇಲೆ ನಿರೂಪಿಸುತ್ತಾ ಸಾಗಿದ ಪ್ರದರ್ಶನ, ಸುಂದರವಾದ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸದೊಂದಿಗೆ ಕಾರ್ಯಕ್ರಮ ಮೂಡಿಬಂದಿತ್ತು. ರಾಜೇಶ್ವರಿ ಡಿ ಶೆಟ್ಟಿ ಅವರ ಕಲ್ಪನೆ, ಸಾಹಿತ್ಯ ನಿರ್ದೇಶನದಲ್ಲಿ ಮೂಡಿ ಬಂದ ಪ್ರಹಸನ ಪ್ರಥಮ ಸ್ಥಾನ ಗೆದ್ದುಕೊಂಡಿತು. ಕೂಟದಲ್ಲಿ ಶ್ರೇಷ್ಟ ನಟನೆ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಸದಸೆÀ್ಯ ಪ್ರತಿಷ್ಠಾ ರೈ ಚೇಳ್ಯಾರ್, ದಾಕ್ಷಾಯಿನಿ ಪಾತ್ರದ ನಿರ್ವಹಣೆಗಾಗಿ ಪಡೆದುಕೊಂಡರು.

ಈ ಕೂಟದಲ್ಲಿ ಪದಾಧಿಕಾರಿಗಳಾದ ಬೇಬಿ ಶೆಟ್ಟಿ ಕುಡುಂಬೂರು, ವೀಣಾ ಶೆಟ್ಟಿ, ವಿಜಯಭಾರತಿ ಶೆಟ್ಟಿ , ಚಿತ್ರಾ ಜೆ. ಶೆಟ್ಟಿ, ಭಾರತಿ ಜಿ. ಶೆಟ್ಟಿ, ತಂಡದ ನಿರ್ದೇಶಕಿ ರಾಜೇಶ್ವರಿ ಡಿ. ಶೆಟ್ಟಿ ಮತ್ತು ಒಟ್ಟು 12 ತಂಡಗಳು ಭಾಗವಹಿಸಿತ್ತು. ತೀರ್ಪುಗಾರರಾಗಿ ಕೃಷ್ಣಮೂರ್ತಿ ಕವತ್ತಾರು, ಗುರುಪ್ರಸಾದ್ ಹೆಗ್ಡೆ, ಡಾ| ನಿಕೇತನ ಉಡುಪಿ ಭಾಗವಹಿಸಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here