Wednesday 14th, May 2025
canara news

ಅಂಬರನಾಥ ಕನ್ನಡ ಶಿಕ್ಷಕರಿಂದ ನಡೆಸಲ್ಪಟ್ಟ ಸಾಂಸ್ಕøತಿಕ ಸಂಭ್ರಮ-ಗೌರವ ಸಮರ್ಪಣೆ

Published On : 01 Feb 2018


ಸೇವೆ ಹೆಚ್ಚಿಸಿ ಕನ್ನಡ ಭಾಷೆಗೆ ಗೌರವ ತನ್ನಿ-ಮಲ್ಲಿನಾಥ ಜಲದೆ

ಮುಂಬಯಿ, ಜ.30: ಕನ್ನಡ ನಾಡಿಗೆ, ದೇಶಕ್ಕೆ ಕೀರ್ತಿ ಆಗುವಂತಹ ಸಾಧನೆಗಳು ಮುಂಬಯಿ ಕನ್ನಡಿಗರಿಂದ ಆಗಿದೆ ಮತ್ತು ನಿರಂತರ ಆಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ಮುಂಬಯಿ ಬರಹಗಾರರಿಂದ ಬಹು ಅಮೂಲ್ಯವಾದ ಕಾಣಿಕೆ ಲಭ್ಯವಾಗಿದೆ. ಇಲ್ಲಿ ಗೌರವಿಸಲ್ಪಟ್ಟ ವ್ಯಕ್ತಿಗಳು ಮುಂದೆ ತಮ್ಮ ಜವಾಬ್ದಾರಿ ಹೆಚ್ಚಿಸಿಕೊಂಡು ಸಮಾಜಕ್ಕೆ, ಕನ್ನಡ ಭಾಷೆಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದು ಮಲ್ಲಿನಾಥ ಜಲದೆ ತಿಳಿಸಿದರು.

ಕಳೆದ ರವಿವಾರ ಉಪನಗರ ಅಂಬರನಾಥನಲ್ಲಿ ನೆಲೆಸಿರುವ ಕನ್ನಡ ಶಿಕ್ಷಕರು ಒಂದಾಗಿ ಮಕ್ಕಳಿಗೆ ಸೂಕ್ತ ವೇದಿಕೆ ದೊರೆಯುವಂತೆ, ಮಕ್ಕಳ ಪ್ರತಿಭೆಗೆ ಪೆÇ್ರೀತ್ಸಾಹ ನೀಡುವ ನೆಲೆಯಲ್ಲಿ ಸಾಂಸ್ಕøತಿಕ ಸಂಭ್ರಮ ಆಯೋಜಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಲದೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿüಯಾಗಿ ಅಂಬರನಾಥ ನಗರ ಪರಿಷದ್‍ನ ನಗರ ಸೇವಕ ನಿಖಿಲ್ ವಾಳೇಕರ್, ಸ್ಥಾನೀಯ ಹೆಚ್‍ಇ ಶಿಕ್ಷಣ ವಿಭಾಗೀಯ ನಿರೀಕ್ಷಕ ಚಂದ್ರಕಾಂತ ಭಂಡಾರಿ ಉಪಸ್ಥಿತರಿ ದ್ದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದು ತಮ್ಮ ಶಿಕ್ಷಕವೃತ್ತಿಯಿಂದ ಆದರ್ಶತೆ ಮೆರೆದ ಅವರ ಅಭ್ಯಾಸನದ ವೈಶಿಷ್ಟ್ಯತೆ ಗುರುತಿಸಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಆದರ್ಶ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗಪ್ಪ ಕಾಸಪ್ಪ ಕೇಶಗೊಂಡ ಅವರಿಗೆ ಈ ಶುಭಾವಸರದಲ್ಲಿ ಅಂಬರನಾಥ ಶಿಕ್ಷಕ ವೃಂದವು ಶಾಲು ಹೊದಿಸಿ ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿತು. ಇತ್ತೀಚೆಗೆ ಮುಂಬಯಿಯಲ್ಲಿ ಕನ್ನಡದ ಡಿಂಡಿಮ ಕೃತಿ ಪ್ರಕಟಿಸಿದ ದುರ್ಗಪ್ಪ ಯ.ಕೋಟಿಯವರ್ ಅವರಿಗೂ ಸನ್ಮಾನಿಸಿ ಅಭಿನಂದಿಸಿತು.

ಮುಂಬಯಿಯ ನಗರ-ಉಪನಗರಗಳಲ್ಲಿ ಕನ್ನಡಿಗರು ನೆಲೆಸಿದ್ದು ಹೊರವಲಯಗಳಲ್ಲೂ ಕನ್ನಡಿಗರು ಆವರಿಸಿ ಕೊಂಡಿದ್ದಾರೆ. ತಾವು ನೆಲೆಸಿದ ಪರಿಸರದಲ್ಲಿ ಕನ್ನಡಿಗರು ಒಂದಾಗಿ ನಮ್ಮ ನಾಡಿನ ಸಂಸ್ಕøತಿ. ಭಾಷೆ, ಸಾಹಿತ್ಯ, ಸಂಗೀತ ಕಲೆ, ನಾಟಕ ಇತ್ಯಾದಿ ಸಾಂಸ್ಕøತಿನ ಚಟುವಟಿಕೆಗಳನ್ನು ನಡೆಸುತ್ತಿರುವುದು ಸ್ತುತ್ಯರ್ಹ. ಮುಂಬಯಿ ಕನ್ನಡಿಗರು ಬೇರೆ ಭಾಷೆಯ ಜನರ ಜೊತೆ ಸೌಹಾರ್ದತೆಯನ್ನು ಮೆರೆಯುತ್ತಾರೆ. ಮುಂಬಯಿ ಇತರ ಭಾಷಿಕರಿಗೆ ಕನ್ನಡ ಭಾಷೆಯ ಪ್ರೀತಿಯನ್ನು ತೋರಿಸುತ್ತಾರೆ, ತೋರಿಸುತ್ತಿದ್ದಾರೆ ಎಂದು ದುರ್ಗಪ್ಪ ಕೋಟಿಯವರ್ ಅಭಿಪ್ರಾಯ ಪಟ್ಟರು.

ಶಿಕ್ಷಕರು ಮತ್ತು ಮಹಿಳೆಯರಿಂದ ನಾಟಕ, ನೃತ್ಯ, ಗಾಯನ ಪ್ರಸ್ತುತ ಪಡಿಸಿದರು. ಶ್ರೀಮಂತ ಕಟ್ಟಿಮನಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉನ್ನಯ ಆನಂದ ಭಾವಿಕಟಿ ಮತ್ತು ಅಂಬಾಜಿ ಕಾಟಗಾಂವ್ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ಖಿಲಾರಿ ವಂದನಾರ್ಪಣೆಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here