Tuesday 13th, May 2025
canara news

ಗುಮಾನಿ ಸಂಶಯದ ಸಮಾಜ ನಿರ್ಮಾಣವಾಗಿದೆ. ಇದಕ್ಕಾಗಿಯೊ ಇಸ್ಟು ಕಶ್ಟಪಟ್ಟು ಸ್ವಾತಂತ್ರ್ಯ ಪಡೆದುಕೊಂಡಿದ್ದೊ – ವೈದೇಹಿ

Published On : 01 Feb 2018   |  Reported By : Bernard J Costa


ಕುಂದಾಪುರ,ಜ.31: ‘ಇವತ್ತು ನಮ್ಮ ದೇಶದಲ್ಲಿ ಒಬ್ಬರೊನೊಬ್ಬರು ಗುಮಾನಿ, ಸಂಶಯ ಅನುಮಾನದಿಂದ ನೋಡುವ ಸಮಾಜ ನಿರ್ಮಾಣವಾಗಿದೆ. ಈ ತರಹದ ಸಮಾಜವನ್ನು ನೋಡಲು ಇಸ್ಟು ಕಶ್ಟ ಪಟ್ಟು ನಾವು ಸ್ವಾತಂತ್ರ್ಯ ಪಡೆದುಕೊಂಡಿದ್ದೊ..? ಇಂದು ಜಾತಿ ಧರ್ಮ ಮತಗಳ ನಡುವೆ ಅಹಿಂಸಾತ್ಮಕ ಸಂಘರ್ಷ ನೆಡೆಯುತಿದೆ, ಅಹಿಂಸಾ ತತ್ವದಿಂದ ದೇಶಕ್ಕೆ ಸ್ವಾಂತಂತ್ರ್ಯ ಗಳಿಸಿಕೊಟ್ಟ ಮಹಾತ್ಮ ಗಾಂಧಿ ನಂಬಿದ್ದು ಮಾನವತವಾದದ ಧರ್ಮ, ಮಾತ್ರತ್ವದ ಧರ್ಮವಾಗಿದೆ, ಎಲ್ಲಾ ಧರ್ಮಕ್ಕಿಂತ ಮಾನವತಾ ಧರ್ಮ ಶ್ರೇಷ್ಠವಾಗಿದೆ, ಹಾಗಾಗಿ ದಯೆ ಕರುಣೆಯಿಂದ. ನಾವೆಲ್ಲಾ ಸಾಮರಸ್ಯದಿಂದ ಜೀವಿಸಬೇಕೆಂದು’ ಸೌಹರ್ದತೆಗಾಗಿ ಕರ್ನಾಟಕ ರಾಜ್ಯಾದ್ಯಂತ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಕುಂದಾಪುರದಲ್ಲಿ ನೆಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ವೈದೇಹಿ ಹೇಳಿದರು.

 

‘ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಾವೆಲ್ಲಾ ಜಾತಿ ಧರ್ಮ ಮತ ಮರೆತು ಒಟ್ಟು ಕೂಡಿದ್ದೆವೆ, ಸೌಹರ್ದತೆಗಾಗಿ ನಾವೆಲ್ಲಾ ಕೈ ಜೊಡಿಸಿದ್ದೆವೆ, ಸಾಮರಸ್ಯಕ್ಕಾಗಿ ಜೋಡಿಸಿದ ಈ ಕೈಗಳು ಯಾರಿಂದಲೂ ಬೆರ್ಪಡಿಸಲು ಸಾಧ್ಯವಿಲ್ಲ’ ವೆಂದು ಖ್ಯಾತ ವಕೀಲ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯ ಸಂಚಾಲಕ ಉದಯ ಕುಮಾರ್ ‘ನಮ್ಮ ದೇಶದಲ್ಲಿ ಸೌರ್ದತೆಯನ್ನು ಕೆದಕಿ ಅಶಾಂತಿ ನಿರ್ಮಿಸುವರು ನಮ್ಮಲ್ಲಿದ್ದಾರೆ, ನಮ್ಮ ದೇಶದಲ್ಲಿ ಉತ್ತಮ ಸಂವಿಧಾನವಿದೆ, ಇದನ್ನು ಒಪ್ಪಕೊಳ್ಳದವರು ತೊಲಗಲಿ’ಎಂದು ಘರ್ಜಿಸಿದರು.

ಮಾನವ ಸರಪಣಿ ಕುಂದಾಪುರದ ಸಂಚಾಲಕ ವಿನೋದ್ ಕ್ರಾಸ್ಟಾ ಪ್ರಮಾಣ ವಚನ ಭೋದಿಸಿದರು. ನಗರಾಭಿವ್ರದ್ದಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯೆ ಕಲಾವತಿ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ನರಸಿಂಹ, ಹಿರಿಯ ಕಾಂಗ್ರೆಸಿಗ ಮಾಣಿ ಗೋಪಾಲ, ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಸಂಯುಕ್ತ ಜನತಾದಳ ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್, ಯಾಕೂಬ್ ಖಾದರ್ ಗುಲ್ವಾಡಿ ಮುಂತಾದವರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here