Tuesday 13th, May 2025
canara news

ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಸ್ಪತ್ರೆ ನಿರ್ಮಾಣ ಯೋಜನೆ ಸ್ಥಳಾವಕಾಶಕ್ಕಾಗಿ ಸಂಸದ ಗೋಪಾಲ ಸಿ.ಶೆಟ್ಟಿ ಅವರಿಗೆ ಮನವಿ

Published On : 02 Feb 2018   |  Reported By : Rons Bantwal


ಮುಂಬಯಿ,: ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಸಹಯೋಗದಲ್ಲಿ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವತಿಯಿಂದ ಮುಂಬಯಿಯಲ್ಲಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದು ಅದಕ್ಕಾಗಿ ಜಾಗ ಒದಗಿಸುವಂತೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ನೇತೃತ್ವದ ನಿಯೋಗವು ಕಳೆದ ಬುಧವಾರ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ (ಬೋರಿವಿಲಿ) ಸಂಸತ್ ಸದಸ್ಯ ಗೋಪಾಲ ಸಿ.ಶೆಟ್ಟಿ ಅವರನ್ನು ಬೋರಿವಲಿ ಪಶ್ಚಿಮದ ಪೆÇಯಿಸರ್ ಎಲ್.ಟಿ ನಗರದಲ್ಲಿನ ಸಂಸದರ ಕಛೇರಿಗೆ ಭೇಟಿನೀಡಿ ಮನವಿ ಸಲ್ಲಿಸಿತು.

ಗೋಪಾಲ ಶೆಟ್ಟಿ ಅವರ ಹುಟ್ಟುಹಬ್ಬದ ಶುಭಾವಸರದಲ್ಲಿ ಅವರಿಗೆ ಪುಷ್ಫಗುಪ್ಚ ನೀಡಿ ಅಭಿನಂದಿಸುತ್ತಾ ರಾಮದಾಸ ಉಪಾಧ್ಯಾಯರು ತಮ್ಮ ಸಂಸ್ಥೆಯಿಂದ ಉದ್ದೇಶಿತ ಆಸ್ಪತ್ರೆ ನಿರ್ಮಾಣದ ಯೋಜನೆಯ ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನಿತ್ತರು. ಹಾಗೂ ಮುಂಬಯಿಯಲ್ಲಿ ರುಗ್ಣಾಲಯ ನಿರ್ಮಾಣಕ್ಕೆ ಸ್ಥಳವಾಕಾಶ ಒದಗಿಸುವಂತೆ ತಿಳಿಸಿದರು. ಈ ಬಗ್ಗೆ ತನ್ನಿಂದಾದಷ್ಟು ಬೆಂಬಲ ವ್ಯಕ್ತ ಪಡಿಸಿದ ಸಂಸದರು ಶೀಘ್ರವೇ ಸ್ಥಳಾವಕಾಶ ಒದಗಿಸುವ ಬಗ್ಗೆ ಮಹಾರಾಷ್ಟ್ರ ಸರಕಾರದ ಗಮನಕ್ಕೆ ತಂದು ಕಾರ್ಯಪ್ರವೃತ್ತರಾಗುವಂತೆ ತತ್‍ಕ್ಷಣವೇ ಕ್ರಾಕೈಗೊಳ್ಳುವ ಭರವಸೆಯನ್ನಿತ್ತರು.

ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ನೂತನ ಶೈಕ್ಷಣಿಕ ಯೋಜನಾ ಸಮಿತಿ ಉಪ ಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here