Tuesday 13th, May 2025
canara news

ಕುಂದಾಪುರ ತಾ. ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯಾಧ್ಯಕ್ಷರಾಗಿ ಪಿ.ಜಿ. ಚಡಗ ಆಯ್ಕೆ

Published On : 03 Feb 2018   |  Reported By : Bernard Dcosta


ಕುಂದಾಪುರ: ತಾಲೂಕು ದಾವಿಡ ಪರಿಷತನ ಕೋಟೇಶ್ವರ ವಲಯಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ, ಯಕ್ಷಗಾನ, ಭಜನಾಕಾರ ಪಿ ಗಣಪಯ್ಯ ಚಡಗ ಆಯ್ಕೆಯಾಗಿದ್ದಾರೆ. ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ ವಾರ್ಷಿಕ ಅಧಿವೇಶನದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ವಲಯದ ಪ್ರಸಕ್ತ ಅಧ್ಯಕ್ಷ ಎಚ್.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿಣಿ ಮಂಡಳಿ ರಚನೆಗೊಂಡಿದ್ದು ಗೌರವ ಅಧ್ಯಕ್ಷರಾಗಿ ಎಚ್, ಶ್ರೀನಿವಾಸ ಮೂರ್ತಿ, ಗೌರವ ಸಲಹೆಗಾರರಾಗಿ ವೈ.ಎನ್.ವೆಂಕಟೇಶ ಮೂರ್ತಿ ಭಟ್, ಉಪಾಧ್ಯಕ್ಷರುಗಳಾಗಿ ಆಶೋಕ್ ಕುಮಾರ್ ಹೊಳ್ಳ ಮತ್ತು ಬಿ.ವಿ ರಾಘವೇಂದ್ರ, ಕಾರ್ಯದರ್ಶಿ ಶಿವರಾಮ ಉಪಾಧ್ಯ, ಉಪಕಾರ್ಯದರ್ಶಿ ರಾಘವೇಂದ್ರ ಭಟ್, ಖಜಾಂಚಿ ವಾಸುದೇವ ಹೊಳ್ಳ, ಮಹಿಳಾ ವೇದಿಕೆ ಅಧ್ಯಕ್ಷೆ ವಸಂತಿ ಮಿತ್ಯಾಂತ, ಮಹಿಳಾ ವೇದಿಕೆ ಕಾರ್ಯದರ್ಶಿ ಕಲ್ಪನಾ ಐತಾಳ.

ಯುವ ವೇದಿಕೆ ಅಧ್ಯಕ್ಷ ನಾಗರಾಜ ಅಡಿಗ ಹಾಗೂ ಕಾರ್ಯದರ್ಶಿಯಾಗಿ ಕಾರ್ತಿಕ್ ಉಗ್ರಾಣಿ ಇವರುಗಳನ್ನು ಎರಡು ವರ್ಷದ ಅವಧಿಗೆ ಆಯ್ಕೆ ಮಾಡಲಾಯಿತು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಾದಾನ ಕಾರ್ಯದರ್ಶಿ-ನ್ಯಾಯವಾದಿ ಜಪ್ತಿ ಸತ್ಯನಾರಾಯಣ ಉಡುಪ, ವಲಯ ಪೂರ್ವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಪದಾಧಿಕಾರಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here