Tuesday 13th, May 2025
canara news

ಪ್ರಥಮ ಪ್ರದರ್ಶನದೊಂದಿಗೆ ಮುಂಬಯಿನಲ್ಲಿ ತೆರೆಕಂಡ `ಅಂಬರ್ ಕ್ಯಾಟರರ್ಸ್' ಸಿನೆಮಾ

Published On : 05 Feb 2018   |  Reported By : Rons Bantwal


ತುಳುಕನ್ನಡಿಗರಿಗೆ ಮರಾಠಿಗರ ಪೆÇ್ರೀತ್ಸಹ ಅನನ್ಯವಾದುದು: ಮೇಯರ್ ವಿೂನಾಕ್ಷಿ

ಮುಂಬಯಿ, ಫೆ.05: ಮರಾಠಿ ಭೂಮಿ ನಮ್ಮ ಕರ್ಮಭೂಮಿ ಆಗಿದ್ದರೂ ಇಲ್ಲಿನ ಮೂಲವಾಸಿ ಮರಾಠಿಗರು ನಮಗೆ ಬೇಕಾದ್ದನ್ನು ಬೇಕಾದಷ್ಟು ನೀಡಿ ಪೆÇ್ರೀತ್ಸಹಿಸಿದ್ದಾರೆ. ನಾನೊಬ್ಬಳು ತುಳು, ಕನ್ನಡತಿ ಆಗಿದ್ದರೂ ನನ್ನನ್ನೇ ಇಲ್ಲಿನ ಮಹಾಪೌರೆ ಮಾಡಿದ್ದು ಉದಾಹರಣೆ ಆಗಿದೆ. ಆದುದರಿಂದ ತುಳುಕನ್ನಡಿಗರಿಗೆ ಮರಾಠಿ, ಮಹಾರಾಷ್ಟ್ರದ ಪೆÇ್ರೀತ್ಸಹ, ಕೊಡುಗೆ ಅನನ್ಯವಾದುದು. ಅಂತೆಯೇ ಸೌರಭ್ ನಟನೆಯ ಈ ಚಿತ್ರಕ್ಕೆ ಮರಾಠಿಗರ ಸಹಯೋಗ ಸಿಗಲಿದೆ. ತುಳುವರೂ ಚಿತ್ರವನ್ನು ವೀಕ್ಷಿಸಿ ಪೆÇ್ರೀತ್ಸಹಿಸುವ ಅಗತ್ಯವಿದೆ. ಅವಾಗಲೇ ತುಳು ಭಾಷೆಯ ಬೆಳವಣಿಗೆ ಸುಲಭವಾಗುವುದು ಎಂದು ಥಾಣೆ ಮಹಾನಗರ ಪಾಲಿಕಾ ಮೇಯರ್ ವಿೂನಾಕ್ಷಿ ರಾಜೇಂದ್ರ ಶಿಂಧೆ (ಪೂಜಾರಿ) ತಿಳಿಸಿದರು.

ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ಸಿದ್ಧಗೊಂಡು ಭಾರೀ ಜನಮನ್ನಣೆ ಪಡೆದ `ಅಂಬರ್ ಕ್ಯಾಟರರ್ಸ್' ಸಿನೆಮಾ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಉಪನಗರ ಥಾಣೆ ಪೂರ್ವದ ಆನಂದ್ ಟಾಕೀಸ್‍ನಲ್ಲಿ ತೆರೆಕಂಡಿದ್ದು ಈ ತುಳು ಚಲನಚಿತ್ರದ ಮುಂಬಯಿನಲ್ಲಿನ ಪ್ರಥಮ ಪ್ರದರ್ಶನ ಕಾರ್ಯಕ್ರಮದಲ್ಲಿ ಅತಿಥಿüಯಾಗಿದ್ದು ವಿೂನಾಕ್ಷಿ ಶಿಂಧೆ ಮಾತನಾಡಿದರು.

ವಿಶೇಷ ಆಮಂತ್ರಿತ ಅತಿಥಿüಗಳಾಗಿ ನಗರ ಸೇವಕಿ ಪರೀಷಾ ಪ್ರತಾಪ್ ಸರ್‍ನಾಯ್ಕ್, ಥಾಣೆ ಬಂಟ್ಸ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ, ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಸುನೀಲ್ ಆಳ್ವ, ಉದ್ಯಮಿಗಳಾದ ಸುರೇಶ್ ಎನ್.ಶೆಟ್ಟಿ, ಶ್ಯಾಮ ಖೆಡಿಯಾ, ಸುರೇಶ್ ಶೆಟ್ಟಿ ಮರಾಠ, ಸುರೇಶ್ ಶೆಟ್ಟಿ ಕಡಂದಲೆ, ಸುರೇಶ್ ಶೆಟ್ಟಿ ಯೆಯ್ಯಡಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಮೇಘಾ ಸೌರಭ್ ಭಂಡಾರಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾನೂ ಕೂಡಾ ಒಂದೆರಡು ಸಿನೆಮಾಗಳನ್ನು ನಿರ್ಮಿಸಿರುವೆ. ಸೌರಭ್‍ನನ್ನು ನೋಡುವಾಗಲೇ ಆತನಲ್ಲಿ ಅಪ್ರತಿಮ ಪ್ರತಿಭೆ ಇರುವುದು ಗೊತ್ತಾಗುತ್ತದೆ. ಇಂತಹ ಯುವ ನಟ, ಕಲಾಕಾರನಿಗೆ ಸಿನೆಮಾ ರಂಗದಲ್ಲಿ ಉಜ್ವಲ ಭವಿಷ್ಯವಿದೆ ಪರೀಷಾ ಸರ್‍ನಾಯ್ಕ್ ಆಶಯ ವ್ಯಕ್ತಪಡಿಸಿದರು.

ಥಾಣೆಯ ಧೀರಜ್ ಹೊಟೇಲ್‍ನ ಕೆ.ಪಿ ಶೇಖರ್ ಎಲ್.ಶೆಟ್ಟಿ, ಆನಂದ್ ಟಾಕೀಸ್‍ನ ಬಲರಾಜ್ ಅಸ್ರಾಣಿ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದು ಸೌರಭ್ ಭಂಡಾರಿಗೆ ಶುಭಾರೈಸಿದರು. ಅಂಬರ್ ಕ್ಯಾಟರರ್ಸ್ ಸಿನೆಮಾದ ನಾಯಕ ನಟ, ತೌಳವ ಸೂಪರ್‍ಸ್ಟಾರ್ ಬಿರುದಾಂಕಿತ ಸೌರಭ್ ಸುರೇಶ್ ಭಂಡಾರಿ ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬರುವ ಭಾನುವಾರ (ಫೆ.11) ಬೆಳಿಗ್ಗೆ 9.15 ಗಂಟೆಗೆ ಇದೇ ಆನಂದ್ ಟಾಕೀಸ್‍ನಲ್ಲಿ ಬೆಳಿಗ್ಗೆ 9.15 ಗಂಟೆಗೆ ತಿಲಕ್ ಟಾಕೀಸ್ ಡೊಂಬಿವಿಲಿ ಪೂರ್ವ ಮತ್ತು ಬೆಳಿಗ್ಗೆ 9.15 ಗಂಟೆಗೆ ಮೆಹುಲ್ ಟಾಕೀಸ್ ಮುಲುಂಡ್ ಪಶ್ಚಿಮ ಇಲ್ಲಿ `ಅಂಬರ್ ಕ್ಯಾಟರರ್ಸ್' ಸಿನೆಮಾ ಪ್ರದರ್ಶಿಸಲ್ಪಡುವುದು ಎಂದು ನಟ ಸೌರಭ್ ಭಂಡಾರಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here