Wednesday 14th, May 2025
canara news

ವಿಧಾನಸೌಧದಲ್ಲಿ ಕಾರ್ಮಿಕರ ಪರ ಧ್ವನಿಯಾಗಲು ಅವಕಾಶ ನೀಡಿ : ರಾಕೇಶ್ ಮಲ್ಲಿ

Published On : 06 Feb 2018   |  Reported By : Bernard J Costa


ನಾನು ಕೃಷಿಕ ಕುಟುಂಬದಿಂದ ಬಂದಿದ್ದು ಊರಿನಲ್ಲಿ ಉತ್ತಮ ಕೃಷಿಕ ಪ್ರಶಸ್ತಿಯನ್ನು ಕೂಡ ಪಡೆದಿರುತ್ತೇನೆ. ನನಗೆ ಕೃಷಿಕರ ಸಮಸ್ಯೆಯ ಕುರಿತು ಆಳವಾದ ಅರಿವಿದೆ. ಅಲ್ಲದೇ ಇಂಟೆಕ್ ಸಂಘಟನೆಯ ರಾಜ್ಯ ಅಧ್ಯಕ್ಷನಾಗಿ ಕಾರ್ಮಿಕರ ಸಮಸ್ಯೆಗಳ ಕುರಿತು ಕೂಡ ನನಗೆ ಸಮಗ್ರವಾದ ಅರಿವಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಕಾರ್ಮಿಕರೇ ಇದ್ದು ಈ ಭಾಗದಲ್ಲಿ ಕಾರ್ಮಿಕರ ಸಮಸ್ಯೆಯ ಕುರಿತಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಲು, ಹೋರಾಡಲು ಒಬ್ಬ ಪ್ರತಿನಿಧಿಯ ಅವಶ್ಯಕತೆ ಇದೆ. ಕಾರ್ಮಿಕ ನಾಯಕ ಎನ್.ಎಂ. ಅಡ್ಯಂತಾಯರ ನಂತರ ಈ ಭಾಗದಿಂದ ಕಾರ್ಮಿಕರ ಪರವಾದ ಯಾವುದೇ ನಾಯಕ ಈ ತನಕ ಆಯ್ಕೆಗೊಂಡಿಲ್ಲ. ಹಾಗಾಗಿ ಕಾರ್ಮಿಕರ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಲು ನಾನು ಉತ್ಸುಕನಾಗಿದ್ದೇನೆ. ಕುಂದಾಪುರ ಕಾಂಗ್ರೇಸ್ ಪಕ್ಷದಿಂದ ನಾನು ಟಿಕೇಟ್ ಆಕಾಂಕ್ಷೆಯಾಗಿದ್ದು ಪಕ್ಷ ಅವಕಾಶ ನೀಡಿದರೆ ಸ್ಫರ್ದಿಸಲಿದ್ದೇನೆ. ದಯಮಾಡಿ ನಿಮ್ಮ ಧ್ವನಿಯಾಗಲು ಅವಕಾಶ ನೀಡಿ ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.

ಅವರು ಆದಿತ್ಯವಾರ ಕೋಣಿಯ ಆಶೀರ್ವಾದ್ ಹಾಲ್‍ನಲ್ಲಿ ನಡೆದ ಮಹಿಳಾ ಕಾಂಗ್ರೇಸ್ ಸಮಾವೇಶದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ ಭಾವಾ, ಮಮತಾ ಗಟ್ಟಿ, ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಕಾಂಗ್ರೇಸ್ ಐ.ಟಿ.ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಗೀತಾ ವಾಗ್ಲೆ, ಕೋಟ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಮಮತಾ ಕಿಶೋರ್ ಶೆಟ್ಟಿ, ಹಿರಿಯ ಕಾಂಗ್ರೇಸಿಗ ಕೃಷ್ಣ ದೇವ ಕಾರಂತ, ಶಿವಾನಂದ ಕೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೇವಾನಂದ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಸಂಚಾಲಕಿ ರೋಶನಿ ಒಲಿವೇರಾ, ಯುವ ಕಾಂಗ್ರೇಸ್ ಅಧ್ಯಕ್ಷ ಇಚ್ಛಿತಾರ್ಥ್ ಶೆಟ್ಟಿ ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ಯುವ ಇಂಟೆಕ್ ಅಧ್ಯಕ್ಷ ಅಜಿತ್, ಯುವ ಕಾಂಗ್ರೇಸ್‍ನ ವೈ.ಬಿ ರಾಘವೇಂದ್ರ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ರವಿಕಲಾ ಗಣೇಶ್, ಪ್ರಭಾಕರ ಕೋಡಿ, ದೇವಕಿ ಸಣ್ಣಯ್ಯ, ಶಿವರಾಮ ಪುತ್ರನ್ ಕಾವ್ರಾಡಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಎಮ್, ತಾಲೂಕ್ ಪಂಚಾಯತ್ ಸದಸ್ಯೆಯರಾದ ಅಂಬಿಕಾ, ಸುಜಾತ ಸುವರ್ಣ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸುಜಾತ ವಾಸುದೇವ, ಹೆಂಗವಳ್ಳಿ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here