Wednesday 14th, May 2025
canara news

ತುಂಬೆ ಡ್ಯಾಂ: ಮುಳುಗಡೆ ಜಮೀನಿನ ಸ್ಪಷ್ಟ ಚಿತ್ರಣ ನೀಡಲು ಜಿಲ್ಲಾಧಿಕಾರಿ ಸೂಚನೆ

Published On : 09 Feb 2018   |  Reported By : canaranews network


ಮಂಗಳೂರು: ಮಂಗಳೂರು ಹೊರವಲಯದ ತುಂಬೆ ಡ್ಯಾಂನಲ್ಲಿ ಜ.11 ರಿಂದ ಪ್ರಾಯೋಗಿಕವಾಗಿ 6 ಮೀ. ನೀರು ಸಂಗ್ರಹಿಸಿ ಮುಳುಗಡೆ ಜಮೀನಿನ ಸ್ಪಷ್ಟ ಚಿತ್ರಣ ನೀಡಿ ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಮನಪಾ ಆಯುಕ್ತರು, ಬಂಟ್ವಾಳ ತಹಶೀಲ್ದಾರ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರಿಗೆ ದ.ಕ.ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಲಿಖಿತ ಸೂಚನೆ ನೀಡಿದ್ದಾರೆ.ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತ ರೈತರ ಸಭೆಯಲ್ಲಿ ಮನಪಾ ಆಯುಕ್ತರು ಪ್ರಸ್ತುತ ಪರಿಶೀಲನೆಯಾಗಿ ನೀರು ನಿಲುಗಡೆ ಮಾಡಿದ್ದು,

ನಂತರ ಆದನ್ನೇ ಖಾಯಂ ಮಾಡಿ ರೈತರಿಗೆ ಅನ್ಯಾಯವಾಗಿರುವ ಬಗ್ಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಮಾಡಿತ್ತು.ರೈತರಿಗೆ ಹೈಕೋರ್ಟ್ ಆದೇಶದಂತೆ ರೈತರ ಸಮಕ್ಷಮ ಸರ್ವೆ ಮಾಡಿ ಲಿಖಿತ ಮಾಹಿತಿ ನೀಡಿ ತಾರತಮ್ಯ ರಹಿತ ಏಕಗಂಟಿನ ನ್ಯಾಯೋಜಿತ ಸೂಕ್ತ ಪರಿಹಾರ ವಿತರಿಸುವ ಅಧಿಕಾರಿಗಳ, ಜನಪ್ರತಿನಿಧಿಗಳ ರೈತರ ಸಭೆ ಜರಗಿಸುವಂತೆ ರೈತರ ಹಿತಾಶಕ್ತಿ ಕಾಪಾಡುವಂತೆ ವಿನಂತಿಸಲಾಗಿತ್ತು.ಈ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ ಬಗ್ಗೆ ಅಲ್ಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here