Wednesday 14th, May 2025
canara news

ದೇರೆಬೈಲು ಹರಿಕೃಷ್ಣ ತಂತ್ರಿ- ವೇದ, ಆಗಮ, ಪಾಂಡಿತ್ಯ ಪ್ರಪಂಚದ ಅನರ್ಘ್ಯ ರತ್ನ- ಪ್ರದೀಪ ಕಲ್ಕೂರ

Published On : 10 Feb 2018   |  Reported By : Rons Bantwal


ಇತ್ತೀಚೆಗೆ ನಿಧನಹೋಂದಿದ ಬಹುಶ್ರುತ ವಿದ್ವಾಂಸ, ವೈದಿಕ ಪ್ರಪಂಚದಲ್ಲಿ ತನ್ನ ವಿದ್ವತ್ತು ಹಾಗೂ ವಿಶಿಷ್ಟ ವರ್ಚಸ್ಸಿನಿಂದ ತನ್ನದೇ ಆದ ಪ್ರಭಾವವನ್ನು ಬೀರಿದ ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ರಿಯವರು ವೇದ, ಆಗಮ ಪಾಂಡಿತ್ಯ ಪ್ರಪಂಚದ ಅನರ್ಘ್ಯ ರತ್ನವೆಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಕೊಂಡಾಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪರಿಷತ್ತಿನ ಕಚೇರಿಯಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು .

 

ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ, ಗೌರವ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ, ಪೆÇ್ರ. ಜಿ. ಕೆ. ಭಟ್ ಸೇರಾಜೆ, ಪ್ರಭಾಕರ ರಾವ್ ಪೇಜಾವರ, ಎಂ. ಪ್ರಭಾಕರ ಜೋಶಿ, ಪೆÇಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ, ಎಂ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದು ಪುಷ್ಪಾರ್ಚನೆ ಮೂಲಕ ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here