Wednesday 14th, May 2025
canara news

‘ಎಲ್ಲರನ್ನು ಪ್ರೀತಿಸಲು ಕಲಿಸಿ - ರೋಜರಿ ಕಿಂಡರ್ ಗಾರ್ಟನ್ ಚಿಣ್ಣರ ವಾರ್ಷಿಕೋತ್ಸವ

Published On : 10 Feb 2018   |  Reported By : Bernard Dcosta


ಕುಂದಾಪುರ, ಫೆ. 10: ‘ಚಿಕ್ಕ ಮಕ್ಕಳು ಎಳೆಯವಲ್ಲಿ ಕೇವಲ ಪ್ರೀತಿಯನ್ನು ಆಶಿಸುತ್ತಾರೆ ಎಳೆಯ ಮನಸ್ಸಿನ ಮಕ್ಕಳ ಮೇಲೆ ಸ್ವಲ್ಪ ಒತ್ತಡ ಬಿದ್ದರೂ, ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ನಿಮ್ಮ ಮಕ್ಕಳಲ್ಲಿ ಒತ್ತಡ ಹೇರಬೆಡಿ, ಅವರಲ್ಲಿ ಧೈರ್ಯ ತುಂಬಿ, ಪೆÇ್ರೀತ್ಸಾಹ ನೀಡಿ, ಅವರಿಗೆ ಎಲ್ಲರನ್ನೂ ಪ್ರೀತಿಸಲು ಕಲಿಸಿ’ ಎಂದು ಹೆರಿಗೆ ಪ್ರಸೂತಿ ತಜ್ನೆ ಡಾ|ಪ್ರಮೀಳಾ ನಾಯಕ್ ನುಡಿದರು. ಅವರು ರೋಜರಿ ಕಿಂಡರ್‍ಗಾರ್ಟನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳ ಹೆತ್ತವರಿಗೆ ಸಂದೇಶ ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷರಾದ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು, ಶಾಲಾ ವ್ಯವಸ್ಥಾಪಕರು ‘ನಾವು ಈ ಪುಟ್ಟ ಮಕ್ಕಳ ಶಾಲೆಯಲ್ಲಿ ಮಗುವಿನ ಉತ್ತಮ ಭವಿಸ್ಯ ರೂಪಿಸುವಲ್ಲಿ ಶ್ರಮಿಸುತ್ತೆವೆ, ಆಠ ಪಾಠಗಳ ಮೂಲಕ ಮಕ್ಕಳ ಪ್ರತಿಭೆ ಹೆಚ್ಚಿಸುವಲ್ಲಿ ಪ್ರಯತ್ನ ಮಾಡುತ್ತೇವೆ, ಹೆತ್ತವರು ಉತ್ತಮ ಜೀವನ ನೆಡೆಸಿ ಮಕ್ಕಳಿಗೆ ಮಾರ್ಗದರ್ಶಿಯಾಗ ಬೇಕೆಂದು’ ಅವರು ತಿಳಿಸಿದರು.

ಪುಟ್ಟ ಮಕ್ಕಳೆ ಅತಿಥಿಗಳನ್ನು ಸ್ವಾಗತಿಸಿದರು ವಂದಿಸಿದರು. ಶಾಲಾ ಮುಖ್ಯೊಪಾಧ್ಯಾನಿ ಶೈಲಾ ಲೂವಿಸ್ ವರದಿಯನ್ನು ವಾಚಿಸಿದರು, ಸಹಾಯಕ ಧರ್ಮಗುರು ವ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಹೋಲಿ ರೋಜರಿ ಆಂಗ್ಲ ಮಧ್ಯಾಮಾ ಹೈಸ್ಕೂಲಿನ ಮುಖ್ಯೊಪಾಧ್ಯಾನಿ ಸಿಸ್ಟರ್ ಜೊಯ್ಸ್ಲಿನ್, ಸೈಂಟ್ ಮೇರಿಸ್ ಶಾಲೆಯ ಮುಖ್ಯೊಪಾಧ್ಯಾನಿ ಡೋರಾ ಸುವಾರಿಸ್, ಬಹುಮಾನಗಳನ್ನು ನೀಡಿದರು ಸಣ್ಣ ಮಕ್ಕಳಿಂದ ಡ್ಯಾನ್ಸ್, ನಟನೆ ಮತ್ತು ಯಕ್ಷಗಾನ ಪ್ರದರ್ಶನದಂತಹ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆಡೆದವು. ಶಿಕ್ಷಕಿ ಅನ್ನಾ ಡಿಸೋಜಾ ಮತ್ತು ವೀಣಾ ಡಿಸೋಜಾ ಕಾರ್ಯಕ್ರಮವನ್ನು ನಿರುಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here