Wednesday 14th, May 2025
canara news

ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ ಕವಿ ಗೋಷ್ಠಿ

Published On : 12 Feb 2018   |  Reported By : Rons Bantwal


ಕವಿತೆಗಳ ಮೂಲ ಉತ್ತರಿಸುವುದು ಕವಿಗಳ ಧರ್ಮ: ಡಾ| ವನದುರ್ಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.10: ಎರಡು ಗಂಟೆಯ ಕವಿಗೋಷ್ಠಿ ಒಂದೇ ತಾಸಿನಲ್ಲಿ ಪೂರೈಸುವುದೇ ಕಷ್ಟಕರ ಆಗಿದೆ. ಇವತ್ತಿನ ಎಲ್ಲಾ ಕವಿಗಳು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದೆ, ಕಾರಣ ಇವರೆಲ್ಲರ ಕವಿತವಸ್ತು, ಆಶೆ, ಲಯ ಅದ್ಭುತವಾಗಿದೆ. ಕವಿ ಪರಂಪರೆ ಪ್ರಾಮಾಣಿಕವಾಗಿ ಬರೆಸಿಕೊಂಡಿದೆ. ಚಂದಾರೆಗಳನ್ನು ಚಿತ್ತಾರದೊಳಗೆ ಆಕರ್ಷಿತ ಆಗದಿದ್ದರೆ ಕವಿತೆಗಳು ಜನಾಕರ್ಷಿತವಾಗದು. ಕವಿತೆಗಳ ಮೂಲಕ ಸಮಾಜಕ್ಕೆ ಉತ್ತರಿಸುವುದು ಕವಿಗಳ ಧರ್ಮ ಆಗಬೇಕು. ಕವಿಗಳಿಗೆ ಸಮೂಹ ಚಿತ್ರಣ ಬಂದಾಗ ಕಾವ್ಯ ಲೋಕ. ವಿಚಾರಗಳಿಗೆ ಬಾಲ್ಯ ಬಂದಾಗ ಕವಿತೆಗಳಿಗೆ ಹೊಸಲೋಕ ಸೃಷ್ಟಿಯಾಗುವುದು ಎಂದು ಪ್ರಸಿದ್ಧ ಕವಿ ಡಾ| ರಂಗರಾಜ ವನದುರ್ಗ ತಿಳಿಸಿದರು.

 

 

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದಲ್ಲಿ ಆಯೋಜಿಸಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದ ಎರಡನೇ ದಿನ ಸಮ್ಮೇಳನಧ್ಯಕ್ಷ ಡಾ| ಮನು ಬಳಿಗಾರ್ ಉಪಸ್ಥಿತಿಯಲ್ಲಿ ಇಂದಿಲ್ಲಿ ಸಂಜೆ ನಡೆಸಲ್ಪಟ್ಟ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ರಂಗರಾಜ ವನದುರ್ಗ ಮಾತನಾಡಿದರು.

ಕವಿಗೋಷ್ಠಿಯಲ್ಲಿದ್ದ ಡಾ| ಗುಂಡಣ್ಣ ಕಲಬುರ್ಗಿ, ಡಾ| ಅಶೋಕ ನರೋಡೆ, ನಿರ್ಮಲಾ ಸಿ.ಯಲಿಗಾರ್, ವಿ.ಎಸ್ ಶ್ಯಾನ್‍ಭಾಗ್, ಮಲ್ಲಿಕಾರ್ಜುನ ಗುಮ್ಮಗೋಳ, ಗೊರೂರು ಪಂಕಜ, ಶಂಕರ ಬೈಚಬಾಳ, ಸಾದಯಾ, ತುಳಸಿ ವೇಣುಗೋಪಾಲ, ನ್ಯಾ| ಅಮಿತಾ ಭಾಗವತ್, ಗೋಪಾಲ ತ್ರಾಸಿ, ಗಿರೀಜಾ ಶಾಸ್ತ್ರಿ, ಡಾ| ರಾಜೇಂದರ್ ಗಡಾದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.

ಆ ಮುನ್ನ ಎನ್‍ಕೆಇಎಸ್ ವಡಾಲಇದರ ಶಾಲಾ ಮಕ್ಕಳು `ಪುಣ್ಯಕೋಟಿ ಗೋವಿನ ಕತೆ' ಕನ್ನಡ ನಾಟಕ ಹಾಗೂ ಚೆಂಬೂರು ಕರ್ನಾಟಕ ಸಂಘದ ಶಾಲಾ ವಿದ್ಯಾಥಿರ್üಗಳು ನೃತ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಕರ್ನಾಟಕ ಸಂಘ ಡೊಂಬಿವಿಲಿ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ರಜನಿ ವಿ.ಪೈ ಕಾರ್ಯಕ್ರಮ ನಿರೂಪಿಸಿದರು. ಮಂಜು ದೇವಾಡಿಗ ಅಭಾರ ವ್ಯಕ್ತಪಡಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here