Tuesday 13th, May 2025
canara news

ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಮಹಿಳಾ ಮಂಡಳಿ ಆಚರಿಸಿದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ

Published On : 13 Feb 2018   |  Reported By : Rons Bantwal


ಮುಂಬಯಿ, ಫೆ.13: ಉಪನಗರದ ಖಾರ್ ಪೂರ್ವದಲ್ಲಿ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಮಹಿಳಾ ಮಂಡಳಿಯು ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ ಕಳೆದ ಶನಿವಾರ ಸಂಜೆ ಸ್ಥಳಿಯ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನ ಸಾಯಿಧಾ ಮ್ ಬಿಲ್ಡಿಂಗ್‍ನಲ್ಲಿ ಸೇವಾ ನಿರತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿತು.

ಸ್ಥಾನೀಯ ನಗರ ಸೇವಕಿ ಪ್ರಜ್ಞಾ ದೀಪಕ್ ಭೂತ್ಕರ್, ಸಮಿತಿಯ ಮಹಿಳಾ ಮಂಡಳಿ ಮುಖ್ಯಸ್ಥೆಯರುಗಳಾದ ಕೇಶರಿ ಬಿ.ಅಮೀನ್, ಶೋಭಾ ವಾಸು ಕೋಟ್ಯಾನ್ ಪದಾಧಿಕಾರಿಗಳೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾರದಾ ಶ್ರೀಧರ್ ಬಂಗೇರ, ಲೀಲಾವತಿ ಯೋಗೇಶ್ ಹೆಜ್ಮಾಡಿ, ಕಾರ್ಯಕರ್ತೆಯರಾ ದ ಪುಷ್ಪ ಅಂಚನ್, ಸರಸ್ವತಿ ಅಮೀನ್, ಸುಲೋಚನ ವಿ.ಬಂಗೇರ, ಸರಸ್ವತಿ ಬಿ.ಪೂಜಾರಿ, ರೇವತಿ ಶೆಟ್ಟಿ, ಉಷಾ ಜತ್ತನ್, ಮೋಹಿನಿ ಸಾಲಿಯಾನ್, ಶೋಭಾ ಸಾಲೀಯಾನ್, ಶೋಭಾ ಪೂಜಾರಿ, ವಿಮಲಾ ಆರ್ ಕೋಟ್ಯಾನ್, ಸುರೇಖಾ ಕೋಟ್ಯಾನ್, ಅನುಸೂಯ ಜಿ.ಸುವರ್ಣ, ರೇಖಾ ಎಸ್.ಪೂಜಾರಿ, ಪಾರ್ವತಿ ಆರ್. ನಾಯ್ಕ್, ಗೀತಾ ಪೂಜಾರಿ, ಕುಸುಮ ಶೆಟ್ಟಿ ಮತ್ತಿತರ ಸದಸ್ಯೆಯರು ಪಾಲ್ಗೊಂಡು ಶ್ರೀ ದೇವರಿಗೆ ಪೂಜೆ ನೆರವೇರಿಸಿ ಅರಸಿನ ಕಾರ್ಯಕ್ರಮ ವಿಧಿವತ್ತಾಗಿ ಆಚರಿಸಿದರು. ಮಂದಿರದ ಅರ್ಚಕ ನಾಗೇಶ್ ಸುವರ್ಣ ಪೂಜಾಧಿಗಳನ್ನು ನೆರವೇರಿಸಿ ಹರಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರ, ಉಪ ಕಾರ್ಯಾಧ್ಯಕ್ಷ ಜಯರಾಮ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ರಮೇಶ್ ಎನ್.ಪೂಜಾರಿ, ಜೊತೆ ಕೋಶಾಧಿಕಾರಿ ವಿನೋದ್ ವೈ. ಹೆಜ್ಮಾಡಿ, ಸದಸ್ಯರುಗಳಾದ ಜನಾರ್ದನ ಸಾಲಿಯಾನ್, ಸಚಿನ್ ಪೂಜಾರಿ, ನೀಲೇಶ್ವರ ನಾಯ್ಕ, ಭೋಜ ಪೂಜಾರಿ, ತಿಲಕ್ ಶೆಟ್ಟಿಗಾರ್, ಪ್ರಕಾಶ್ ಶೆಟ್ಟಿ, ರಾಜೇಶ್ ಎಸ್.ಬಂಗೇರ, ಉಪಸ್ಥಿತರಿದ್ದರು. ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು. ತದನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಫೆ.17ನೇ ಶನಿವಾರ ಶ್ರೀ ಶನಿಮಹಾತ್ಮ ಮಂದಿರದಲ್ಲಿ 51ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು, ಫೆ.19ನೇ ಸೋಮವಾರ ಅಪರಾಹ್ನ ಬಿಲ್ಲವ ಭವನ, ಸಾಂತಾಕ್ರೂಜ್ ಪೂರ್ವ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, `ತುಳುನಾಡ ಸಿರಿ ಮಹಾತ್ಮೆ' ಯಕ್ಷಗಾನ ಆಯೋಸಲಾಗಿದೆ ಎಂದು ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here