ಬಜಪೆ,ಫೆ.13: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಇದರ 2018-19 ಸಾಲಿನ ವಾರ್ಷಿಕ ಮಹಾ ಸಭೆಯು ಸೋಮವಾರ ಬಜ್ಪೆ ದಅ್‌ವಾ ಸೆಂಟರ್ ಕಚೇರಿಯಲ್ಲಿ ನಡೆಯಿತು. ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ದುಆಶಿರ್ವಚನ ಮಾಡಿದರು. ಸೆಕ್ಟರ್ ಅಧ್ಯಕ್ಷ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್ ಉಸ್ತುವಾರಿ ಶರೀಫ್ ವರಕೋಡಿ ಉದ್ಘಾಟಿಸಿದರು. ಬಜ್ಪೆ ಜುಮಾ ಮಸೀದಿ ಖತೀಬರಾದ ರಝಾಖ್ ಮದನಿ ಮತ್ತು ಅಸಾಸ್ ಮಲ್ಲೂರು ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ತರಗತಿ ನಡೆಸಿಕೊಟ್ಟರು. ಇಶಾರ ಪಾಕ್ಷಿಕ ಸಂಪಾದಕರಾದ ಅಬ್ದುಲ್ ಹಮೀದ್ ಬಜ್ಪೆ ದಿಕ್ಸೂಚಿ ಭಾಷಣ ಮಾಡಿದರು. ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ವರದಿ ವಾಚಿಸಿದರು.
ಕೋಶಾಧಿಕಾರಿ ರಮೀಝ್ ತಾರಿಕಂಬಳ ಲೆಕ್ಕಪತ್ರ ಮಂಡಿಸಿದರು. ನಂತರ ಡಿವಿಶನ್ ವೀಕ್ಷಕ ಉವೈಸ್ ಮಾಸ್ಟರ್ ಉದ್ದಬೆಟ್ಟು ರವರ ನೇತೃತ್ವದಲ್ಲಿ ನೂತನ ಬಜ್ಪೆ ಸೆಕ್ಟರ್ ಎಸ್ಸೆಸ್ಸೆಫ್ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ ಸಿದ್ದೀಖ್ ಬಜ್ಪೆ ಪುನರಾಯ್ಕೆಯಾದರು. ಕೋಶಾಧಿಕಾರಿಯಾಗಿ ಇಸ್ಮಾಈಲ್ ಬಜ್ಪೆ ಮತ್ತು ಕ್ಯಾಂಪಸ್ ಕಾರ್ಯದರ್ಶಿಯಾಗಿ ರಮೀಝ್ ತಾರಿಕಂಬಳ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಿಝ್ವಾನ್ ತಾರಿಕಂಬಳ, ಅಫ್ರಿದ್ ಬಜ್ಪೆ, ಜೊತೆ ಕಾರ್ಯದರ್ಶಿಗಳಾಗಿ ಮಝರ್ ತಾರಿಕಂಬಳ, ರಮೀಝ್ ಸೌಹಾರ್ದನಗರ ರವರನ್ನು ನೇಮಿಸಲಾಯಿತು. ಡಿವಿಶನ್ ಕೌನ್ಸಿಲರುಗಳಾಗಿ ಶಾಕಿರ್ ಎಮ್ಮೆಸ್ಸಿ, ಎಂ.ಎ ಸಿದ್ದೀಖ್, ಇಸ್ಮಾಈಲ್ ಬಜ್ಪೆ, ರಮೀಝ್ ತಾರಿಕಂಬಳ, ಝುಹೈರ್ ಜರಿನಗರ, ರಾಶಿಕ್ ಕೆ.ಪಿ ನಗರ, ರಿಝ್ವಾನ್ ತಾರಿಕಂಬಳ, ಸಾಬಿತ್ ಬಜ್ಪೆ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಝುಹೈರ್ ಜರಿನಗರ, ರಿಫಾತ್ ಜರಿನಗರ, ಆಖಿಬ್ ಜರಿನಗರ, ಶಫೀಖ್ ಕೆ.ಪಿ ನಗರ, ರಾಶಿಕ್ ಕೆ.ಪಿ ನಗರ,ಶಾಹಿಕ್ ಕೆ.ಪಿ ನಗರ, ಇರ್ಫಾನ್ ಸೌಹಾರ್ದ ನಗರ, ಇರ್ಷಾದ್ ಸೌಹಾರ್ದ ನಗರ, ಸಫೀರ್ ಸೌಹಾರ್ದ ನಗರ, ಫಾರೂಖ್ ಮುಸ್ಲಿಯಾರ್ ಸೌಹಾರ್ದ ನಗರ, ಸಾಬಿತ್ ಬಜ್ಪೆ, ಗಫಾರ್ ಬಜ್ಪೆ, ಮನಾಫ್ ಜರಿನಗರ, ಝುಬೈರ್ ಜರಿನಗರ, ಝಾಫರ್ ಜರಿನಗರ, ಮುಝಮ್ಮಿಲ್ ಪಡೀಲ್, ಮುಸ್ತಫಾ ಪಡೀಲ್ ಸೇರಿದಂತೆ ಹದಿನೆಂಟು ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಎಸ್‌ವೈಎಸ್ ಮುಖಂಡರಾದ ಅಹ್ಮದ್ ಹುಸೈನ್ ಶಾಫಿ ಬಜ್ಪೆ, ಅಬ್ದುಲ್ ಬಶೀರ್ ಬಜ್ಪೆ ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ಸ್ವಾಗತಿಸಿ ವಂದಿಸಿದರು.