Wednesday 14th, May 2025
canara news

ಕರಾವಳಿಯಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ

Published On : 15 Feb 2018   |  Reported By : canaranews network


ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ, ಕರಾವಳಿಯಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ತಮ್ಮ ತಮ್ಮ ಪಕ್ಷಗಳನ್ನು ಇನ್ನಷ್ಟು ಬಲಶಾಲಿಗೊಳಿಸಿಲು ರಾಜ್ಯದ ಹಾಗೂ ಜಿಲ್ಲಾ ನಾಯಕರುಗಳು ಕೇಂದ್ರ ನಾಯಕರ ಮೊರೆ ಹೋಗಿದ್ದಾರೆ .

ಅದರಂತೆ ಬಿಜೆಪಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರಕ್ಕಾಗಿ ಫೆಬ್ರವರಿ 19ರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಮಂಗಳೂರಿಗೆ ಆಗಮಿಸಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಂಗಲಿದ್ದಾರೆ. ಫೆಬ್ರವರಿ 20 ರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಮಾಡಲಿದ್ದು, ಬಳಿಕ ಉಡುಪಿಯ ಶ್ರೀಕೃಷ್ಣಮಠಕ್ಕೆ ತೆರಳಲಿದ್ದಾರೆ. ಫೆಬ್ರವರಿ 22ರಂದು ದೀಪಕ್​ ರಾವ್​ ಮನೆಗೆ ತೆರಳಲಿದ್ದಾರೆ.

ಜೊತೆಗೆ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಮಡಿಕೇರಿಯ ಕುಶಾಲನಗರದಿಂದ ಹಾಗೂ ಅಂಕೋಲಾದಿಂದ ಮಾರ್ಚ್​ 3ರಿಂದ 6ರವರೆಗೆ ಬಿಜೆಪಿ ಕರ್ನಾಟಕ ಸುರಕ್ಷಾ ಯಾತ್ರೆ ನಡೆಸಲಿದೆ. ಸುರತ್ಕಲ್​ನಲ್ಲಿ ಸಮಾರೋಪ ನಡೆಯಲಿದೆ. ಅಲ್ಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆಗಮಿಸಲಿದ್ದಾರೆ. ಇದರ ಜೊತೆಗೆ 27ರಂದು ದಾವಣಗೆರೆಯಲ್ಲಿ ಬೃಹತ್​ ರೈತ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here