Wednesday 14th, May 2025
canara news

ಅಗಲಿದ ಸುನ್ನಿ ನೇತಾರರಾದ ತಾಜುಲ್ ಉಲಮಾ ಉಳ್ಳಾಲ್ ತಂಙಳ್ ನೂರುಲ್ ಉಲಮಾ ಅನುಸ್ಮರಣೆ

Published On : 17 Feb 2018   |  Reported By : Rons Bantwal


ಉಳ್ಳಾಲ. ನೂರುಲ್ ಹುದಾ ಮಸ್ಜಿದ್ ತಖ್ವಾ ಮತ್ತು ಎಸ್ ವೈಎಸ್ ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ವತಿಯಿಂದ ಅಗಲಿದ ಸುನ್ನಿ ನೇತಾರರಾದ ತಾಜುಲ್ ಉಲಮಾ ಉಳ್ಳಾಲ್ ತಂಙಳ್ ನೂರುಲ್ ಉಲಮಾ ಅನುಸ್ಮರಣೆ ಮತ್ತು 14ನೇ ಸ್ವಲಾತ್ ವಾರ್ಷಿಕ ನರಿಂಗಾನ ಗ್ರಾಮದ ಕೊಲ್ಲರಕೋಡಿ ಮಂಜನಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೊಸಿ ಕಿಲ್ಲೂರು ತಂಙಳ್ ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವವಹಿ ಮಾತನಾಡಿ, ಯುವ ಸಮೂಹ ದಾರಿತಪ್ಪುತ್ತಿದ್ದು, ಪೆÇೀಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಯುವ ಜನಾಂಗ ದಾರಿ ತಪ್ಪಿದರೆ ಮತ್ತೆ ಸರಿಪಡಿಸಲು ಕಷ್ಟವಾಗುದರಿಂದ ಇಂದೇ ಪೆÇೀಷಕರು ಮಕ್ಕಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆದು ಬರುವಂತೆ ನೋಡಿಕೊಳ್ಳಿರಿ ಎಂದು ಕರೆ ನೀಡಿದರು.

ಮಂಜನಾಡಿ ಅಲ್-ಮದೀನಾ ವಿದ್ಯಾಸಂಸ್ಥೆ ಯ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು.

ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಮುಖ್ಯ ಪ್ರಭಾಷಣಗೈದರು.ಕೊಲ್ಲರಕೋಡಿ ತಖ್ವಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಪಾರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ದ.ಕ ವಕ್ಫ್ ಬೋರ್ಡ್ ಸಮಿತಿಯ ಉಪಾಧ್ಯಕ್ಷರಾಗಿ ಅಯ್ಕೆಯಾದ ಅಹ್ಮದ್ ಬಾವ ನೆಕ್ಕರೆರವರನ್ನು ಸನ್ಮಾನಿಸಲಾಯಿತು.

ಕೊಲ್ಲರಕೋಡಿ ಮಸ್ಜಿದ್ ತಖ್ವಾ ಖತೀಬ್ ಉಮರ್ ಮದನಿ, ದ.ಕ ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಎನ್.ಎಸ್ ಕರೀಂ, ಕೊಲ್ಲರಕೋಡಿ ತಖ್ವಾ ಮಸೀದಿ ಉಪಾಧ್ಯಕ್ಷರಾದ ಎನ್.ಐ ಮೊಹಮ್ಮದ್, ಮೂಸಾ ಹಾಜಿ ಬಳಪು, ಎಸ್ ವೈಎಸ್ ಕೊಲ್ಲರಕೋಡಿ ಅಧ್ಯಕ್ಷ ಎನ್.ಎಂ ಅಬ್ದುಲ್ ರಹ್ಮಾನ್ ಹಾಜಿ, ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಕೆಎಂಜೆಸಿ ಮಂಜನಾಡಿ ವಲಯ ಕಾರ್ಯದರ್ಶಿ ಅಲಿಕುಂಞ ಹಾಜಿ ಪಾರೆ, ಮಸ್ಜಿದ್ ತಖ್ವಾ ಕಾರ್ಯದರ್ಶಿ ಅಬ್ದುಲ್ ಹಮೀದ್, ನರಿಂಗಾನ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಪಿ ಮುಹಮ್ಮದ್ ಪಾರೆ, ಉದ್ಯಮಿ ಅಬ್ದುಲ್ ಸತ್ತಾರ್, ನರಿಂಗಾನ ಗ್ರಾ.ಪಂ ಸದಸ್ಯ ಆಬ್ದುಲ್ ಖಾದರ್ ಚೌಕಿ, ಎಸ್ಸೆಸ್ಸೆಫ್ ಕೊಲ್ಲರಕೋಡಿ ಅಧ್ಯಕ್ಷ ಅನೀಸ್ ಬಳಪು, ಕಾರ್ಯದರ್ಶಿ ಶಬೀರ್ ಚೌಕ, ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕೊಲ್ಲರಕೋಡಿ ಮಸ್ಜಿದ್ ತಖ್ವಾ ಕಾರ್ಯದರ್ಶಿ ಖಾಸಿಂ ಲತ್ವೀಫಿ ಸ್ವಾಗತಿಸಿದರು. ನೂರುಲ್ ಉಲೂಂ ಮದ್ರಸ ಮುಹಲ್ಲೀಂ ಅಬ್ಬಾಸ್ ಸಖಾಫಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here