Wednesday 14th, May 2025
canara news

ಬೀಜಾಡಿಯಲ್ಲಿ ಗಂಡು ಕಲೆ ಯಕ್ಷಗಾನ ಉತ್ಸವ ಉದ್ಘಾಟನೆ

Published On : 18 Feb 2018   |  Reported By : Bernard Dcosta


ಕುಂದಾಪುರ:ಯಕ್ಷಗಾನ ಕರಾವಳಿಯ ಗಂಡುಕಲೆ.ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಿತ್ರ ಸಂಗಮದ ಪ್ರಯತ್ನ ಶ್ಲಾಘನೀಯ.ಎರಡು ದಿನಗಳ ಯಕ್ಷಗಾನ ಉತ್ಸವದ ಮೂಲಕ ಬೀಜಾಡಿ ಪರಿಸರ ಸಾಂಸ್ಕøತಿಕವಾಗಿ ಶ್ರೀಮಂತಗೊಂಡಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಬೀಜಾಡಿ ಕ್ಷೇತ್ರದ ಸದಸ್ಯೆ ಶ್ರೀಲತಾಸುರೇಶ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ,ರೋಟರಿ ಕ್ಲಬ್ ಕೋಟ ಸಿಟಿ ಇವರ ಸಹಯೋಗದೊಂದಿಗೆ ಬೀಜಾಡಿ ಮಠದಕೆರೆ ಬೊಬ್ಬರ್ಯ ದೈವಸ್ಥಾನದ 2ನೇ ವರ್ಧಂತೋತ್ಸವದ ಪ್ರಯುಕ್ತ ನಡೆದ ಎರಡು ದಿನಗಳ ಯಕ್ಷಗಾನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ಯ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಗಾಣಿಗ,ಯಕ್ಷಗುರು ಕೋಟ ನರಸಿಂಹ ತುಂಗ ಮೊದಲಾದವರು ಉಪಸ್ಥಿತರಿದ್ದರು.

ಮಿತ್ರ ಸಂಗಮದ ಅಧ್ಯಕ್ಷ ನಾಗರಾಜ ಬಿ.ಜಿ.ಸ್ವಾಗತಿಸಿದರು.ಕಾರ್ಯದರ್ಶಿ ಶ್ರೀಕಾಂತ ಭಟ್ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಉತ್ಸವದಲ್ಲಿ ಸ್ವರೂಪ ಮತ್ತು ಬಳಗದವರಿಂದ ಮಾಯಾಪುರಿ ಮಹಾತ್ಮೆ, ಕುಮಾರಿ ಕವನ ಮತ್ತು ಬಳಗದವರಿಂದ ತಾಮ್ರಧ್ವಜ ಕಾಳಗ ಪ್ರದರ್ಶನ ನಡೆಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here