Wednesday 14th, May 2025
canara news

ಖಾರ್ ಪೂರ್ವದ ಜವಹಾರ್‍ನಗರ್‍ನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯಿಂದ

Published On : 18 Feb 2018   |  Reported By : Rons Bantwal


ಶನೀಶ್ವರ ಗ್ರಂಥ ಪಾರಾಯಣದೊಂದಿಗೆ ಆಚರಿಸಿದ 51ನೇ ವಾರ್ಷಿಕ ಪೂಜೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ:18: ಕಲಿಯುಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀ ರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಎಂದೇ ಕರೆಯಲ್ಪಡುವ ಶ್ರೀ ಶನೈೀಶ್ವರ ದೇವರ ಆರಾಧಕರಾಗಿ ಉಪನಗರ ಖಾರ್ ಪೂರ್ವದ ಜವಹಾರ್‍ನಗರ್ ಅಲ್ಲಿನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಇಂದಿಲ್ಲಿ ಶನಿವಾರ 51ನೇ ವಾರ್ಷಿಕ ಪೂಜೋತ್ಸವ ಆಚರಿಸಿತು. ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ದೀಪ ಪ್ರಜ್ವಲಿಸಿ ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನಿತ್ತರು.

ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ಸ್ಥಾನೀಯ ತುಳು-ಕನ್ನಡಿಗ ಭಕ್ತರುಗಳಿಂದ ಸ್ಥಾಪಿಸಿ ಸದ್ಯ ಸ್ಥಳೀಯ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಪ್ರತಿಷ್ಠಾಪಿತ ಮಂದಿರದಲ್ಲಿ ಗಣಹೋ ಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಕಲಶ ಪ್ರತಿಷ್ಠೆ, ಭಜನೆ, ಶನೀಶ್ವರ ಗ್ರಂಥ ಪಾರಾಯಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ, ಶ್ರೀ ಶನೈೀಶ್ವರನ ಆರಾಧನೆಗಳೊಂದಿಗೆ ವಾರ್ಷಿಕ ಉತ್ಸವ ಭಕ್ತಿಪೂರ್ವಕವಾಗಿ ಆಚರಿಸಲ್ಪಟ್ಟಿತು.

ಪುರೋಹಿತಶ್ರೀನಿವಾಸ ಜೋಯೀಷ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿಗೈದು ನೆರೆದ ಭಕ್ತರಿಗೆ ಗಂಧ ಪ್ರಸಾದವನ್ನಿತ್ತು ಹರಸಿದರು. ಉಷಾ ಗಣೇಶ್ ಜತ್ತನ್, ಶೋಭಾ ವಸಂತ್ ಸಾಲ್ಯಾನ್ ಮತ್ತು ಪಾರ್ವತಿ ರವಿ ನಾಯ್ಕ್ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಸಾಮೂಹಿಕ ಶನೀಶ್ವರ ಗ್ರಂಥ ಪರಾಯಣದಲ್ಲಿ ಪಾಲ್ಗೊಂಡÀು ಶ್ರೀ ಶನೈೀಶ್ವರನ ಕೃಪೆಗೆ ಪಾತ್ರರಾದರು. ತೀರ್ಥ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆಯೊಂದಿಗೆ ವಾರ್ಷಿಕ ಪೂಜೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸಮಿತಿ ಗೌರವ ಅಧ್ಯಕ್ಷ ಶ್ರೀಧರ್ ಜೆ.ಬಂಗೇರ, ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಜೊತೆ ಕಾರ್ಯದಶಿ ರಮೇಶ್ ಎನ್.ಪೂಜಾರಿ, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥರುಗಳಾದ ಕೇಸರಿ ಬಿ.ಅಮೀನ್ ಮತ್ತು ಶೋಭ ವಿ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳು ಮಹಿಳಾ, ಯುವ ವಿಭಾಗದ ಕಾರ್ಯಕರ್ತರು, ಸದಸ್ಯರನೇಕರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ನಾಳೆ ಸೋಮವಾರ (ಫೆ.19) ಅಪರಾಹ್ನ 3.00 ಗಂಟೆಯಿಂದ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ, ಸಾಂಸ್ಕೃತಿಕ ವೈಭವ, ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಕ್ರೂಜ್ ಮೇಳದ `ತುಳುನಾಡ ಸಿರಿ ಮಹಾತ್ಮೆ' ಯಕ್ಷಗಾನ ಪ್ರದರ್ಶನದೊಂದಿಗೆ ಆಚರಿಸÀಲಿದೆ ಎಂದು ಸದಸ್ಯರೆಲ್ಲರ ಪರವಾಗಿ ಸಮಿತಿ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಈ ಮೂಲಕ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here