Friday 19th, April 2024
canara news

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಮಿಲನ

Published On : 19 Feb 2018   |  Reported By : Rons Bantwal


ವಿದ್ಯಾಥಿ೯ತನ ಎಂದಿಗೂ ಶಾಶ್ವತವಾದುದು : ಶಿರ್ವಾ ನಿತ್ಯಾನಂದ ಹೆಗ್ಡೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.18: ವಿದ್ಯಾಥಿರ್s ಜೀವನ ಸ್ವರ್ಣಮಯವಾದರೆ ಹಳೆ ವಿದ್ಯಾಥಿ೯ತನ ಅದಕ್ಕಿಂತಲೂ ಮಿಗಿಲಾದ ದ್ದು ಮತ್ತು ಅಷ್ಟೇ ನಿರಂತರವಾದುದು. ಆದುದರಿಂದಲೇ ವಿದ್ಯಾಥಿರ್sತನ ಎಂದಿಗೂ ಶಾಶ್ವತವಾದುದು. ಹಳೆ ವಿದ್ಯಾಥಿ೯ಗಳ ಉದಾತ್ತ ಮನೋಭಾವ, ಸಾಂಘಿಕ ಉದ್ದೇಶದಿಂದ ಹೊಸ ವಿದ್ಯಾಥಿ೯ಗಳೊಂದಿಗೆ ಅಧ್ಯಾಪಕ ರೊಂದಿಗೆ ಪ್ರೀತಿಯನ್ನು ಭಿತ್ತರಿಸಿ ಸಂಬಂಧ ಸಂಪರ್ಕದ ಬಳ್ಳಿಯಾಗಿಸಿ ಭವ್ಯ ಬದುಕು ರೂಪಿಸುವ ವಿದ್ಯಾಥಿರ್sತನದ ನಮ್ಮ ಉದ್ದೇಶ ಈ ವೇದಿಕೆ ಮುಖೇನ ಪೂರೈಸಿದಂತಾಗಿದೆ. ಇದು ಗುರುಭ್ಯೋ ನಮಃ ನಿಷ್ಠೆಯ ಋಣ ಪೂರೈಸಲು ಸಾಧ್ಯವಾಗಿಸಿದೆ. ಆ ಮೂಲಕ ಈ ಸಂಘಟನೆ ಗುರುಶಿಷ್ಯರ ಪಾಲಿಗೆ ಸ್ಫೂರ್ತಿದಾ ಯಕವಾಗಿದೆ. ಆದರೂ ಮಾಡಬೇಕಾದ ಸೇವೆ ಇನ್ನಷ್ಟಿದ್ದು ಅದನ್ನು ಪೂರೈಸುವ ಆಕಾಂಕ್ಷೆ, ನಿರೀಕ್ಷೆ ನಮ್ಮದಾಗಿದ್ದು ಇದಕ್ಕೆ ಹಳೆ ವಿದ್ಯಾಥಿರ್sಗಳ ಸಹಯೋಗ ಅವಶ್ಯ ಎಂದು ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿರ್s ಸಂಘದ ಮುಂಬಯಿ (ವಿಸಿಎಂಎಎಎಂ) ಘಟಕದ ಗೌರವಾಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ ತಿಳಿಸಿದರು.

ವಿಸಿಎಂಎಎ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮೀಲನವು ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ವಿಸಿಎಂಎಎಎಂ ಘಟಕಾಧ್ಯಕ್ಷ ಸಿಎ| ಸೋಮನಾಥ ಕುಂದರ್ ಅಧ್ಯಕ್ಷತೆಯಲ್ಲಿ ನೇರವೇರಿದ್ದು ನಿತ್ಯಾನಂದ ಹೆಗ್ಡೆ ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿsಯಾಗಿ ವಿಸಿಎಂ ಸಂಘದ ಸ್ಥಾಪಕಾಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ, ಗೌರವ ಅತಿಥಿsಗಳಾಗಿ ವಿಜಯ ವಿಸಿಎಂ ಗರ್ವನಿಂಗ್ ಕೌನ್ಸಿಲಿಂಗ್‍ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ, ವಿಸಿಎಂ ಪ್ರಸಕ್ತ ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ, ವಿಸಿಎಂಎ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಉಪಸ್ಥಿತ ಹಳೆ ವಿದ್ಯಾಥಿರ್sಗಳು ಕಾಲೇಜ್‍ನ ಇಂಗ್ಲೀಷ್ ಬೋಧಕ ನಿವೃತ್ತ ಪ್ರಾಂಶುಪಾಲ ಪೆÇ್ರಫೆಸರ್ ಕೃಷ್ಣ ಭಟ್ (ಪತ್ನಿ ಪಾರ್ವತಿ ಭಟ್) ಹಾಗೂ ನಿವೃತ್ತ ಪ್ರಾಚಾರ್ಯ ಪೆÇ್ರಫೆಸರ್ ಡಾ| ಕೆ.ಜಗದೀಶ್ (ಪತ್ನಿ ಪದ್ಮಿನಿ ಜಗದೀಶ್ ಅವರನ್ನೊಳಗೊಂಡು) ಅವರಿಗೆ ಗುರುವಂದನೆ ಸಲ್ಲಿಸಿದರು. ಅಂತೆಯೇ ಮಹಾನಗರದ ಪ್ರತಿಷ್ಠಿತ ಉದ್ಯಮಿ ಯದುನಾರಾಯಣ ಎಂ.ಶೆಟ್ಟಿ ಮತ್ತು ನಗರದ ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಿಎ| ವಸಂತ್ ಪೂಜಾರಿ (ಪತ್ನಿ ರೇಖಾ ವಸಂತ್ ಮತ್ತು ಸುಪುತ್ರಿ ಸೌಮ್ಯ ಪೂಜಾರಿ ಅವರನ್ನೊಳಗೊಂಡು) ಸನ್ಮಾನಿಸಲಾಯಿತು. ಅಂತೆಯೇ ವಿಶ್ವರ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಸಾಧಕ ಗೌರವ ಪ್ರದಾನಿಸಿ ಅಭಿನಂದಿಸÀಲಾಯಿತು. ಹಾಗೂ ಸಂಘದ ಸದಸ್ಯರ ಪ್ರತಿಭಾವ್ವಾನಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದ್ದು ಪುರಸ್ಕೃತರು ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು.

ಕೃಷ್ಣ ಭಟ್ ಮಾತನಾಡಿ ಈ ಸನ್ಮಾನ ಸುಶಿಕ್ಷಿತ ಜೀವನದ ಋಣ ಪೂರೈಸಿದಂತಿದೆ. ಅಧ್ಯಾಪಕ ಮತ್ತು ವಿದ್ಯಾಥಿರ್s ನಡುವೆ ಇರುವಂತಹ ಪ್ರೀತಿ, ಮಮತೆಯನ್ನು ಪುನರುಸ್ಥಾನ ಗೊಳಿಸಿದೆ. ನಾನು ನಮ್ಮ ಶಿಕ್ಷಣವೃತ್ತಿ ನಿಷ್ಠೆಯಿಂದ ಮಾಡಿರುವ ಫಲಿತಾಂಶವೇ ಈ ಸನ್ಮಾನ ಎಂದು ಭಾವಿಸಿದ್ದೇವೆ. ನಾವು ನೀಡಿದ ವಿದ್ಯಾರ್ಜನಾ ಬೆಳಕನ್ನು ತಾವುಗಳು ಪ್ರಕಾಶಮಾನವಾಗಿಸಿ ಜೀವನ ಬೆಳಗಿಸಿರುವುದೇ ನಮ್ಮ ಸಾರ್ಥಕತೆ ಆಗಿದೆ ಎಂದರು.

ಅಚ್ಚುಕಟ್ಟಾದ ವ್ಯವಸ್ಥೆಗೆ ನಮ್ಮ ವಿದ್ಯಾಥಿ೯ಗಳು ಎಂದಿಗೂ ಯೋಗ್ಯರು. ವಿದ್ಯಾಥಿ೯ಗಳ ಒಲವಿಗೆ ಮೀರಿದ್ದು ಮತ್ತೊಂದಿಲ್ಲ. ಗುರುಗಳಿಗೆ ವಿದ್ಯಾಥಿ೯ಗಳೇ ಆಸ್ತಿ. ಲಕ್ಷ ಲಕ್ಷ ಆಸ್ತಿ ಇರುವ ಶ್ರೀಮಂತಕ್ಕಿಂತ ಶಿಷ್ಯಕೂಟ ವಿರುವ ಅಧ್ಯಾಪಕರೇ ಶ್ರೀಮಂತರು. ಗುರುವರ್ಯರಿಗೆ ನೀಡುವ ಮಾನಮರ್ಯಾದೆ ಇಂತಹ ಶಿಷ್ಯ ಸಮುದಾಯ ಕಲಿಯ ಬೇಕಾಗಿದೆ. ಪ್ರಾಧ್ಯಾಪಕರಿಗೆ ಮೈಕ್ ನೀಡಬಾರದು ವಿದ್ಯಾಥಿರ್s ಬೈಕ್ ನೀಡಬಾರದು ಎನ್ನುವ ಮಾತೊಂದಿದೆ. ಆದರೆ ನಾವು ಕಲಿಸಿದ ವಿದ್ಯಾಥಿರ್sಗಳೇ ನಮಗಿಂದು ಮೈಕ್ ನೀಡುತ್ತಿದ್ದಾರೆ ಎಂದಾದರೆ ನಾವೂ ವಿದ್ಯಾಥಿರ್sಗಳಿಗೆ ಬೈಕ್‍ಕ್ಕಿಂತ ಮಿಗಿಲಾದ ಥ್ಯಾಂಕ್ ಅನ್ನುವುದರ ಆನಂದವೇ ಬೇರೆಯಾಗಿದೆ. ಗುರುಗಳ ಗುರುತಿಸುವಿಕೆಗೆ ತಾವೆಲ್ಲರೂ ಮೇಲ್ಪಂಕ್ತರು ಎಂದು ಡಾ| ಕೆ.ಜಗದೀಶ್ ತಿಳಿಸಿದರು.

ಸುಹಾಸ್ ಹೆಗ್ಡೆ ಮಾತನಾಡಿ ಶಿಕ್ಷಣಾಲಯಗಲಲ್ಲಿ ಹಣಕ್ಕಿಂತ ಜನ ಸ್ಪಂದನೆ ಅವಶ್ಯವಾಗಿದೆ. ಸದ್ಯ ಕಲಿಕಾ ವಿದ್ಯಾಥಿರ್sಗಳಿಗೆ ನಮ್ಮ ಸಾಧನಾ ಅರಿವು ಮೂಡಿಸಿ ಅವರನ್ನು ಪ್ರೇರೆಪಿಸುವ ಅಗತ್ಯವಿದೆ. ವಿದ್ಯಾಲಯದ ಕಟ್ಟಡಕ್ಕಿಂತ ಮಕ್ಕಳಿಗೆ ಪ್ರೇರಣಾ ಬಣ್ಣ ಬಳಿಯುವ ಅಗತ್ಯವಿದೆ. ಆವಾಗಲೇ ಮಕ್ಕಳಲ್ಲಿ ಸ್ಥೈರ್ಯ ತುಂಬುತ್ತಾ ಅವರೂ ತಮ್ಮ ಜೀವನವನ್ನು ಸ್ವಂತಿಕೆಯಿಂದ ರೂಪಿಸಲು ಸಾಧ್ಯವಾಗುವುದು. ಒಗ್ಗಟ್ಟಿನ ಬದುಕೇ ಸಂಘಟನೆಯ ಯಶಸ್ಸುವಾಗಿದ್ದು ಇದರಿಂದ ಆತ್ಮತೃಪ್ತಿ ಲಭಿಸುವುದು ಎಂದರು.

ಶಿಕ್ಷಣ ಪಡೆದ ಎಲ್ಲಾ ವಿದ್ಯಾಲಯಗಳಿಗೆ ನಮಿಸುವ ಪದ್ಧತಿ ನಮ್ಮಲ್ಲಿ ಇಂದಿಗೂ ಜೀವಂತವಾಗಿದೆ. ನಮ್ಮ ಶಾಲಾಕಾಲೇಜು ದಿನಗಳಲ್ಲಿ ಮಕ್ಕಳಾಟಿಕೆನೇ ಹೆಚ್ಚಾಗಿದ್ದು ಶಿಕ್ಷಕರಿಗೆ ನಮ್ಮ ಕಲಿಕೆಯೇ ಶಿಕ್ಷೆ ಆಗುತ್ತಿತ್ತು. ಆದರೂ ಅಧ್ಯಾಪಕರು ನಮ್ಮನ್ನು ಸುಶಿಕ್ಷಿತರಾಗಿಸುವಲ್ಲಿ ತಮ್ಮ ಮಕ್ಕಳಂತೆ ಸಲಹಿ ಪ್ರೀತಿಸಿ ಬೋಧಿಸುತ್ತಿದ್ದರು. ಆದುದರಿಂದಲೇ ವಿದ್ಯಾಲಯಗಳೇ ಇಂದಿಗೂ ನಮ್ಮ ಪಾಲಿನ ದೇವಾಲಯಳಿದ್ದಂತೆ. ಅಂದು ಜಾತಿ ಧರ್ಮಕ್ಕಿಂತ ಸಹಪಾಠಿಗಳ ಸಂಬಂಧನೇ ದೊಡ್ಡದಾಗಿತ್ತು. ಅಲ್ಲೂ ತರಗತಿ ಬಹಿಷ್ಕ್ಕಾರ ಮಾಡಲು ನಮ್ಮಲ್ಲಿ ಏಕತೆಯಿತ್ತು. ತಮಾಷೆಯೇ ನಮ್ಮ ಜೀವನವಾಗಿತ್ತು. ಅವನ್ನೆಲ್ಲಾ ಮತ್ತೆ ಎಲುಕು ಹಾಕುವ ಕಾಲ ಒದ್ಗಿಬಂದು ಒಬ್ಬರೊಬ್ಬರನ್ನು ಸಿಗುವುದೇ ಇದೊಂದು ಸೌಭಾಗ್ಯವೇ ಸರಿ ಎಂದು ಪ್ರಾಧ್ಯಾಪಕರ ಮುಂದೆ ವಿದ್ಯಾಥಿರ್üಯಂತೆ ವಿಧೇಯಕರಾಗಿಯೇ ಐಕಳ ಹರೀಶ್ ಸನ್ಮಾನಕ್ಕೆ ಉತ್ತರಿಸಿದರು.

ಶಂಕರ ಬಿ.ಶೆಟ್ಟಿ ಅವರು ಕಾಲೇಜಿನ ಅಭಿವೃದ್ಧಿಯ ವಿಷಯದಲ್ಲಿ ಮಾತನಾಡಿ ಕಾಲೇಜಿನ ನೂತನ ಕಟ್ಟಡ ಹಾಗೂ ಸುಜ್ಜಿತ ಸಭಾಗೃಹ ನಿರ್ಮಾಣದ ಯೋಜನೆಯನ್ನು ಅಯೋಜಿಸಲಾಗಿದ್ದು, ಅನುದಾನ ನೀಡುವ ಮಾತುಕತೆಯು ಆಗಿತ್ತು. ಅದಕ್ಕಾಗಿ 25 ಲಕ್ಷ ರೂಪಾಯಿ ಮುಂಬಯಿ ಸಮಿತಿಯಿಂದ ನೀಡುವುದಾಗಿ ನಾವೂ ಬರವಸೆ ಕೊಟ್ಟಿದ್ದು, ಸ್ವಲ್ಪ ಮೊತ್ತವನ್ನು ನಾವೂ ಮುಂಚೆಯೇ ನೀಡಿದ್ದೇವೆ. ಆದರೆ ಕಾರಣಾಂತರಗಳಿಂದ ಈ ಯೋಜನೆಯ ಕೆಲಸ ನಿಂತುಹೋಗಿದೆ. ಇದರ ಬಗ್ಗೆ ನಾವೂ ಚಿಂತನೆ ಮಾಡಬೇಕಾಗಿದೆ ಹಾಗೂ ಮುಂಬಯಿ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಹಳೆ ವಿದ್ಯಾಥಿರ್s ಮತ್ತು ಅವರ ಪರಿವಾರದ ಸದಸ್ಯರಿಗೆ ಆರೋಗ್ಯನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ, ಅದಕ್ಕಾಗಿ ತಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ಬಯಸುತ್ತೇವೆ ಎಂದರು.

ಕಾಲೇಜಿನ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡುತ್ತಾ ಕಾಲೇಜಿನ ಕೆಲಸ ಕಾರ್ಯಗಳು ಅಭಿವೃದ್ಧಿ ಹೊಂದಿವೆ. ಹಳೆ ವಿದ್ಯಾಥಿರ್sಗಳ ಸಹಾಯ ತುಂಬಾ ದೊರೆತಿದೆ. ತಮಗೆ ಸಮಯ ಸಿಕ್ಕಾಗ ಪರಿವಾರ ಸಮೇತ ಕಾಲೇಜಿಗೆ ಬೇಟಿ ನೀಡಿದರೆ ಕಾಲೇಜಿನ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಪರಿಶೀಲಿಸಬಹುದು. ಇದರಿಂದ ನಮಗೆ ಮುಂದಿನ ಯೋಜನೆಗಳಿಗೆ ಅನುಕೂಲವಾಗುತ್ತದೆ ಎಂದು ಪ್ರಾಂಶುಪಾಲ ನಾರಾಯಣ ಪೂಜಾರಿ ತಿಳಿಸಿದರು.

ಕರ್ನಿರೆ ವಿಶ್ವನಾಥ್ ಮಾತನಾಡಿ ಕಾಲೇಜು ನಮಗೆ ಭವಿಷ್ಯ ರೂಪಿಸಿದ ಸಂಸ್ಥೆಯಾಗಿದೆ. ವಿಜಯ ಕಾಲೇಜ್ ಮೂಲ್ಕಿ ಶ್ರೇಷ್ಠ ಪರಂಪರೆ ಉಳಿಸಿ ಕೊಂಡು ಬಂದ ಕಾಲೇಜಿ ಆಗಿದೆ. ಇಂತಹ ಕಾಲೇಜನ್ನು ಉಳಿಸಿಕೊಳ್ಳುವುದು ನಮ್ಮ ಧರ್ಮ ಹಾಗೂ ಇದಕ್ಕಾಗಿ ಸಹಕಾರವನ್ನು ನೀಡಬೇಕು. ನನ್ನಿಂದ ಆಗುವಷ್ಟು ಸಹಕಾರ ನೀಡುತ್ತೇನೆ ಎಂದರು.

ವೇದಿಕೆಯಲ್ಲಿ ಮುಂಬಯಿ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕಾಶ್ಮೀರಾ ಭಾಸ್ಕರ್ ಶೆಟ್ಟಿ, ಭಾಸ್ಕರ್ ಎಂ.ಸಾಲ್ಯಾನ್, ಅಶೋಕ್ ದೇವಾಡಿಗ, ಸಿಎ| ಕಿಶೋರ್ ಕುಮಾರ್, ಜಯಂತ್ ಪ್ರಭು, ಭಾಸ್ಕರ್ ಬಿ.ಶೆಟ್ಟಿ ಹಾಗೂ ನ್ಯಾ| ಶೇಖರ್ ಎಸ್.ಭಂಡಾರಿ, ಕೆ.ಎನ್ ಸುವರ್ಣ, ಚಂದ್ರಹಾಸ ಶೆಟ್ಟಿ ಮಾಟುಂಗ, ನಿತ್ಯಾನಂದ ಪ್ರಭು, ಪ್ರವೀಣ್ ಬಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಸನ್ಮಾನಿತರನ್ನು ಅಭಿವಂದಿಸಿದರು.

ಸಂಘದ ಸಲಹಾ ಸಮಿತಿ ಸದಸ್ಯರು, ಹಳೆ ವಿದ್ಯಾಥಿ೯ ಸದಸ್ಯರನೇಕರು ಉಪಸ್ಥಿತರಿದ್ದು ಗತ ಸಾಲಿನಲ್ಲಿ ಅಗಲಿದ ಎಲ್ಲಾ ಗುರುವರ್ಯರು, ವಿದ್ಯಾಥಿ೯ಗಳಿಗೆ ಮೌನಪ್ರಾರ್ಥನೆಯೊಂದಿಗೆ ಸದ್ಗತಿ ಕೋರಲಾಯಿತು. ಪುಷ್ಪ ಶೆಟ್ಟಿ ಪ್ರಾರ್ಥನೆ ಹಾಡಿದರು. ಮುಂಬಯಿ ಘಟಕದ ಉಪಾಧ್ಯಕ್ಷ ಆನಂದ್ ಶೆಟ್ಟಿ, ಸಿಎ| ಕಿಶೋರ್ ಸುವರ್ಣ, ರತ್ನಾಕರ್ ಆರ್.ಸಾಲ್ಯಾನ್, ಲಕ್ಷಿ ್ಮೀಶ್ ರಾವ್, ಮೋಹನ್‍ದಾಸ್ ಹೆಜ್ಮಾಡಿ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಘಟಕದ ಕೋಶಾಧಿಕಾರಿ ಹರೀಶ್ ಹೆಜ್ಮಾಡಿ ಸನ್ಮಾನಿತರು ಮತ್ತು ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿ ಅಭಾರ ಮನ್ನಿಸಿದರು. ಪದಾಧಿಕಾರಿಗಳು ಅತಿಥಿsಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಿದರು. ಕಾರ್ಯದರ್ಶಿ ವಾಸುದೇವ ಎಂ.ಸಾಲ್ಯಾನ್ ಸ್ವಾಗತಿಸಿ ಸಂಘದ ವಾರ್ಷಿಕ ವರದಿ ವಾಚಿಸಿದರು. ಕು| ಸೌಜನ್ಯ ಬಿಲ್ಲವ, ಕು| ಅಂಕಿತ ಪೂಜಾರಿ ಮತ್ತು ಪುಟಾಣಿ ಶರಣ್ಯ ಎಸ್.ಬಂಗೇರ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ನಿತ್ಯಾನಂದ ಹೆಗ್ಡೆ ಮತ್ತುಮೋಹಿನಿ ಶೆಟ್ಟಿ ಹಾಡುಗಳನ್ನಾಡಿದರು. ಶಶಿಧರ್ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here