Wednesday 14th, May 2025
canara news

51ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಖಾರ್

Published On : 20 Feb 2018


ಸನ್ಮಾನ ಕಾರ್ಯಕ್ರಮ-`ತುಳುನಾಡ ಸಿರಿ ಮಹಾತ್ಮೆ'ಯಕ್ಷಗಾನ ಪ್ರದರ್ಶನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.20: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ 51ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಸೋಮವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಾಂಸ್ಕೃತಿಕ, ಸನ್ಮಾನ ಕಾರ್ಯಕ್ರಮಗಳೊಂದಿಗೆ ನೇರವೇರಿಸಿತು. ಸೇವಾ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭಾ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕ ನ್ಯಾ| ಸೋಮನಾಥ್ ಬಿ. ಅವಿೂನ್, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಸಮಾಜ ಸೇವಕರುಗಳಾದ ಉಮೇಶ್ ಎನ್.ಸುರತ್ಕಲ್ ಮತ್ತು ಪ್ರೇಮನಾಥ ಪಿ.ಕೋಟ್ಯಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಿತಿಯ ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಜೊತೆ ಕೋಶಾಧಿಕಾರಿ ವಿನೋದ್ ವೈ. ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥೆ ಕೇಸರಿ ಬಿ.ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರ, ಗೌರವ ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಮೇಶ್ ಎನ್.ಪೂಜಾರಿ, ಕಾರ್ಯಾಧ್ಯಕ್ಷ ರಾಘು ಡಿ.ಕೋಟ್ಯಾನ್, ಗೌರವಾಧ್ಯಕ್ಷ ಶ್ರೀಧರ್ ಜೆ.ಬಂಗೇರ ಮತ್ತು ಶಾರದಾ ಶ್ರೀಧರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾರಾಯಣ ಜಿ.ಕೋಟ್ಯಾನ್ ಮತ್ತು ವನಜಾ ನಾರಾಯಣ್, ಕಮಲಾಕ್ಷ ಬಿ.ಸುವರ್ಣ ಮತ್ತು ಸೀಮಾ ಕಮಲಾಕ್ಷ, ಹರೀಶ್ಚಂದ್ರ ಶೆಟ್ಟಿ ಮತ್ತು ಮೋಹಿನಿ ಹರೀಶ್ಚಂದ್ರ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದ ರು. ಉದ್ಯಮಿ ಪ್ರಕಾಶ್ ಮೂಡಬಿದ್ರಿ ಸನ್ಮಾನಿತರನ್ನು ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು.

ಕು| ದೀಪಾ ಸಾಲ್ಯಾನ್ ಪ್ರಾರ್ಥನೆಯನ್ನಾಡಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೆಶ್ ಕೆ.ಹೆಜ್ಮಾಡಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಎನ್.ಪೂಜಾರಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಿತಿ ಸದಸ್ಯರ ಮಕ್ಕಳು ವೈವಿಧ್ಯಮಯ ನೃತ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಹರೀಶ್ಚಂದ್ರ ಶೆಟ್ಟಿ ಚೆಂಬೂರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಬಿಲ್ಲವರ ಅಸೋಸಿಯೇಶÀನ್ ಸಂಚಾಲಿತ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಮೇಳವು `ತುಳುನಾಡ ಸಿರಿ ಮಹಾತ್ಮೆ' ತುಳು ಯಕ್ಷಗಾನ ಬಯಲಾಟ ಪ್ರದರ್ಶಿಸಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here