Wednesday 14th, May 2025
canara news

ಉಡುಪಿ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಛಾಯಾಗ್ರಾಹಕರ ವಿವಿಧ ಬೇಡಿಕೆಗಳ ಬಗ್ಗೆ ಮನವಿ

Published On : 20 Feb 2018   |  Reported By : media release


ಉಡುಪಿ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಛಾಯಾಗ್ರಾಹಕರ ವಿವಿಧ ಬೇಡಿಕೆಗಳ ಬಗ್ಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಜಿಲ್ಲೆ - ಉಡುಪಿ ಜಿಲ್ಲೆ ವತಿಯಿಂದ ಸಂಘದ ಜಿಲ್ಲಾಧ್ಯಕ್ಷರಾದ ವಿಲ್ಸನ್ ಗೊನ್ಸಾಲ್ವಿಸ್ ಮನವಿ ನೀಡಿದರು.

ಬೇಡಿಕೆಗಳಾದ ಸಂಘ ನೀಡಿರುವ ಗುರುತು ಚೀಟಿಗೆ ಸರಕಾರದಿಂದ ಮಾನ್ಯತೆ, ಸರಕಾರಿ ನೌಕರಿಯೊಂದಿಗೆ ಛಾಯಗ್ರಹಣ ವೃತ್ತಿ ನಡೆಸುವ ಅಧಿಕಾರಿಗಳನ್ನು ಸರಕಾರಿ ಸೇವೆಯಿಂದ ಅಮಾನತುಗೊಳಿಸಬೇಕು, ಸರಕಾರಿ ಕಛೇರಿಗಳ ಮತ್ತು ಸರಕಾರಿ ಸಭೆ ಸಮಾರಂಭಗಳ ಛಾಯಗೃಹಣವನ್ನು ವೃತ್ತಿ ಬಾಂಧವರಿಗೆ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಬೇಕು, ಛಾಯಗ್ರಾಹಕ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕು,ಪ್ರತಿ ವಲಯಗಳಲ್ಲಿ ಛಾಯಾಭವನ ನಿರ್ಮಾಣಕ್ಕೆ ನಿವೇಶನ ಅನುದಾನ ಮಾಡಿಕೊಡಬೇಕು, ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಇಂತಹ ಹಲವಾರು ವಿಷಯಗಳ ಬಗ್ಗೆ ಮನವಿ ಮಾಡಲಾಯಿತು.

ಮನವಿಗೆ ಜಿಲ್ಲಾಧಿಕಾರಿಗಳು ಸಕಾರಾತ್ಮಕ ಸ್ಪಂದನೆ ನೀಡಿದರು.

ಈ ಸಂದರ್ಭ ಜಿಲ್ಲಾ ಸಂಚಾಲಕ ವಿಠ್ಠಲ ಚೌಟ ಮಂಗಳೂರು, ಸಲಹಾ ಸಮಿತಿ ಸದಸ್ಯರು ಜಯಕರ ಸುವರ್ಣ ಉಡುಪಿ, ಉಪಾಧ್ಯಕ್ಷ ಪ್ರಮೋದ್ ಸುವರ್ಣ ಕಾಪು, ಕೋಶಾಧಿಕಾರಿ ಶ್ರೀಧರ ಶೆಟ್ಟಿಗಾರ್, ಕಾರ್ಯದರ್ಶಿ ದಯಾನಂದ ಬಂಟ್ವಾಳ, ಪತ್ರಿಕಾ ಪ್ರತಿನಿಧಿ ಜನಾರ್ಧನ ಕೊಡವೂರು, ಕೆಪಿಎ ನಿರ್ಧೇಶಕ ಅಸ್ಟ್ರೋಮೋಹನ್ ಉಡುಪಿ, ಉಡುಪಿ ವಲಯಾಧ್ಯಕ್ಷ ಅನೀಶ್ ಶೆಟ್ಟಿಗಾರ್, ಕಾಪು ವಲಯಾಧ್ಯಕ್ಷ ಉದಯ ಕುಮಾರ್ ಮುಂಡ್ಕೂರು, ಬ್ರಹ್ಮಾವರ ವಲಯಾಧ್ಯಕ್ಷ ಹೆರಿಕ್ ಡಿಸೋಜ, ಕಾರ್ಕಳ ವಲಯಾಧ್ಯಕ್ಷ ವಿಶ್ವಾಸ್ ಡೋಂಗ್ರೆ, ಜಿಲ್ಲಾ ಪದಾಧಿಕಾರಿಗಳು ಹಾಗೂ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here