Wednesday 14th, May 2025
canara news

ತೀಯಾ ಸಮಾಜ ಮುಂಬಯಿ ಪೂರ್ವ ವಲಯ ಪ್ರಾದೇಶಿಕ ಸಮಿತಿ ಸಂಭ್ರಮಿಸಿದ ದಶಮಾನೋತ್ಸವ

Published On : 21 Feb 2018   |  Reported By : Rons Bantwal


ತೀಯಾ ಸಭಾಗೃಹದ ಕನಸು ನನಸಾಗಿಸೋಣ : ಚಂದ್ರಶೇಖರ ಬೆಳ್ಚಡ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.20: ನಮ್ಮಲ್ಲಿನ ಕೆಲವರಲ್ಲಿ ತೀಯಾ ಭವನದ ಆಶಯವಿದೆ. ಅದು ನಮ್ಮ ಯೋಚನೆಯೂ ಆಗಿದೆ. ಆದರೆ ಪ್ರಸ್ತುತ ಆಥಿರ್üಕ ಸ್ಥಿತಿಗತಿಯಲ್ಲಿ ಇದು ಸುಲಭ ಸಾಧ್ಯವಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಮುಂಬಯಿ ಮಹಾನಗರದಲ್ಲಿ ನಮ್ಮಂತಹ ಚಿಕ್ಕದಾದ ಸಮುದಾಯಕ್ಕೆ ಭವನ ನಿರ್ಮಾಣ ಕಷ್ಟಸಾಧ್ಯ. ಕನಸು ಎಲ್ಲರೂ ಕಾಣಬಹುದು ಆದರೆ ನನಸಾಗಿಸುವುದು ಸುಲಭವಲ್ಲ. ಆದರೂ ಸಮಾಜ ಬಾಂಧವರು ತಾವೆಲ್ಲರೂ ಮನಸ್ಸು ಮಾಡಿ ಪೆÇ್ರೀತ್ಸ್ಸಾಹಿಸಿದರೆ ಒಂದು ಸಭಾಗೃಹವನ್ನು ನಿರ್ಮಿಸುವತ್ತ ಮನಸ್ಸು ಮಾಡಬಹುದು. ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ತಿಳಿಸಿದರು.

 

ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಗುರುನಾರಯಣ ಮಾರ್ಗದಲ್ಲಿನ ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ತೀಯಾ ಸಮಾಜ ಮುಂಬಯಿ ಇದರ ಪೂರ್ವ ವಲಯ ಸಮಿತಿ ಸಂಭ್ರಮಿಸಿದ ದಶ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಚಂದ್ರಶೇಖರ ಬೆಳ್ಚಡ ಮಾತನಾಡಿದರು.

ಸಮಾರಂಭದಲ್ಲಿ ಮಹಾನಗರದಲ್ಲಿನ ಹಿರಿಯ ಉದ್ಯಮಿ, ಕೊಡುಗೈದಾನಿ, ತೀಯಾ ಸಮಾಜ ಮುಂಬಯಿ ಇದರ ವಿಶ್ವಸ್ಥ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್.ಬಂಗೇರ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಗೌರವ ಅತಿಥಿüಗಳಾಗಿ ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷ ಎಲ್.ವಿ ಅವಿೂನ್, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಯಕ್ಷಮಾನಸ ಮುಂಬಯಿ ಅಧ್ಯಕ್ಷ ಶೇಖರ್ ಆರ್. ಶೆಟ್ಟಿ, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಠಲ್ ಬಿ.ಹೆಗ್ಗಡೆ, ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ಚಂದ್ರಶೇಖರ್ ಎಸ್.ಪೂಜಾರಿ, ಉದ್ಯಮಿ ಕೆ.ವಿ ಶಂಕರ್ ವಾರೀಯರ್ ಉಪಸ್ಥಿತರಿ ದ್ದರು.

ಸಮಾರಂಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಲ್ವಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಎಲ್.ಸುವರ್ಣ, ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಅಜಿಲ ಮುನಿರಾಜ್ ಜೈನ್, ದೇವಾಡಿಗ ಸಂಘ ಮುಂಬ ಯಿ ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ದೇವಾಡಿಗ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಡಾ| ಯು.ಧನಂಜಯ ಕುಮಾರ್, ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷ ಹ್ಯಾರಿ ಆರ್. ಸಿಕ್ವೇರಾ, ತೀಯಾ ಸಮಾಜ ಮುಂಬಯಿ ಒಬಿಸಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಯಾದವ ರಾವ್, ಸಮಾಜ ಸೇವಕರಾದ ಭವಾನಿ ಸುಂದರ್ ಮತ್ತು ಆನಂದ್ ಕರ್ಕೇರ ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು.

ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ತೀಯಾ ಸಮಾಜದ ಸೇವೆ ಪ್ರಶಂಸಿದರು. ಸನ್ಮಾನಿತರೂ ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು.

ವೇದಿಕೆಯಲ್ಲಿ ತೀಯಾ ಸಮಾಜದÀ ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌ| ಪ್ರ| ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್, ಸಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್.ಸುವರ್ಣ, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ.ಎಂ, ಪಶ್ಚಿಮ ವಲಯ ಸಮಿತಿ ಕಾರ್ಯಾಧ್ಯಕ್ಷ ಬಾಬು ಕೆ.ಕೋಟ್ಯಾ ನ್, ಪೂರ್ವ ವಲಯದ ಉಪ ಕಾರ್ಯಾಧ್ಯಕ್ಷ ಅಚ್ಚುತ ಕೋಟ್ಯಾನ್, ಉಪ ಕಾರ್ಯದರ್ಶಿ ದಿವಿಜಾ ಸಿ.ಬೆಳ್ಚಡ, ಕೋಶಾಧಿಕಾರಿ ನಿತ್ಯೋದಯ ಎನ್.ಉಳ್ಳಾಲ್, ಜೊತೆ ಕೋಶಾಧಿಕಾರಿ ಲಲಿತಾ ಚಂದ್ರಶೇಖರ್ ಮತ್ತಿತರ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

ಪದ್ಮನಾಭ ಸುವರ್ಣ ಪ್ರಾರ್ಥನೆಯನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಈಶ್ವರ ಎಂ.ಐಲ್ ಸ್ವಾಗತಿಸಿ ಅತಿಥಿü, ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಪೂರ್ವ ವಲಯ ಪ್ರಾದೇಶಿಕ ಸಮಿತಿ ಪ್ರ| ಕಾರ್ಯದರ್ಶಿ ಸಾಗರ್ ಕಟೀಲ್ ಪ್ರಸ್ತಾವಿಕ ನುಡಿಗಳನ್ನಾಡಿ ಕೃತಜ್ಞತೆ ಸಲ್ಲಿಸಿದರು.

ಪೂರ್ವ ವಲಯದ ಕಾರ್ಯಕಾರಿ ಸದಸ್ಯರಾದ ಭಗವನ್‍ದಾಸ್ ಕೆ.ಬಿ., ಶಶಿಧರ್ ಬಿ.ಎಂ, ಜೀವನ್ ಉಚ್ಚಿಲ್, ಹರೀಶ್ ಕುಂದರ್ ಹಾಗೂ ದಿವ್ಯಾ ಆರ್.ಕೋಟ್ಯಾನ್, ಚಂದ್ರಾ ಎಂ.ಸುವರ್ಣ, ಪ್ರತಿಮಾ ಬಂಗೇರ, ಸುಜಾತ ಸುಧಾಕರ್ ಉಚ್ಚಿಲ್, ಭವ್ಯ ಸಾಗರ್, ಕವಿತಾ, ಪುಷ್ಪಾ ಜೆ.ಕೋಟ್ಯಾನ್, ಶೋಭಾಲತಾ ಸಿ.ಸಾಲ್ಯಾನ್, ಸ್ವಪ್ನಾ ಜಿ. ಉಚ್ಚಿಲ್, ರಂಜಿನಿ ಎ.ಸುವರ್ಣ ಮತ್ತಿತರ ಸದಸ್ಯರ ಸಹಯೋಗದಲ್ಲಿ ತೀಯಾ ಸಮಾಜದ ಸಾಂಸ್ಕೃತಿಕ ಸಮಿತಿಯ ನಿರ್ದೇಶನದಲ್ಲಿ ಸಮಾಜದ ಬಂಧುಗಳು, ಮಕ್ಕಳು ನೃತ್ಯ, ವೈವಿಧ್ಯತೆ, ಹಾಡುಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ ಮುಂಬಯಿ ಕಲಾವಿದರು ಮನೋಹರ್ ನಂದಳಿಕೆ ಸಾರಥ್ಯದಲ್ಲಿ ದಿ| ದಿನೇಶ್ ಕಂಕನಾಡಿ ರಚಿಸಿ, ಭಾಸ್ಕರ ಸಸಿಹಿತ್ಲು ನಿರ್ದೇಶನದಲ್ಲಿ `ಯಮುನಾ ದಾನೆ ನಮೂನೆ' ಹಾಸ್ಯಮಯ ನಾಟಕ ಪ್ರದರ್ಶಿಸಿದರು. ಹರ್ಷಾ ಚಂದ್ರಶೇಖರ್ ಬೆಳ್ಚಡ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here