Wednesday 14th, May 2025
canara news

“ಗುಮಟ್ ವಿಶ್ವದಾದ್ಯಂತ ಹೆಸರುವಾಸಿಯಾದ ಕೊಂಕಣಿಗರ ಜನಪದ ಪ್ರಕಾರ”

Published On : 22 Feb 2018   |  Reported By : Rons Bantwal


ಮಂಗಳೂರು ವಿಶ್ವವಿದ್ಯಾನಿಲಯದ ಘಟಕ- ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ “ಸಾಂಜ್ ಕೊಂಕಣಿ” ಕಾರ್ಯಕ್ರಮದ ಮೊದಲ ಭಾಗವಾಗಿ “ಕೊಂಕಣಿ ಲೋಕವೇದಾಂತು ಗುಮಟಾಚೊ ವಾಪಾರ್” ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸÀ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

 

ಕೊಂಕಣಿಯ ಖ್ಯಾತ ಸಂಗೀತಗಾರ ಜೊಯೆಲ್ ಪಿರೇರಾರವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗುಮ್ಮಟದ ಬಳಕೆಯ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಸವಿಸ್ತಾರವಾಗಿ ತಿಳಿಸಿದರು. ಕೊಂಕಣಿಯ ಲೋಕವೇದವು ಪ್ರಪಂಚದಲ್ಲೇ ಪ್ರಸಿದ್ದಿಯನ್ನು ಪಡೆದಿದ್ದು ಇದಕ್ಕೆ ಕಾರಣವಾಗಿರುವದು ನಮ್ಮ ಸಂಸ್ಕøತಿಯ ಭಾಗವಾಗಿರುವ ಗುಮ್ಮಟವೇ ಆಗಿದೆಯೆಂದರು. ಪೋರ್ಚುಗೀಸರು ಗೋವಾಕ್ಕೆ ಬರುವ ಮುನ್ನ ಅಂದರೆ 1540 ಕ್ಕೂ ಹಿಂದೆ ಕೊಂಕಣಿಗರು ಗುಮ್ಮಟವನ್ನು ಬಳಸುತ್ತಿದ್ದರು. ಇದರ ತಯಾರಿ ತುಂಬಾ ಕಷ್ಟಕರವಾದ ಕೆಲಸವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಾಣಿಬೇಟೆ ಅಪರಾಧವಾಗಿದ್ದು, ಗುಮ್ಮಟ ತಯಾರಿಕೆಗೆ ಬಳಸುವ ಉಡದ ಚರ್ಮದ ಲಭ್ಯತೆಯ ಕೊರತೆಯಿಂದ ಈ ವಿಶಿಷ್ಟ ವಾದ್ಯಪ್ರಕಾರ ನಶಿಸುತ್ತಿದೆಯೆನ್ನುವದನ್ನು ತಿಳಿಸಿದರು. ಮುಂದುವರೆದು ಅವರು “ಗೊಂಯ್ ಸಾಂಡುನ್ ಆಯ್ಲಿ ಮಾಂಯ್” ಮತ್ತು “ಆಡ್ಕುಲೊರೆ ಬುಡ್ಕುಲೊ ತೆಲಾ ತುಪಾಚೊ” ಎನ್ನುವ ಮಂಗಳೂರು ಕೊಂಕಣಿ ಕ್ರಿಶ್ಚಿಯನ್ನರ ಗುಮ್ಮಟದ ಹಾಡುಗಳನ್ನು ರಾಗಬದ್ದವಾಗಿ ಗುಮ್ಮಟದೊಂದಿಗೆ ಬಾರಿಸುವದನ್ನು ಕೊಂಕಣಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸರವರು ಮಾತನಾಡಿ ಕೊಂಕಣಿಗರು ಹೋಳಿ ಮತ್ತು ಇತರೆ ಹಬ್ಬ-ಹರಿದಿನಗಳಲ್ಲಿ ತಮ್ಮ ಸಂಸ್ಕøತಿಯ ಭಾಗವಾಗಿ ಗುಮ್ಮಟವನ್ನು ಬಾರಿಸಿ ನರ್ತಿಸುವದು ವಿಶೇಷ ಜನಪದ ಪ್ರಕಾರವಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಇದರ ಪ್ರಾತ್ಯಕ್ಷಿಕೆಯನ್ನು ಪಡೆದು ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದರು.

ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕರಾದ ಡಾ. ಅರವಿಂದ ಶ್ಯಾನಭಾಗ ಮಾತನಾಡಿ ಬರುವ ದಿನಗಳಲ್ಲಿ ಕೊಂಕಣಿಯ ಸಂಶೋಧನಾತ್ಮಕ ಚಟುವಟಿಕೆಗಳನ್ನು ನಡೆಸುವ ನಿಟ್ಟಿನಲ್ಲಿ ಭಾಷಾಂತರ ಮತ್ತು ಲಿಪ್ಯಂತರ ಕಾರ್ಯಾಗಾರ, ಕೊಂಕಣಿ ಸುಗಮ ಸಂಗೀತ ಕಮ್ಮಟವನ್ನು ಕೊಂಕಣಿ ಅಧ್ಯಯನ ಪೀಠದ ಸಹಯೋಗದಲ್ಲಿ ನಡೆಸಿಕೊಂಡು ಬರಲಾಗುವದೆಂದರು. ಕಾರ್ಯಕ್ರಮದ ಸಮನ್ವಯಕಾರರಾದ ಫಾ. ಮೈಕೆಲ್ ಸಾಂತುಮಯೆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ಸೆಪ್ಟಾ ಫರ್ನಾಂಡೀಸ್ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here