Wednesday 14th, May 2025
canara news

ಬಂಟರ ಸಂಘ ಬಂಟವಾಳ ತಾಲೂಕು ಇದರ ಮಹಿಳಾ ವಿಭಾಗ ಅಸ್ತಿತ್ವಕ್ಕೆ

Published On : 25 Feb 2018   |  Reported By : Rons Bantwal


ಮಹಿಳಾ ವಿಭಾಗದ ಪ್ರಥಮ ಕಾರ್ಯಾಧ್ಯಕ್ಷೆಯಾಗಿ ಆಶಾ ಪ್ರಸಾದ್ ರೈ ಆಯ್ಕೆ

ಬಂಟ್ವಾಳ, ಫೆ.25: ಬಂಟರ ಸಂಘ ಬಂಟವಾಳ ತಾಲೂಕು (ರಿ.) ಮಹಿಳಾ ವಿಭಾಗ ಅಸ್ತಿತ್ವಕ್ಕೆ ಮಹಿಳಾ ವಿಭಾಗದ ಪ್ರಥಮ ಕಾರ್ಯಾಧ್ಯಕ್ಷೆ ಆಗಿ ಆಶಾ ಪ್ರಸಾದ್ ರೈ ಸರ್ವಾನುಮತದಿಂದ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಪ್ರತಿಭಾ ಎ.ರೈ (ಉಪ ಕಾರ್ಯಾಧ್ಯಕ್ಷೆ), ರಮಾ.ಎಸ್.ಭಂಡಾರಿ (ಕಾರ್ಯದರ್ಶಿ), ಶಿವಾನಿ ಬಿ.ಶೆಟ್ಟಿ (ಕೋಶಾಧಿಕಾರಿ), ಜ್ಯೋತಿ ಪ್ರವೀಣ್ ಶೆಟ್ಟಿ (ಜೊತೆ ಕಾರ್ಯದರ್ಶಿ), ಸುಮಾ ಎನ್.ಶೆಟ್ಟಿ (ಜೊತೆ ಕೋಶಾಧಿಕಾರಿ) ಸೇರಿದಂತೆ ಸುಮಾರು 64 ಕಾರ್ಯಕರ್ತೆಯರು ಕಾರ್ಯಕಾರಿ ಸಮಿತಿ ಸದಸ್ಯೆಯರುಗಳಾಗಿ ಆಯ್ಕೆಯಾಗಿದ್ದಾರೆ.

     

Asha Prasad Rai                             Prathibha A.Rai                                Rama S.Bhandary

     

Shivani B Shetty                           Jyothi P.Shetty                               Suma N.Shetty

ಮಹಿಳಾ ವಿಭಾಗದ ಉದ್ಘಾಟನಾ ಸಮಾರಂಭ ಮತ್ತು ಪದಾಗ್ರಹಣ ಸಮಾರಂಭವು ಇದೇ ಮಾ.04ನೇ ಆದಿತ್ಯವಾರ ಅಪರಾಹ್ನ 3.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಸಂಕೀರ್ಣದ ಬಂಟವಾಳ ಬಂಟರ ಭವನದಲ್ಲಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕಾರ್ಕಳದ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಹಾಯಕಿ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ಎಸ್. ಇವರು ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು ಸೇರಿದಂತೆ ಇತರ ಪದಾಧಿಕಾರಿಗಳು ಸದಸ್ಯರನೇಕರು ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here