Wednesday 14th, May 2025
canara news

ಮಳೆ ನೀರಿನೊಂದಿಗೆ ಅನುಸಂಧಾನ - ಉದ್ಯಾವರ ಕುತ್ಪಾಡಿ

Published On : 26 Feb 2018   |  Reported By : Bernard J Costa


ಜೇಸಿಐ ಉದ್ಯಾವರ ಕುತ್ಪಾಡಿ ಇವರ ನೇತೃತ್ವದಲ್ಲಿ ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಮತ್ತು ಕಥೋಲಿಕ್ ಸಭಾ ಇವರ ಸಹಕಾರದೊಂದಿಗೆ ಉದ್ಯಾವರದಲ್ಲಿ "ಮಳೆ ನೀರಿನೊಂದಿಗೆ ಅನುಸಂಧಾನ "ಜಾಗೃತಿ ನೀಡುವ ಕಾರ್ಯಕ್ರಮ ಜರಗಿತು .

ನೀರು ಕುಡಿಯುವುದರೊಂದಿಗೆ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದ ವಲಯ ಹದಿನೈದರ ಪೂರ್ವ ವಲಯಾಧಿಕಾರಿ ಜೇಸಿ ಪ್ರಶಾಂತ್ ಜತ್ತನ್ನ ಇವರು , ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಮಾಡುವುದರೊಂದಿಗೆ ಜನರಿಗೆ ಜಾಗೃತಿಯನ್ನುಂಟು ಮಾಡಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಉದ್ಯಾವರ ಕುತ್ಪಾಡಿಯ ಅಧ್ಯಕ್ಷ ಜೆಸಿ ಸ್ಟೀವನ್ ಸ್ಟೀವನ್ ಕುಲಾಸೊ ವಹಿಸಿದ್ದರು .

ನೀರು ಈ ನಿಸರ್ಗದ ಸಂಪತ್ತು ಆಗಿದೆ ಹೊರತು ,ಮಾನವನ ಸ್ವತ್ತಲ್ಲ .ನೀರಿಲ್ಲದೆ ಆರೋಗ್ಯವಿಲ್ಲ . ಜೀವ ವ್ಯವಸ್ಥೆ ನಿಂತಿರುವುದೇ ನೀರಿನ ಆಧಾರದ ಮೇಲೆ . ನೀರು ಮಾನವನ ಪಾಲಿನ ಜೀವ ಜಲ ನಿಸರ್ಗ ನೀಡಿರುವ ನೀರನ್ನು ನಾವು ಸದುಪಯೋಗ ಮಾಡಬೇಕೇ ಹೊರತು, ದುರುಪಯೋಗ ಮಾಡುವುದಕ್ಕಾಗಿ ಅಲ್ಲ . ಆಧುನಿಕತೆಯ ಸೋಗಿನಲ್ಲಿ ಮುಂದೆ ಸಾಗುವಾಗ ಜಲ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿರುತ್ತದೆ. ಮಳೆ ನೀರು ಹರಿದು ಹಳ್ಳ ನದಿ ಸಮುದ್ರ ಸೇರುವ ಮೊದಲು ಅಲ್ಲಲ್ಲಿ ಅಲ್ಲಲ್ಲಿ ಇಂಗಿ ಭೂಗರ್ಭಕ್ಕೆ ಸೇರುತ್ತದೆ . ಈಗಾಗಲೇ ತಳ ಮಟ್ಟಕ್ಕೆ ಇಳಿದಿರುವ ಅಂತರ್ಜಲ ಮಟ್ಟವನ್ನು ಏರಿಸುವ ಅನಿವಾರ್ಯತೆ ಇದೆ. ಅರಣ್ಯಕ್ಕೂ ಮಳೆಗೂ ಗಳ ಕಂಠಸ್ಯ ಸಂಬಂಧವಿದೆ. ಅರಣ್ಯ ನಾಶಕ್ಕೆ ಕೈ ಹಾಕಿದರೆ ಮಳೆ ನಿಮ್ಮ ಮುಂದೆ ಪ್ರತಿಭಟನೆ ಮಾಡಿತು ಎಚ್ಚರಿಕೆ .ಗಿಡ ನೆಡುವ ನಾಟಕ ಬೇಡ ,ಸಾಕಿ ಬೆಳೆಸಿ .ಮಳೆಯನ್ನು ಆಹ್ವಾನಿಸಿ ನೀರನ್ನು ಇತಿಮಿತಿಯಾಗಿ ಬಳಸಿ, ದುರುಪಯೋಗ ನಿಲ್ಲಿಸಿ ಭೂಗರ್ಭದಲ್ಲಿ ಅಂತರ್ಜಲ ಶೇಖರಿಸಿ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿರುವ ಜೋಸೆಫ್ ಜಿಎಂ ರೆಬೆಲ್ಲೊ ತಿಳಿಸಿದರು .

ವೇದಿಕೆಯಲ್ಲಿ ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ರೊನಾಲ್ಡ್ ಡಿ ಅಲ್ಮೇಡ , ನವಚೇತನ ಯುವ ಯುವತಿ ಮಂಡಲ ಅಧ್ಯಕ್ಷೆ ಶಾಲಿನಿ ಸುರೇಶ್ , ಸಂಸ್ಥೆಯ ಕಾರ್ಯದರ್ಶಿ ಜೇಸಿ ರಾಘವೇಂದ್ರ ಮತ್ತು ಕಾರ್ಯಕ್ರಮದ ನಿರ್ದೇಶಕ ಜೇಸಿ ಸುಪ್ರೀತ್ ಕುಮಾರ್ ಉಪಸ್ಥಿತರಿದ್ದರು .

ಉದ್ಯಾವರ ಕುತ್ಪಾಡಿ ಪರಿಸರದ ನೂರ ಐವತ್ತಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here