Wednesday 14th, May 2025
canara news

ಕುಂದಾಪುರ ರೋಜರಿ ಇಗರ್ಜಿಯಲ್ಲಿ ಕೈಸ್ತ ಶಿಕ್ಶಣದ ದಿವಸದ ಆಚರಣೆ

Published On : 26 Feb 2018   |  Reported By : Bernard Dcosta


ಕುಂದಾಪುರ, ಫೆ.26: ‘ನಾವು ಮಕ್ಕಳಿರುವಾಗಲೆ ಉತ್ತಮ ಗುಣ ಮತ್ತು ಉತ್ತಮ ನೀತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದು ನಮ್ಮ ಜೀವನದ ಕೊನೆ ತನಕ ನಮ್ಮೊಟ್ಟಿಗೆ ಉಳಿಯುತ್ತದೆ, ಬಹುಮಾನಗಳು, ಪ್ರಶಸ್ತಿಪತ್ರಗಳು, ಕೊಡುಗೆಗಳು ನಿಮ್ಮ ಜೊತೆ ಸದಾಕಾಲವೂ ಉಳಿಯುವುದಿಲ್ಲಾ, ನಮ್ಮ ಮಕ್ಕಳು ಗುಣ ಸಂಪನ್ನರಾಗ ಬೇಕು, ಅವಾಗಲೇ ನಮ್ಮ ಮಕ್ಕಳು ನಮಗೆ ನಿಜವಾದವಾದ ಸಂಪತ್ತಾಗಿ ಮಾರ್ಪಡುಗೊಳ್ಳುತ್ತವೆ, ಆವಾಗ ದೇವರು ನಮಗೆ ಆಶೀರ್ವದಿಸುತ್ತಾರೆ, ಹಾಗಾಗಿ ಮತ್ತು ಉತ್ತಮ ನಾಗರಿಕರಾಗಲು ನಮ್ಮ ಮಕ್ಕಳಿಗೆ ಕ್ರೈಸ್ತ ನೀತಿ ಶಿಕ್ಷಣ ಅಗತ್ಯವಾಗಿದೆ’ ಎಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಸಂದೇಶ ನೀಡಿದರು. ಅವರು ಇಗರ್ಜಿಯ ಸಭಾ ಭವನದಲ್ಲಿ ನೆಡೆದ ಕೈಸ್ತ ಶಿಕ್ಶಣದ ದಿವಸದ ಆಚರಣೆಯಣೆ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

 

 

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಧರ್ಮ ಭಗಿನಿ ವಾಯ್ಲೆಟ್ ತಾವ್ರೊ ತಾವ್ರೊ ‘ನಾವು ಮಕ್ಕಳನ್ನು ಉತ್ತಮವಾದ ಶಾಲೆಗಳನ್ನು ಆಯ್ಕೆ ಮಾಡಿ ಕಲಿಯಲು ಕಳುಹಿಸುತ್ತೆವೆ, ಹಾಗೇ ಉತ್ತಮ ನೆಡೆತೆ, ಗುಣ ಸಂಪನ್ನರಾಗಲೂ, ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆಯೆಂದು’ ತಿಳಿಸಿ ಶುಭಾಷಯ ಕೋರಿದರು.

ಧರ್ಮಗುರು ವ| ಪ್ರವೀಣ್ ಅಮ್ರತ್ ಮಾರ್ಟಿಸ್, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕ್ರಿಸ್ತಿ ಶಿಕ್ಷಣದ ಶಿಕ್ಷರ ಸಂಚಾಲಕಿ ಶ್ರೀಮತಿ ಶಾಂತಿ ಬಾರೆಟ್ಟೊ, ಒಂದನೇ ತರಗತಿಯಿಂದ ಪಿ.ಯು.ಸಿ. ವರೆಗಿನ ಮಕ್ಕಳಿಗೆ ಕ್ರಿಸ್ತಿ ಮೌಲ್ಯಾಧರಿತ ಶಿಕ್ಷಣದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನಗಳನ್ನು ಹಂಚಿದರು ನೈತಿಕ ಶಿಕ್ಷಣ ನೀಡುವ ಶಿಕ್ಷರನ್ನು ಗೌರವಿಸಲಾಯಿತು. ಎಲ್ಲಾ ಕ್ಲಾಸಿನ ಮಕ್ಕಳಿಂದ ನ್ರತ್ಯ, ಪ್ರಹಸನ ಮತ್ತು ಗಾಯನ ಮುಂತಾದ ಕಾರ್ಯಕ್ರಮಗಳು ನೆಡೆದವು. ವಿಧ್ಯಾರ್ಥಿಗಳಾದ ಸಿಂಡಿ ಮರಿಯಾ ರೆಬೆಲ್ಲೊ ಸ್ವಾಗತಿಸಿದರು, ಜಾಸ್ನಿ ಆಲ್ಮೇಡಾ ಧನ್ಯವಾದಗಳನ್ನು ಅರ್ಪಿಸಿದರು, ಮೆಲ್ಕಮ್ ಫೆರ್ನಾಂಡಿಸ್, ಪ್ರಿಯೇಲ್ ಡಿಸೋಜಾ ಮತ್ತು ಸೋಹನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here