Wednesday 14th, May 2025
canara news

ಪ್ರತಿಷ್ಠಿತ ದ ಪೀಪಲ್'ಸ್ ಆರ್ಟ್ ಸೆಂಟರ್ ಮುಂಬಯಿ ಆರನೇ ವಾರ್ಷಿಕ ಸಂಭ್ರಮ

Published On : 27 Feb 2018   |  Reported By : Rons Bantwal


ತುಳು ಕನ್ನಡಿಗರಿಗೆ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ' ಪ್ರದಾನ

(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ಫೆ.27: ದ ಪೀಪಲ್'ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಆರನೇ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018' ಪ್ರದಾನ ಸಮಾರಂಭ ಇಂದಿಲ್ಲಿ ಆದಿತ್ಯವಾರ ಸಂಜೆ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ ಪ್ರದಾನಿಸಲ್ಪಟ್ಟಿತು. ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಮರಾಠಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ದತ್ತಾ, ಗೌರವ ಅತಿಥಿüಗಳಾಗಿ ಡಾ| ಸಂದೇಶ್ ಎಂ.ವಾಘ್ ಉಪಸ್ಥಿತರಿದ್ದು ಪೀಪಲ್'ಸ್ ಆರ್ಟ್ ಸ್ಮರಣಿಕೆ ಬಿಡುಗಡೆ ಗೊಳಿಸಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯರುಗಳಾದ ಡಾ| ಸುರೇಶ್ ಎಸ್.ರಾವ್ ಕಟೀಲು (ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷರು), ನ್ಯಾ| ರೋಹಿಣಿ ಜೆ.ಸಾಲ್ಯಾನ್ (ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ), ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಒಕ್ಕಲಿಗ ಸಮೂದಾಯ ಮುಂಬಯಿ ಇದರ ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರಂಗಪ್ಪ ಸಿ.ಗೌಡ ಹಾಗೂ ಉದ್ಯಮಿಗಳಾದ ಸಾಬು ಡೇನಿಯಲ್, ಕೆ.ಶ್ರೀನಿವಾಸನ್, ವೇಣು ಪಿ.ನಾಯರ್, ಎಂ.ಜಿ ಅರವಿಂದಕ್ಷನ್ ಮೆನನ್, ಟಿ.ಗಣಪತಿ, ಪ್ರಕಾಶ್ ಮೆನನ್, ಅಪ್ಪ ದುರೈ ಇವರಿಗೆ ಅತಿಥಿüಗಳು `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018' ಪ್ರದಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕೆ.ರಾಜೇ ಗೌಡ, ಜಯರಾಮ ಶೆಟ್ಟಿ, ಪಿ.ಡಿ ಶೆಟ್ಟಿ, ಪದ್ಮನಾಭ ಸಸಿಹಿತ್ಲು, ಜಿತೇಶ್ ಗೌಡ ಮತ್ತಿತರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ನಾಗೇಶ್‍ಕುಮಾರ್ ಸುರ್ವೆ ಮತ್ತು ಕು| ರೂಪಾಲಿ ಸುರ್ವೆ ವಿಸ್ಹಿಲ್ ಸಂಗೀತವನ್ನಿತ್ತರು. ಆರ್ಟ್ ಸೆಂಟರ್‍ನ ಮುಖ್ಯಸ್ಥ ಗೋಪಾಲಕೃಷ್ಣ ಪಿಳ್ಳೆ ಸ್ವಾಗತಿಸಿದರು. ನಿಹಾ ರಿಖಾ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here