Wednesday 14th, May 2025
canara news

ಪ್ರಥಮ ವರ್ಷದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

Published On : 27 Feb 2018   |  Reported By : Rons Bantwal


ಕ್ರೀಡಾಸ್ಫೂರ್ತಿಯಿಂದ, ಸೌಹಾರ್ದಯುತವಾಗಿ, ಗರಿಷ್ಟ ಮುಂಜಾಗರೂಕತೆ ವ್ಯವಸ್ಥೆಗಳಿಂದ ಕ್ರೀಡಾಳುಗಳು ಸ್ಫರ್ಧೆಗಳಲ್ಲಿ ಭಾಗವಹಿಸಿದಾಗ ಸ್ಫರ್ಧಾ ಕಾರ್ಯಕ್ರಮವು, ಸ್ಫರ್ಧೆಯೂ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ತಿಳಿಸಿದರು.

ಮಿಥಿಲಾನಗರ ಸ್ಫೋಟ್ರ್ಸ್ ಕ್ಲಬ್ ವತಿಯಿಂದ ಧರ್ಮಸ್ಥಳ ಗ್ರಾಮದ ಮಿಥಿಲಾ ನಗರದಲ್ಲಿ ನಡೆದ ಪ್ರಥಮ ವರ್ಷದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಅವರು ಕ್ರೀಡಾಳುಗಳಿಗೆ ಸ್ಫೂರ್ತಿಯ ಮಾತುಗಳನ್ನಾಡುವುದರ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ವಹಿಸಬೇಕಾದ ಮುಂಗಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಚಾರಿ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿಗಳಾದ ಡಾ. ನಾರಾಯಣ ಪ್ರಭು ಕ್ರೀಡೆಯ ಹಿನ್ನೆಲೆಯ ಆರೋಗ್ಯದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಸುರೇಂದ್ರ ಕುಮಾರ್ ಜೈನ್, ವೀರೇಂದ್ರ ಬಲ್ಲಾಳ್, ಸರಸ್ವತಿ, ರಾಜೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here