Wednesday 14th, May 2025
canara news

ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಸಮಾವೇಶ - ಗ್ರಂಥ ಬಿಡುಗಡೆ

Published On : 27 Feb 2018   |  Reported By : Rons Bantwal


ಕೃಷಿಯನ್ನು ಖುಷಿಯಾಗಿಸಿಬೆಳೆಸುವರ ಅಗತ್ಯವಿದೆ : ತಾಳ್ತಜೆ ವಸಂತ ಕುಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.27: ಕೃಷಿ ಬೆಳಸಲು ನಿರ್ಧಿಷ್ಟ ವರ್ಗ ಅಥವಾ ಪಾಂಡಿತ್ಯದ ಅವಶ್ಯಕತೆನೂ ಬೇಕಾಗಿಲ್ಲ. ಕೃಷಿಗೆ ಖುಷಿಯಾಗಿ ಬೆಳೆಸುವ ಮನಸ್ಸುಗಳ ಅಗವ್ಯವಿದೆ. ಕೃಷಿ ಲಾಭದಾಯಕ ಬೆಳೆಯಾಗಿದ್ದರೂ ಅದರ ಪೆÇೀಷಣಾ ನಿರ್ಲಕ್ಷತನದಿಂದ ಮಹತ್ವ ಕಳಕೊಂಡಿದೆ. ಆದಾಯಕ್ಕಿಂತ ವಸ್ತು ನಿಷ್ಠೆಯಿಂದ ಕೃಷಿಯಲ್ಲಿ ತೊಡಗಿಸಿ ಕೊಂಡರೆ ಅಂಗೈಯಲ್ಲಿ ಕೃಷಿಯನ್ನು ಮೇಳೈಸಬಹುದು. ಲಾಭಾಂಶದ ಕೊರತೆಯಿಂದ ಕೃಷಿ ನಾಶದ ಅಂಚಿನಲ್ಲಿದ್ದು ಇಂತಹ ಕೃಷಿ ಪೆÇೀಷಣೆಗೆ ಗುಣಾತ್ಮಕ ರೂಪ ನೀಡುವ ಅಗತ್ಯವಿದೆ. ಇಲ್ಲವೇ ಕೃಷಿ ಕ್ಷೇತ್ರದ ಮಹತ್ವ ಕಡಿಮೆಯಾಗಿ ಮರೆಯಾಗಲಿದೆ. ವೃತ್ತಿಯೊಂದಿಗೆ ಕೃಷಿ ಮಾಡಿದರೆ ಉತ್ಪನ್ನ ಮಟ್ಟ ಉನ್ನತಮಟ್ಟ ತಲುಪಬಹುದು ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥ, ನಾಮಾಂಕಿತ ಕೃಷಿಕ ಡಾ| ತಾಳ್ತಜೆ ವಸಂತ ಕುಮಾರ್ ಅಭಿಪ್ರಾಯ ಪಟ್ಟರು.

ಇಂದಿಲ್ಲಿ ರವಿವಾರ ಸಂಜೆ ಮಾಟುಂಗಾದ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ನಡೆಸದ 9ನೇ ವಾರ್ಷಿಕ ಸಮಾವೇಶದಲ್ಲಿ ಪ್ರದಾನಿಸಿದ `ಕೃಷಿಬಂಧು' ಪುರಸ್ಕಾರ ಸ್ವೀಕರಿಸಿ ಡಾ| ವಸಂತ ಕುಮಾರ್ ಮಾತನಾಡಿದರು.

ಶ್ರೀ ಕೃಷ್ಣವಿಠಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ನ್ಯಾ| ವಿ.ಎಸ್.ಎನ್ ಹೆಬ್ಬಾರ್, ಸಮಾಜ ಸೇವಕ ಮೋಹನ್ ಕುಮಾರ್ ಜೆ.ಗೌಡ, ಉದ್ಯಮಿ ಅನಂತ ಎಸ್.ಪೈ ಮುಲುಂಡ್, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ನ್ಯಾ| ಅಮಿತಾ ಎಸ್. ಭಾಗವತ್, ಸಂಯುಕ್ತ ಕರ್ನಾಟಕ ದೈನಿಕ ಹುಬ್ಬಳ್ಳಿ ಆವೃತ್ತಿ ಸಹಾಯಕ ಸಂಪಾದಕ ಅಜಿತ್ ಘೋರ್ಪಡೆ ಗದಗ ಅತಿಥಿüಗಳಾಗಿ ಉಪಸ್ಥಿತರಿದ್ದರು.

ಸಂಚಾಲಕತ್ವದ `ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಿಲಿ'ಸಂಸ್ಥೆಗೆ `ಚಕ್ರಧಾರಿ ಪ್ರಶಸ್ತಿ' ಪ್ರದಾನಿಸಿದರು. ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಸೇವೆಗೈದ ಶ್ರೇಷ್ಠ ಸಮಾಜ ಸೇವಕ, ಪ್ರಾಚಾರ್ಯ ಪೆÇ್ರ| ವೆಂಕಟೇಶ ಪೈ ಮತ್ತು ವಸುಧಾ ವಿ.ಪೈ `ಚಕ್ರಧಾರಿ ಪ್ರಶಸ್ತಿ' ಸ್ವೀಕರಿಸಿದರು. ಬಳಿಕ ಅತಿಥಿüಗಳು ಪೆÇ್ರ| ವೆಂಕಟೇಶ ಪೈ ಅವರ `ಚೈತನ್ಯದ ಚಿಲುಮೆ' ಅಭಿನಂದನ ಗ್ರಂಥ ಬಿಡುಗಡೆ ಗೊಳಿಸಿ ಅಭಿನಂದಿಸಿದರು.

ವೆಂಕಟೇಶ ಪೈ ಪ್ರಶಸ್ತಿಗೆ ಉತ್ತರಿಸಿ ಮನುಷ್ಯನು ಸ್ವಾವಲಂಬಿಯಾಗಿ ಬಾಳಬೇಕು. ಅವಾಗಲೇ ಮಾನವ ಬದುಕು ಹಸನಾಗುವುದು. ಸ್ವಾವಲಂಭನ ಕೇಂದ್ರದಲ್ಲಿ ದುಡಿಸಿಕೊಳ್ಳುವ ಎಲ್ಲರೂ ಭೇದಬಾವ ಇಲ್ಲದೆ ನಿಷ್ಠಾವಂತ ಸೇವಾಂಕ್ಷಿಗಳಾಗಿ ಶ್ರಮಿಸುತ್ತಿದ್ದಾರೆ. ಇಂತಹ ಸೇವಾ ನೆಮ್ಮದಿಯೇ ಸಮೃದ್ಧಿಯ ಬದುಕಾಗಿದೆ ಎಂದರು.

ಕೃಷಿ ಎಂದರೆ ಸರಹದ್ದು ಇಲ್ಲದ ಕ್ಷೇತ್ರವಾಗಿದೆ. ಹೇಗೆ ವಿದ್ಯೆಗೆ ವಯಸ್ಸಿಲ್ಲವೋ ಅಂತೆಯೇ ಕೃಷಿಗೂ ಅಂಚಿಲ್ಲ. ಹೇಗೆ ವೃತ್ತಿ ಮತ್ತು ಪ್ರವೃತ್ತಿ ಜೀವದ ಎರಡು ಅಕ್ಷಿಗಳಂತೆಯೋ ಕೃಷಿಯೂ ಬದುಕಿನ ಅವಿಭಾಜ್ಯ ಅಂಗದಂತೆ. ಆದುದರಿಂದ ಕೃಷಿ ರಕ್ಷಣೆ ಮತ್ತು ಪೆÇೀಷಣೆ ಎಲ್ಲರ ಹೊಣೆಯಾಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವನಾಥ ಭಟ್ ತಿಳಿಸಿದರು.

ಉಪಸ್ಥಿತರಿದ್ದರು.

ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ವಿದ್ಯಾಥಿರ್üಗಳು ವೈವಿಧ್ಯಮಯ ನೃತ್ಯಾವಳಿ, ಭಾವಗೀತೆ, ಜನಪದ ಗೀತೆ, ಸಮೂಹ ಗಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ವಿೂರಾರೋಡ್‍ನ ರಾಧಾಕೃಷ್ಣ ನೃತ್ಯ ಅಕಾಡೆಮಿ ಕಲಾವಿದರು ಕಾರ್ತಿಕ್ ಸುಬ್ರಹ್ಮಣ್ಯ ಭಟ್ ಮುಂದಾಳುತ್ವದಲ್ಲಿ ನೃತ್ಯಸಿಂಚನ ಪ್ರದರ್ಶಿಸಿದರು.

ಗುರುಮೂರ್ತಿ ಭುವನಗಿರಿ ಪ್ರಾರ್ಥನೆಯನ್ನಾಡಿದರು. ಬಳಿಕ ಸ್ವರ್ಗಸ್ಥ ಬಿ.ಎಸ್ ಕುರ್ಕಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಂಸ್ಕೃತಿಕ ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಅತಿಥಿüಗಳಿಗೆ ಸತ್ಕರಿಸಿದರು. ಹೇಮಾ ಎಸ್.ಅವಿೂನ್ ಸ್ವಾಗತಿಸಿ ಶುಭಸಂದೇಶ ವಾಚಿಸಿದರು. ಕೋಶಾಧಿಕಾರಿ ಪದ್ಮನಾಭ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರತಿಭಾ ವೈದ್ಯ ಮತ್ತು ಶಾರದಾ ಅಂಬೆಸಂಗೆ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ತನುಜಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾಜೇಶ್ ಪಿ.ಗೌಡ ವಂದನಾರ್ಪಣೆಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here