Wednesday 14th, May 2025
canara news

ಸಂತಾಪ ಸಂದೇಶ

Published On : 01 Mar 2018   |  Reported By : Rons Bantwal


ಧರ್ಮಸ್ಥಳ: ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದ ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಪರಂಧಾಮವನ್ನು ಹೊಂದಿದ ವಿಚಾರ ತಿಳಿದು ವಿಷಾದವಾಯಿತು.

1974 ರಲ್ಲಿ ಪೂಜ್ಯರು ಧರ್ಮಸ್ಥಳ ಕ್ಷೇತ್ರಕ್ಕೆ ಅವರು ಪಾದಚಾರಿಗಳಾಗಿಯೇ ಬಂದಿದ್ದರು. ರಾಷ್ಟ್ರದ ಅತ್ಯುನ್ನತ ಗೌರವದ ಸ್ಥಾನವಾದ ಕಂಚಿ ಕಾಮಕೋಟಿ ಪೀಠದಲ್ಲಿದ್ದರೂ, ಪೂಜ್ಯರು ಭಕ್ತರೊಂದಿಗೆ ಸರಳತೆಯೊಂದಿಗೆ ಬೆರೆಯುವ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದರು.

ಅವರು ಧರ್ಮಸ್ಥಳಕ್ಕೆ ಬಂದಾಗ ತಮಿಳುನಾಡಿನ ಆನಂದ ವಿಗಟನ್ ಎಂಬ ಪ್ರಸಿದ್ಧ ಪತ್ರಿಕೆಯ ಸಂಪಾದಕರನ್ನೂ ಕರೆದುಕೊಂಡು ಬಂದು ಧರ್ಮಸ್ಥಳ ಮತ್ತು ಕರ್ನಾಟಕದ ಪವಿತ್ರ ಕ್ಷೇತ್ರಗಳನ್ನು ತಮಿಳುನಾಡಿನ ಜನರಿಗೆ ಪರಿಚಯಿಸಿದರು.

ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಾಲಯಗಳಿಗೆ ತಮಿಳುನಾಡಿನ ಭಕ್ತರು ಬರುತ್ತಿದ್ದಾರೆ. ಪೂಜ್ಯರು ಸಂಸ್ಕøತ ವಿದ್ಯಾಪೀಠವನ್ನು ನಿರ್ವಹಿಸಿ ಸಂಸ್ಕøತ ಭಾಷೆ ಮತ್ತು ಸಾಹಿತ್ಯದ ಪ್ರಸಾರಕ್ಕೂ ಅಮೂಲ್ಯ ಕೊಡುಗೆ ನೀಡಿ ಸದಾ ಸ್ಮರಣೀಯರಾಗಿದ್ದಾರೆ. ತಮ್ಮ ದಿವ್ಯ ಉಪದೇಶ ಹಾಗೂ ಆಧ್ಯಾತ್ಮಿಕ ಸಂದೇಶದೊಂದಿಗೆ ಧರ್ಮ ಜಾಗೃತಿಯನ್ನುಂಟು ಮಾಡಿದ್ದಾರೆ. ಡಿ. ವೀರೇಂದ್ರ ಹೆಗ್ಗಡೆಯವರು

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here